Beauty Tips: ಪ್ರತಿದಿನ ಮುಖಕ್ಕೆ ಅರಿಶಿನದ ಫೇಸ್ ಪ್ಯಾಕ್ ಹಾಕಿದ್ರೆ ನಿಮ್ಮ ಬ್ಯೂಟಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ?

0 21

Beauty Tips: ನಮ್ಮ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಯಾವುದೇ ಕೆಮಿಕಲ್ ಮಿಶ್ರಿತ ಕ್ರೀಮ್ ಗಳನ್ನು ಅಥವಾ ಇನ್ಯಾವುದೇ ವಸ್ತುಗಳನ್ನು ಬಳಸುವ ಅವಶ್ಯಕತೆ ಇಲ್ಲ. ನೈವೆರ್ಗಿಕವಾಗಿ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ನಮ್ಮ ತ್ವಚೆ ಕಾಂತಿಯುಕ್ತವಾಗುವ ಹಾಗೆ ಮಾಡಬಹುದು. ಇಂದು ನಾವು ಮುಖಕ್ಕೆ ಅರಿಶಿನ ಹಚ್ಚುವುದರಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಯೋಣ..

*ಅರಿಶಿನದಲ್ಲಿ ಮುಖ್ಯವಾಗಿ ಕರ್ಕ್ಯುಮಿನ್ ಅಂಶ ಇರುತ್ತದೆ. ಈ ಒಂದು ಅಂಶ ಇರುವ ಕಾರಣ ತ್ವಚೆಯಲ್ಲಿ ಯಾವುದೇ ವೈಹರದ ಉರಿ, ತ್ವಚೆ ಕೆಂಪಾಗುವುದು, ಇದೆಲ್ಲವೂ ಕಡಿಮೆ ಆಗುತ್ತದೆ. ಅಷ್ಟೇ ಅಲ್ಲ ಸೆನ್ಸಿಟಿವ್ ಸ್ಕಿನ್ ಇರುವವರಿಗೆ ಅರಿಶಿನ ಒಳ್ಳೆಯದು, ಪಿಂಪಲ್ ಆಗುವುದನ್ನು ಕಡಿಮೆ ಮಾಡುತ್ತದೆ.
*ಅರಿಶಿನದ ನೈಸರ್ಗಿಕವಾಗಿ ಉತ್ಕರ್ಷಣ ಗುಣವಿದೆ. ವಯಸ್ಸಾದ ಹಾಗೆ ಮುಖದ ಮೂಡುವ ಸುಕ್ಕು, ಫ್ರೀ ರಾಡಿಕಲ್ಸ್ ಗಳನ್ನು ಕಡಿಮೆ ಮಾಡುತ್ತದೆ..

*ಅರಿಶಿನದ ಮತ್ತೊಂದು ವಿಶೇಷತೆ ಏನು ಎಂದರೆ, ಇದು ಆಯ್ಲಿ ಸ್ಕಿನ್ ಇರುವವರಿಗೆ ತುಂಬಾ ಉಪಯುಕ್ತಕಾರಿ, ನಿಮ್ಮ ಸ್ಕಿನ್ ಆಯ್ಲ್ ಇಂದ ದೂರ ಇರುವ ಹಾಗೆ ನೋಡಿಕೊಳ್ಳುತ್ತದೆ.
*ಅರಿಶಿನ ದೇಹದಲ್ಲಿರುವ ನಂಜನ್ನು ತಡೆಗಟ್ಟುವ ನಿರೋಧಕವಾಗಿಯೂ ಕೆಲಸ ಮಾಡುತ್ತದೆ.
*ಅರಿಶಿನವನ್ನು ಆಲಿವ್ ಆಯ್ಲ್ ಜೊತೆಗೆ ಬೆರೆಸಿ ನಿಮಗೆ ಎಲ್ಲೆಲ್ಲಾ ಸ್ಟ್ರೆಚ್ ಮಾರ್ಕ್ಸ್ ಇದೆಯೋ ಅಲ್ಲಿ ಹಚ್ಚಿದರೆ, ಸ್ಟ್ರೆಚ್ ಮಾರ್ಕ್ಸ್ ಗಳು ದೂರವಾಗುತ್ತದೆ..ಈ ಪ್ರಯೋಜನ ಹೆಣ್ಣು ಮಕ್ಕಳಿಗೆ ಹೆಚ್ಚು ಅನುಕೂಲ ಎಂದರೆ ತಪ್ಪಲ್ಲ.

*ಅರಿಶಿನದಲ್ಲಿ ಕರ್ಕ್ಯುಮಿನ್, ಮೆಲನಿನ್ ಉತ್ಪಾದನೆ ಇರುತ್ತದೆ, ಈ ಅಂಶಗಳು ಇರುವ ಕಾರಣ ಮುಖದಲ್ಲಿ ಮೂಡುವ ಕಪ್ಪು ಕಲೆಗಳನ್ನು ನಿವಾರಣೆ ಮಾಡುತ್ತದೆ. ಹಾಗೆಯೇ ಸ್ಕಿನ್ ಟೋನ್ ಚೆನ್ನಾಗಿರುವ ಹಾಗೆ ಮಾಡುತ್ತದೆ.
*ಅಪಾಯಕಾರಿ UV Rays ಇಂದ ನಿಮ್ಮ ತ್ವಚೆಯನ್ನು ರಕ್ಷಿಸುತ್ತದೆ ಅರಿಶಿನ. ನಿಮ್ಮ ಸ್ಕಿನ್ ಯಾವಾಗಲೂ smooth ಆಗಿ, ನೈಸರ್ಗಿಕವಾಗಿ ಇರುವ ಹಾಗೆ ನೋಡಿಕೊಳ್ಳುತ್ತದೆ.
*ಅರಿಶಿನದ ಜೊತೆಗೆ ಹಸಿಯಾದ ಹಾಲು, ಅಥವಾ ನೀರು ಬೆರೆಸಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಒಣಗಿದ ಬಳಿಕ ವಾಶ್ ಮಾಡಿದರೆ, ಮುಖದ ಮೇಲೆ ಕೂದಲು ಬರುವುದು ಕಡಿಮೆ ಆಗುತ್ತದೆ.

Leave A Reply

Your email address will not be published.