Vastu Tips: ದೇವರ ಪೂಜೆ ನಂತರ ಅರ್ಪಿಸಿದ ಹೂವುಗಳನ್ನು ಏನು ಮಾಡಬೇಕು?

0 35

Vastu Tips: ನಮ್ಮ ಹಿಂದು ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವವಿದೆ. ಒಂದೊಂದು ಕಡೆ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡುತ್ತಾರೆ, ವಿವಿಧ ಪದ್ಧತಿಗಳನ್ನು ಆಚರಿಸುತ್ತಾರೆ. ಆದರೆ ಎಲ್ಲಾ ಕಡೆ ಇರುವ ಭಕ್ತಿ ಒಂದೇ. ದೇವರ ಪೂಜೆ ವಿಚಾರದಲ್ಲಿ ಮುಖ್ಯವಾಗಿ ನಾವೆಲ್ಲರೂ ನೋಡುವುದು ಹೂವು, ಹೂವಿಲ್ಲದೇ ದೇವರ ಪೂಜೆ ಅಪೂರ್ಣ ಎಂದು ಹೇಳಿದರು ತಪ್ಪಲ್ಲ. ಹಲವು ಹೂವುಗಳನ್ನು ದೇವರಿಗೆ ಅರ್ಪಿಸಿ ಪೂಜೆ ಮಾಡುತ್ತೇವೆ..

ದೇವರ ಪೂಜೆ ಮಾಡಿದ ನಂತರ ಈ ಹೂವುಗಳನ್ನು ಏನು ಮಾಡಬೇಕು? ಕೆಲವರು ಹಾಗೆಯೇ ಬಿಟ್ಟುಬಿಡುತ್ತಾರೆ, ಇನ್ನು ಕೆಲವರು ಹೇಗೆಂದರೆ ಹಾಗೆ ಬಿಸಾಕುತ್ತಾರೆ. ಆದರೆ ಪೂಜೆ ಮಾಡಿದ ಬಳಿಕ ಹೂವನ್ನು ಆ ರೀತಿ ಮಾಡಬಾರದು. ಪೂಜೆಯಾದ ನಂತರ ಬಳಸಿದ ಹೂವನ್ನು ಹಾಗೆಯೇ ಮನೆಯಲ್ಲೇ ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಹಾಗಾಗಿ ದೇವರಿಗೆ ಅರ್ಪಿಸಿದ ಹೂವನ್ನು, ಪೂಜೆಯಾಗಿ ಅದು ಬಾಡಿದ ನಂತರ ಈ ರೀತಿ ಮಾಡಿ..

ದೇವರಿಗೆ ಅರ್ಪಿಸಿದ ಹೂವುಗಳನ್ನು ಬಾವಿಗೆ ಹಾಕಿ, ಅಥವಾ ಮರದ ಮೇಲೆ ಇಟ್ಟುಬಿಡಿ. ಇನ್ನೆಲ್ಲು ಬಿಸಾಡಬೇಡಿ, ಹಾಗೆಯೇ ಪೂಜೆ ವೇಳೆ ಅಗರಬತ್ತಿ ಬಳಸುತ್ತೇವೆ, ಅವುಗಳು ಉರಿದು ಇರುವುದನ್ನು ನೀಟ್ ಆಗಿ ಕ್ಲೀನ್ ಮಾಡಿ. ದೇವರ ಮನೆಯನ್ನು ಯಾವಾಗಲೂ ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಈ ವಿಚಾರ ನಿಮಗೆ ತಿಳಿದಿರಲಿ.

ದೇವರ ಪೂಜೆಗೆ ಸಂಬಂಧಪಟ್ಟ ಹಾಗೆ ಮತ್ತೊಂದು ಪ್ರಮುಖವಾದ ವಿಚಾರ ಏನು ಎಂದರೆ, ಪೂಜೆ ಮಾಡುವುದಕ್ಕೆ ಬಳಸುವ ಹೂವನ್ನು, ನೀವು ಗಿಡದಿಂದ ಹೂವುಗಳನ್ನು ಕಿತ್ತುಕೊಂಡ ಬಳಿಕ ಹಾಗೆಯೇ ಅದನ್ನು ದೇವರಿಗೆ ಅರ್ಪಿಸಿ, ಹೂವನ್ನು ತೊಳೆದು ಅರ್ಪಿಸಬಾರದು. ಗಿಡದಿಂದ ಕಿತ್ತು ಹಾಗೆಯೇ ಅರ್ಪಿಸಿ. ನೀರಿನಲ್ಲಿ ಹೂವನ್ನು ತೊಳೆದರೆ, ಅದು ನೀರಿನ ದೇವ ಅಂದರೆ ಜಲದೇವನಿಗೆ ಮೊದಲು ಅರ್ಪಣೆ ಮಾಡಿದ ಹಾಗೆ ಆಗುತ್ತದೆ..

ಈ ರೀತಿ ಮಾಡಿದರೆ ದೇವರಿಗೆ ಕೋಪ ಬರುತ್ತದೆ. ಹಾಗಾಗಿ ಹೂವುಗಳನ್ನು ತೊಳೆಯದೆ ದೇವರಿಗೆ ಅರ್ಪಿಸಿ. ಈಗಿನ ಕಾಲದಲ್ಲಿ ಪೂಜೆ ಮಾಡುವ ಹಿಂದಿನ ದಿನವೇ ಹೂವುಗಳನ್ನು ಮನೆಗೆ ತಂದು, ಮರುದಿನ ದೇವರ ಪೂಜೆ ಮಾಡುತ್ತಾರೆ. ಈ ರೀತಿ ಮಾಡಬಾರದು. ಬ್ರಹ್ಮಮುಹೂರ್ತದಲ್ಲಿ ಮಾತ್ರ ದೇವರಿಗೆ ಹೂವಿನ ಅರ್ಪಣೆ ಮಾಡಬೇಕು. ಆ ವೇಳೆಯಲ್ಲಿ ಮಾತ್ರ ಹೂವುಗಳನ್ನು ಕಿತ್ತುಕೊಳ್ಳಬೇಕು. ಈ ಮುಖ್ಯವಾದ ವಿಷಯವನ್ನು ನೆನಪಿನಲ್ಲಿ ಇಡಿ.

Leave A Reply

Your email address will not be published.