Spandana Vijay: ಸ್ಪಂದನಾ ಅವರು ಧರಿಸುತ್ತಿದ್ದ ಸೀರೆ ಒಡವೆಗಳನ್ನು ವಿಜಯ್ ರಾಘವೇಂದ್ರ ಏನು ಮಾಡಿದ್ದಾರೆ ಗೊತ್ತಾ?

0 23

Spandana Vijay: ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ಅವರು ಇಹಲೋಕ ತ್ಯಜಿಸಿ 4 ತಿಂಗಳು ಕಳೆದು ಹೋಗಿದೆ. ವಿಜಯ್ ರಾಘವೇಂದ್ರ ಅವರ ಪ್ರತಿ ಹೆಜ್ಜೆಯಲ್ಲಿ ಜೊತೆಯಾಗಿದ್ದಾ ಸ್ಪಂದನಾ ಅವರನ್ನು ಕಳೆದುಕೊಂಡ ವಿಜಯ್ ಅವರು ಇನ್ನು ಕೂಡ ಆ ನೋವಿನಿಂದ ಹೊರಬಂದಿಲ್ಲ. ಇನ್ನು ಸ್ಪಂದನಾ ಅವರು ಧರಿಸುತ್ತಿದ್ದ ವಸ್ತುಗಳನ್ನು ವಿಜಯ್ ಅವರು ಏನು ಮಾಡಿದ್ದಾರಂತೆ ಗೊತ್ತಾ?

ನಟ ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿಯ ಜೊತೆಗಿರುವ ಫೋಟೋಸ್ ಗಳನ್ನು ಆಗಾಗ ಶೇರ್ ಮಾಡುತ್ತಾರೆ. ಸ್ಪಂದನಾ ಅವರು ಯಾವಾಗಲೂ ತಮ್ಮ ಜೊತೆಗೆ ಇರುತ್ತಾರೆ ಎನ್ನುವುದನ್ನು ವಿಜಯ್ ರಾಘವೇಂದ್ರ ಅವರು ವ್ಯಕ್ತಪಡಿಸುತ್ತಾರೆ. ಆದರೆ ಕೆಲಸಗಳಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ ವಿಜಯ್. ಹಾಗೆಯೇ ಮಗನ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ.

ಅವರ ಸಿನಿಮಾ ಕುರಿತು ಸಂದರ್ಶನಗಳಲ್ಲಿ ಕಾಣಿಸಿಕೊಂಡಾಗ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ವಿಜಯ್ ರಾಘವೇಂದ್ರ ಅವರಿ ಮಾತನಾಡಿದ್ದು, ಸ್ಪಂದನಾ ಅವರ ವಸ್ತುಗಳ ಬಗ್ಗೆ ತಿಳಿಸಿದ್ದಾರೆ ಮ್ ಸ್ಪಂದನಾ ಅವರಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಕಾಪಾಡಿಕೊಂಡು ಬರುತ್ತಿರುವುದಾಗಿಯು, ಯಾವಾಗಲೂ ಅದೇ ರೀತಿ ಕಾಪಾಡುವುದಾಗಿಯೂ ಹೇಳಿದ್ದಾರೆ.

ಇನ್ನು ಸ್ಪಂದನಾ ಅವರ ಸೀರೆಗಳು, ಒಡವೆಗಳ ಬಗ್ಗೆ ಮಾತನಾಡಿ, ಅದೆಲ್ಲವು ಹಾಗೆ ಇದೇ ಅವಳ ಜೊತೆಯಲ್ಲೇ ಇದೆ. ಸೀರೆ ಒಡವೆ ಅದನ್ನೆಲ್ಲಾ ನೋಡಿದಾಗ ಅವಳನ್ನೇ ನೋಡಿದ ಹಾಗೆ ಅನ್ನಿಸುತ್ತದೆ ಎಂದು ಹೇಳಿದ್ದಾರೆ ವಿಜಯ್ ರಾಘವೇಂದ್ರ. ಹಾಗೆಯೇ ಸ್ಪಂದನಾ ಅವರು ತುಂಬಾ ಸರಳ ವ್ಯಕ್ತಿ ಎಂದು ಹೇಳಿದ್ದಾರೆ ವಿಜಯ್ ರಾಘವೇಂದ್ರ.

Leave A Reply

Your email address will not be published.