Vastu Tips: ಯಾವುದೇ ಕಾರಣಕ್ಕೂ ಚಪ್ಪಲಿಗಳನ್ನು ಮನೆಯ ಈ ಜಾಗದಲ್ಲಿ ಇಡಬೇಡಿ, ಆರ್ಥಿಕ ಸಮಸ್ಯೆ ಉಂಟಾಗಬಹುದು!

0 20

Vastu Tips: ನಮ್ಮ ಧರ್ಮದಲ್ಲಿ ಹಾಗೂ ಶಾಸ್ತ್ರದಲ್ಲಿ ಪಾದರಕ್ಷೆಗಳಿಗೆ ಸಂಬಂಧಿಸಿದ ಹಾಗೆ ಕೆಲವು ನಿಯಮಗಳಿವೆ. ಅವುಗಳನ್ನು ಪಾಲಿಸಿಕೊಂಡು ಬಂದರೆ ನಮ್ಮ ಬದುಕು ಚೆನ್ನಾಗಿರುತ್ತದೆ. ಇಲ್ಲದೇ ಹೋದರೆ ನೀವು ಆರ್ಥಿಕ ಸಮಸ್ಯೆಗಳಿಗೆ ಸಿಲುಕಿಕೊಳ್ಳಬಹುದು. ಹಾಗಾಗಿ ನೀವು ಚಪ್ಪಲಿಗಳ ಬಗ್ಗೆ ಇರುವ ಈ ಕೆಲವು ನಿಯಮಗಳನ್ನು ಪಾಲಿಸಿಕೊಂಡು ಬರುವುದು ಒಳ್ಳೆಯದು. ಅವುಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

ಮನೆಯ ಮೇನ್ ಡೋರ್ :- ನಿಮ್ಮ ಮನೆಯ ಮೇನ್ ಡೋರ್ ಎದುರಲ್ಲಿ ಚಪ್ಪಲಿ ಬಿಡುವುದು ಮಂಗಳಕರವಲ್ಲ, ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಗೆ ಕೂಡ ಕೋಪ ಬರುತ್ತದೆ. ಹಾಗಾಗಿ ನೀವು ಮನೆಯ ಮೇನ್ ಡೋರ್ ಬಳಿ ಚಪ್ಪಲಿ ಬಿಡಬಾರದು. ಇದರಿಂದ ಆರ್ಥಿಕವಾಗಿ ಸಂಕಷ್ಟಕ್ಕೂ ಸಿಲುಕಿಕೊಳ್ಳಬಹುದು.

ದೇವರ ಮನೆ :- ಇದು ಮನೆಯ ಆತ್ಯಂತ ಪವಿತ್ರವಾದ ಸ್ಥಳ, ದೇವರುಗಳು ನೆಲೆಸುವ ಸ್ಥಳ, ಹಾಗಾಗಿ ಇಲ್ಲಿ ಯಾವುದೇ ಕಾರಣಕ್ಕೂ ಚಪ್ಪಲಿ ಧರಿಸಿ ಓಡಾಡಬಾರದು. ಚಪ್ಪಲಿಯನ್ನು ಈ ಜಾಗದಲ್ಲಿ ಬಿಡುವುದು ಕೂಡ ಒಳ್ಳೆಯದಲ್ಲ. ಈ ನಿಯಮವನ್ನು ನೆನಪಿನಲ್ಲಿ ಇಡಿ.

ಅಡುಗೆ ಮನೆ :- ಅಡುಗೆ ಮಾಡುವ ಸ್ಥಳ ಹಾಗೆಯೇ ಅಡುಗೆ ಮನೆಯ ಹತ್ತಿರ ಚಪ್ಪಲಿ ಧರಿಸಿಕೊಂಡು ಓಡಾಡಬಾರದು, ಇಲ್ಲಿ ಚಪ್ಪಲಿಯನ್ನು ಕೂಡ ಬಿಡಬಾರದು. ಅಡುಗೆ ಮನೆ ತಾಯಿ ಅನ್ನಪೂರ್ಣೇಶ್ವರಿಯ ಸ್ಥಾನ, ಹಾಗಾಗಿ ಈ ಜಾಗದಲ್ಲಿ ಚಪ್ಪಲಿ ಬಿಡುವುದರಿಂದ ಆ ತಾಯಿಗೆ ಕೋಪ ಬರಬಹುದು. ಹಾಗಾಗಿ ಇಲ್ಲಿ ಚಪ್ಪಲಿ ಬಿಡಬೇಡಿ.

ವಾರ್ಡ್ರೋಬ್ :- ಮನೆಯ ವಾರ್ಡ್ರೋಬ್ ಗಳಲ್ಲಿ ಲಕ್ಷ್ಮೀದೇವಿಯನ್ನು ಇಟ್ಟಿರುತ್ತೀರಿ. ಲಕ್ಷ್ಮಿ ಮತ್ತು ಕುಬೇರ ನೆಲೆಸುವ ಸ್ಥಾನವಿದು. ಹಾಗಾಗಿ ಇಲ್ಲಿ ನೀವು ಚಪ್ಪಲಿಯನ್ನು ಬಿಡಬಾರದು. ಚಪ್ಪಲಿ ಧರಿಸಿ ಓಡಾಡಬಾರದು.

ತುಳಸಿ ಗಿಡ :- ತುಳಸಿ ಅತ್ಯಂತ ಪವಿತ್ರವಾದ ಗಿಡ, ಪೂಜೆ ಮಾಡುವ ತುಳಸಿ ಗಿಡದ ಬಳಿ ಚಪ್ಪಲಿ ಧರಿಸಿ ಓಡಾಡಬಾರದು. ವಿಶೇಷವಾಗಿ ಸಂಜೆಯ ವೇಳೆ ಈ ರೀತಿ ಮಾಡಬಾರದು. ಈ ರೀತಿ ಮಾಡಿದರೆ ನೀವು ಬಡತನಕ್ಕೆ ಸಿಲುಕಿಕೊಳ್ಳಬಹುದು.

ಬೆಡ್ ರೂಮ್ :- ನೀವು ಸುಖವಾಗಿ ನಿದ್ದೆ ಮಾಡುವ ಬೆಡ್ ರೂಮ್ ನಲ್ಲಿ ಚಪ್ಪಲಿ ಶೂಗಳನ್ನು ಬಿಡಬಾರದು, ಇದರಿಂದ ದಾಂಪತ್ಯ ಜೀವನದಲ್ಲಿ ತೊಂದರೆ ಉಂಟಾಗಬಹುದು. ಹಾಗಾಗಿ ಈ ರೀತಿ ಮಾಡಬೇಡಿ.

Leave A Reply

Your email address will not be published.