Umashree: ಪುಟ್ಟಕ್ಕನಾಗಿ ಮಿಂಚುತ್ತಿರುವ ನಟಿ ಉಮಾಶ್ರೀ ಅವರ ವಯಸ್ಸೆಷ್ಟು ಗೊತ್ತಾ?

Written by Pooja Siddaraj

Published on:

Umashree: ನಟಿ ಉಮಾಶ್ರೀ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ಇವರು ರಂಗಭೂಮಿಯ ಪ್ರತಿಭೆ ಆಗಿರುವುದರಿಂದ ಭಾವನೆ, ಹಾವ ಭಾವ, ಅಭಿವ್ಯಕ್ತಿ ಎಲ್ಲದರಲ್ಲೂ ಅತ್ಯುತ್ತಮವಾಗಿರುವ ಇವರು ಕನ್ನಡ ಚಿತ್ರರಂಗ ಕಂಡ ಅದ್ಭುತವಾದ ಪ್ರತಿಭೆ ಎಂದರೆ ತಪ್ಪಾಗುವುದಿಲ್ಲ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಉಮಾಶ್ರೀ ಅವರು ತಮ್ಮ ಕಂಗಳಲ್ಲೇ ವ್ಯಕ್ತಪಡಿಸುವ ಭಾವನೆಗಳು ಅಪ್ರತಿಮವಾದದ್ದು.

ನಟಿ ಉಮಾಶ್ರೀ ಮೇ ೧೦, ೧೯೫೭ರಂದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದರು. ಬಹಳ ಬಡ ಕುಟುಂಬದಲ್ಲಿ ಜನಿಸಿದ್ದ ಉಮಾಶ್ರೀ ಅವರ ಮನೆಯಲ್ಲಿ ದಿನನಿತ್ಯದ ಆಹಾರಕ್ಕೂ ಕಷ್ಟಪಡುವ ಪರಿಸ್ಥಿತಿ ಇತ್ತು. ರಂಗಭೂಮಿಗೆ ಸೇರಿದರೆ ತಿನ್ನಲು ಕೂಡ ಕೊಡುತ್ತಾರೆ ಎಂಬ ಕಾರಣಕ್ಕೆ ರಾಂಗಭೂಮಿಗೆ ಕಾಲಿಟ್ಟವರು ಉಮಾಶ್ರೀ. ಪ್ರೀತಿಸಿ ಮದುವೆಯಾಗಿದ್ದ ಉಮಾಶ್ರೀ ಅವರ ವೈವಾಹಿಕ ಜೀವನ ತುಂಬಾ ದಿನ ಚೆನ್ನಾಗಿರಲಿಲ್ಲ.

ಮಧ್ಯದಲ್ಲಿ ಉಮಾಶ್ರೀ ಅವರನ್ನು ಬಿಟ್ಟು ಹೋದರು ಅವರ ಪತಿ. ಅನಂತರ ಉಮಾಶ್ರೀ ಅವರು ಜೀವನ ನಡೆಸುವ ಸಲುವಾಗಿ ಸಿನಿಮಾ ಸೇರಿದರು. 80ರ ದಶಕದಲ್ಲಿ, ಕಾಶಿನಾಥ್ ಅವರು ನಿರ್ದೇಶನ ಮಾಡಿದ ಅನುಭವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಉಮಾಶ್ರೀ ಅವರು ತಿರುಗಿ ನೋಡಿದ್ದೆ ಇಲ್ಲ. ಅಂದಿನ ಸಮಯದ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಉಮಾಶ್ರೀ ಅವರು ಹಾಸ್ಯ ಪಾತ್ರಗಳಲ್ಲಿ, ಪೋಷಕ ಪಾತ್ರಗಲ್ಲಿ ನಟಿಸುತ್ತಿದ್ದರು.

ಉಮಾಶ್ರೀ ಮತ್ತು ಎನ್. ಎಸ್.ರಾವ್ ಅವರ ಆನ್ ಸ್ಕ್ರೀನ್ ಜೋಡಿ ಬಹಳ ಜನಪ್ರಿಯತೆ ಪಡೆದಿತ್ತು. ಎನ್.ಎಸ್.ರಾವ್ ಅವರ ನಿಧನದ ನಂತರ, ದೊಡ್ಡಣ್ಣ, ಕರಿ ಬಸವಯ್ಯ ಹಾಗೂ ಮುಂತಾದ ಕಲಾವಿದರ ಜೊತೆ ಜೋಡಿಯಾಗಿ ನಟಿಸಿ ಮತ್ತಷ್ಟು ಜನಪ್ರಿಯತೆ ಗಳಿಸಿದರು. ಅನುಭವ, ಮಣ್ಣಿನ ದೋಣಿ, ಪುಟ್ನಂಜ, ಕೋತಿಗಳು ಸಾರ್ ಕೋತಿಗಳು, ಗುಲಾಬಿ ಟಾಕೀಸ್ ಮುಂತಾದವು ಉಮಾಶ್ರೀ ಅವರು ನಟಿಸಿದ ಪ್ರಮುಖ ಸಿನಿಮಾಗಳಲ್ಲಿ ಕೆಲವು. ತಮ್ಮ ನೈಜ ಅಭಿನಯಕ್ಕಾಗಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿದ್ದಾರೆ ಉಮಾಶ್ರೀ.

ಪ್ರಸ್ತುತ ಉಮಾಶ್ರೀ ಅವರು ಜೀಕನ್ನಡ ವಾಹಿನಿಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪುಟ್ಟಕ್ಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರವಾಹಿ ನಮ್ಮ ರಾಜ್ಯದ ನಂಬರ್ 1 ಧಾರವಾಹಿ ಆಗಿದೆ. ಪುಟ್ಟಕ್ಕನಾಗಿ ಕನ್ನಡಿಗರ ಪ್ರೀತಿ ಗಳಿಸಿರುವ ಉಮಾಶ್ರೀ ಅವರ ನಿಜವಾದ ವಯಸ್ಸು 66 ವರ್ಷಗಳು. ಆದರೆ ಈಗಲೂ ಸಹ ಬಹಳ ಆಕ್ಟಿವ್ ಆಗಿದ್ದು, ಉತ್ತಮ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Leave a Comment