Raghavendra Swamy: ಭಕ್ತಿ ನಿಷ್ಠೆಯಿಂದ ಗುರುರಾಯರ ಆರಾಧನೆ ಮಾಡಿದರೆ ಯಾವೆಲ್ಲಾ ಫಲ ಪ್ರಾಪ್ತಿಯಾಗುತ್ತೆ ಗೊತ್ತಾ?

0 22

Raghavendra Swamy: ನಮ್ಮ ಹಿಂದೂ ಸಂಪ್ರದಾಯ ಪಾಲಿಸುವ ಮನೆಗಳಲ್ಲಿ ಬಹಳಷ್ಟು ಜನ ರಾಘವೇಂದ್ರ ಸ್ವಾಮಿಗಳನ್ನು ಆರಾಧಿಸುವ, ಪೂಜಿಸುವ ಭಕ್ತರು ಇದ್ದೇ ಇರುತ್ತದೆ. ಇವರು ಬಹಳಷ್ಟು ಜನರ ಶಕ್ತಿ, ಭಕ್ತಿಯಾಗಿದ್ದಾರೆ. ರಾಯರ ಪೂಜೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿರುವ ಪೂಜೆಗಳಲ್ಲಿ ಮುಖ್ಯ ಸ್ಥಾನದಲ್ಲಿದೆ ಎಂದರೆ ತಪ್ಪಲ್ಲ. ರಾಯರ ಪೂಜೆ ಮಾಡುವುದರಿಂದ ನಿಮಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

*ರಾಘವೇಂದ್ರ ಸ್ವಾಮಿಗಳನ್ನು ಶ್ರದ್ಧೆಯಿಂದ ಭಕ್ತಿಯಿಂದ ಪೂಜಿಸಿ, ನಿಷ್ಠೆಯಿಂದ ಧ್ಯಾನಿಸಿದರೆ, ಅವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ. ಜೊತೆಗೆ ನಿಮ್ಮ ಬದುಕಿನಲ್ಲಿ ಸಮೃದ್ಧಿ ನೆಲೆಸುತ್ತದೆ.
*ರಾಯರ ಪೂಜೆ ವೇಳೆ ಹೂವು ಮತ್ತು ಹಣ್ಣುಗಳನ್ನು ಅರ್ಪಿಸಿ ಭಕ್ತಿಯಿಂದ ಪೂಜೆ ಮಾಡಿದರೆ, ನಿಮ್ಮ ಬದುಕಿನಲ್ಲಿ ಬರುವಂಥ ಎಲ್ಲಾ ಕಷ್ಟಗಳು ಮಾಯವಾಗುತ್ತದೆ. ನಿಮ್ಮಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಬಲ್ಲವರು ಹೇಳುತ್ತಾರೆ.

*ರಾಯರ ಪೂಜೆಗೆಂದು ವಿಶೇಷವಾಗಿ ವೀಳ್ಯದ ಎಲೆ ಮತ್ತು ತೆಂಗಿನಕಾಯಿಯನ್ನು ಹಾಗೂ ಕರ್ಪೂರವನ್ನು ಕೂಡ ಪೂಜೆಗೆ ಅರ್ಪಿಸಬಹುದು..
*ರಾಯರಿಗಾಗಿ ಪೂಜೆಯ ವೇಳೆ ಬೇರೆ ಬೇರೆ ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಬಹುದು. ಇದರಿಂದ ನಿಮ್ಮ ಎಲ್ಲಾ ಆಸೆಗಳು, ಇಷ್ಟಗಳು ನೆರವೇರುತ್ತದೆ.
*ರಾಯರ ವಾರ ಎಂದರೆ ವಿಶೇಷವಾಗಿ ಗುರುವಾರ ಆಗಿರುತ್ತದೆ. ಈ ದಿವಸ ನೀವು ರಾಯರ ಪೂಜೆ ಮಾಡಿದರೆ, ಆಶೀರ್ವಾದ ದುಪ್ಪಟ್ಟು ಆಗುತ್ತದೆ ಎನ್ನಲಾಗಿದೆ.

*ರಾಯರನ್ನು ನಂಬಿ, ಅವರ ಪವಾಡಗಳ ಮೇಲೆ ನಂಬಿಕೆ ಇಟ್ಟು ಭಕ್ತಿಯಿಂದ ರಾಯರನು ಪೂಜೆ ಮಾಡಿದರೆ, ಒಬ್ಬ ವ್ಯಕ್ತಿಯ ಬದುಕಿನ ಎಲ್ಲಾ ಸಮಸ್ಯೆಗಳು ಮಂಜಿನ ಹಾಗೆ ಕರಗಿ ಹೋಗುತ್ತದೆ ಎಂದು ಹೇಳುತ್ತಾರೆ.
ನೀವು ಸಹ ರಾಯರ ಭಕ್ತರಾದರೆ, ಈ ದಿನ ತಪ್ಪಿಸದೇ ರಾಯರ ಪೂಜೆ ಮಾಡಿ. ರಾಯರ ಮಠಕ್ಕೆ ಹೋಗಿ ರಾಯರ ದರ್ಶನ ಪಡೆಯಿರಿ, ಬದುಕಿನಲ್ಲಿ ನೆಮ್ಮದಿ ನಿಮ್ಮ ಜೊತೆಯಲ್ಲಿ ಯಾವಾಗಲೂ ಇರುತ್ತದೆ.

Leave A Reply

Your email address will not be published.