Viral Video: ನಮ್ಮ ದೇಶದಲ್ಲಿ ಐಫೋನ್ ಮೇಲೆ ಎಲ್ಲರಿಗೂ ಒಲವಿದೆ. ಇದು ಒಂದು ರೀತಿ ಸ್ಟೇಟಸ್ ಸಿಂಬಲ್ ಎಂದರೆ ತಪ್ಪಲ್ಲ. ಶ್ರೀಮಂತರು, ಹೆಚ್ಚು ಹಣ ಹೊಂದಿರುವವರು ಐಫೋನ್ ಖರೀದಿ ಮಾಡುತ್ತಾರೆ. ಸಾಮಾನ್ಯ ಜನರಿಗೆ ಐಫೋನ್ ಖರೀದಿ ಮಾಡಬೇಕು ಎನ್ನುವುದು ಒಂದು ರೀತಿ ದೊಡ್ಡ ಕನಸು ಎಂದರೆ ತಪ್ಪಲ್ಲ. ಸಾಮಾನ್ಯ ಜನರು ಲಕ್ಷಗಟ್ಟಲೇ ಹಣವನ್ನು ಒಂದು ಫೋನ್ ಮೇಲೆ ಸುರಿಯುವುದಕ್ಕೆ ಇಷ್ಟ ಪಡುವುದಿಲ್ಲ ಎಂದರೆ ತಪ್ಪಲ್ಲ.
ಐಫೋನ್ ಗಳ ಬೆಲೆ ಅಷ್ಟು ಹೆಚ್ಚು ಇರುವ ಕಾರಣ ಇದನ್ನು ಖರೀದಿ ಮಾಡುವುದೇ ಕಷ್ಟ ಎಂದುಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಭಿಕ್ಷುಕನೊಬ್ಬ ಐಫೋನ್ ಖರೀದಿ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಈ ಒಂದು ವಿಡಿಯೋ ವೈರಲ್ ಆಗಿದೆ. ಈ ಒಬ್ಬ ವ್ಯಕ್ತಿ ಹಳೆಯ ಬಟ್ಟೆ ಧರಿಸಿ, ಗೋಣಿಚೀಲದಲ್ಲಿ ನಾಣ್ಯಗಳನ್ನು ತುಂಬಿಸಿಕೊಂಡು, ಐಫೋನ್ ಖರೀದಿ ಮಾಡಲು ಅಂಗಡಿಗಳಿಗೆ ಹೋಗುವುದನ್ನು ನೋಡಬಹುದು.
ಕೆಲವು ಅಂಗಡಿಗಳು ಅವನನ್ನು ಅಂಗಡಿ ಒಳಗೆ ಸೇರಿಸಿಕೊಳ್ಳುವುದಿಲ್ಲ. ಕೊನೆಗೆ ಒಂದು ಅಂಗಡಿಯಲ್ಲಿ ಈ ವ್ಯಕ್ತಿಯನ್ನು ಒಳಗೆ ಬಿಡುತ್ತಾರೆ. ಈತ ಐಫೋನ್ ಖರೀದಿ ಮಾಡುವುದಕ್ಕೆ ಬಂದಿರುತ್ತಾನೆ. ತನ್ನ ಗೋಣಿಚೀಲದಲ್ಲಿ ಇರುವ ಎಲ್ಲಾ ನಾಣ್ಯಗಳನ್ನು ಕೆಳಗೆ ಹಾಕಿ, ಐಫೋನ್ ತೆಗೆದುಕೊಳ್ಳುವಷ್ಟು ಹಣ ತನ್ನ ಹತ್ತಿರ ಇದೆ ಎನ್ನುವುದನ್ನು, ಕೊನೆಗೆ ಅಂಗಡಿಯ ಮಾಲೀಕರು ಹಣವನ್ನು ಲೆಕ್ಕ ಹಾಕಿ, ಆತನಿಗೆ ಐಫೋನ್ ಕೊಡುತ್ತಾರೆ.
ಆತ ಕೂಡ ಹೊಸ ಐಫೋನ್ ಹಿಡಿದು ಫೋಟೋಗೆ ಪೋಸ್ ನೀಡುತ್ತಾನೆ.. ಪ್ರಸ್ತುತ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಇದು ನಿಜವಲ್ಲ ಸ್ಕ್ರಿಪ್ಟೆಡ್, ಆತ ಭಿಕ್ಷುಕನ ಹಾಗೆ ಕಾಣುವುದಿಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ಇದು ನಿಜವೇ ಇರಬಹುದು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಭಾರಿ ಸದ್ಡು ಮಾಡುತ್ತಿರುವುದಂತೂ ಸುಳ್ಳಲ್ಲ.