Shani Transit: ಶನಿದೇವರು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಎನ್ನುವ ವಿಷಯ ಗೊತ್ತೇ ಇದೆ. ಶನಿದೇವರು ಕರ್ಮಫಲದಾತ ಕೂಡ ಹೌದು, ಒಳ್ಳೆಯ ಕಾರ್ಯ ಮಾಡುವವರಿಗೆ ಒಳ್ಳೆಯಫಲ, ಕೆಟ್ಟ ಕಾರ್ಯ ಮಾಡುವವರಿಗೆ ಅಶುಭ ಫಲ ಶನಿದೇವರಿಂದ ಸಿಗುತ್ತದೆ. ಶನಿದೇವರ ಸ್ಥಾನ ಬದಲಾವಣೆ ಕೆಲವು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷ ಶನಿದೇವರು ತನ್ನದೇ ರಾಶಿ ಆಗಿರುವ ಕುಂಭ ರಾಶಿಗೆ ಪ್ರವೇಶ ಮಾಡಿದ್ದು, ಈ ರಾಶಿಯಲ್ಲೇ ಇನ್ನು ಎರಡೂವರೆ ವರ್ಷಗಳ ಕಾಲ ಇರಲಿದೆ. ಈ ವೇಳೆ ಶನಿದೇವರಿಂದ ಅದೃಷ್ಟ ಪಡೆಯುವ ಕೆಲವು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಒಳ್ಳೆಯ ಫಲ ಸಿಗುತ್ತದೆ. ಈ ವೇಳೆ ನಿಮ್ಮ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಮನಸ್ಸಿನ ಶಾಂತಿಗೆ ಹೊರಗಡೆ ಹೋಗುವ ಅವಕಾಶ ನಿಮಗೆ ಸಿಗುತ್ತದೆ. ಆಧ್ಯಾತ್ಮದಲ್ಲಿ ನಿಮಗಿರುವ ಆಸಕ್ತಿ ಹೆಚ್ಚಾಗುತ್ತದೆ, ನಿಮ್ಮ ಆದಾಯ ದುಪ್ಪಟ್ಟು ಆಗುತ್ತದೆ. ಈ ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಸ್ಟ್ರಾಂಗ್ ಆಗುತ್ತದೆ.
ತುಲಾ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಈ ವೇಳೆ ನಿಮ್ಮ ಉದ್ಯೋಗದಲ್ಲಿ ಒಳ್ಳೆಯ ಬೆಳವಣಿಗೆ ಕಾಣುತ್ತೀರಿ. ಇನ್ನು ಮದುವೆ ಆಗಿಲ್ಲದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ. ಲವ್ ಲೈಫ್ ನಲ್ಲಿ ಸಕ್ಸಸ್ ಕಾಣುತ್ತೀರಿ. ಈ ವೇಳೆ ನಿಮಗೆ ದಿಢೀರ್ ಧನಲಾಭವಾಗುತ್ತದೆ. ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.
ಕುಂಭ ರಾಶಿ :- ಶನಿದೇವರ ಸಂಚಾರ ಈಗ ನಡೆಯುತ್ತಿರುವುದು ಇದೇ ರಾಶಿಯಲ್ಲಿ, ಮುಂದಿನ ಎರಡು ವರ್ಷಗಳ ಕಾಲ ಶನಿದೇವರಿಂದ ನಿಮಗೆ ಲಾಭ ಸಿಗುತ್ತದೆ. ಕೋರ್ಟ್ ಕೇಸ್ ಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಈ ವೇಳೆ ನಿಮ್ಮ ಸಂಗಾತಿಯ ಬೆಂಬಲ ನಿಮಗೆ ಸಿಗುತ್ತದೆ.