Eggs : ಮೊಟ್ಟೆಗಳು ಚೆನ್ನಾಗಿದ್ಯಾ? ಅಥವಾ ಕೊಳೆತು ಹೋಗಿದ್ಯಾ?ಕೇವಲ 3 ಸೆಕೆಂಡ್ಸ್ ನಲ್ಲಿ ಕಂಡು ಹಿಡಿಯೋದು ಹೀಗೆ!

0 34

Eggs : ಮೊಟ್ಟೆಗಳು ಆರೋಗ್ಯಕರ ಆಹಾರ, ಪ್ರೋಟಿನ್ ಅಂಶವಿರುವ ಮೊಟ್ಟೆಯನ್ನು ಎಲ್ಲರೂ ಕೂಡ ಸೇವಿಸುತ್ತಾರೆ. ಅದರಲ್ಲೂ ವ್ಯಾಯಾಮ ಮಾಡುವವರು ಮತ್ತು ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವವರಿಗೆ ಮೊಟ್ಟೆ ಬಹಳ ಮುಖ್ಯವಾಗಿ ಸೇವಿಸುವ ಆಹಾರ ಪದಾರ್ಥ. ಪ್ರತಿದಿನ ಮೊಟ್ಟೆ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು..

ಆದರೆ ಅಂಗಡಿಯಲ್ಲಿ ಸಿಗುವ ಎಲ್ಲಾ ಮೊಟ್ಟೆಗಳು ಚೆನ್ನಾಗಿವೆ ಎಂದು ಹೇಳಲು ಆಗೋದಿಲ್ಲ, ಕೆಲವು ಮೊಟ್ಟೆಗಳು ಹಾಳಾಗಿರಬಹುದು, ಕೆಲವು ಕೊಳೆತು ಹೋಗಿರಬಹುದು. ಆದರೆ ಮೊಟ್ಟೆಗಳು ಕೊಳೆತು ಹೋಗಿದ್ಯಾ ಎಂದು ಕಂಡು ಹಿಡಿಯೋದು ಬಹಳ ಕಷ್ಟ. ಕೊಳೆತ ಮೊಟ್ಟೆಗಳನ್ನು ತಿಂದರೆ ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗಾಗಿ ಇಂದು ಮೊಟ್ಟೆ ಕೊಳೆತು ಹೋಗಿದ್ಯಾ ಎಂದು ತಿಳಿದುಕೊಳ್ಳೋದು ಹೇಗೆ ಎಂದು ನೋಡೋಣ..

ಮೊದಲಿಗೆ ಒಂದು ಬೌಲ್ ಗೆ ನೀರು ಹಾಕಿ, ಮೊಟ್ಟೆಯನ್ನು ಬೌಲ್ ಗೆ ಹಾಕಿ, ಮೊಟ್ಟೆ ತೇಲುತ್ತಾ ಇದ್ದರೆ, ಕೊಳೆತು ಹೋಗಿದೆ ಎಂದು ಅರ್ಥ. ಹಾಗೆಯೇ ಮತ್ತೊಂದು ವಿಧಾನ, ಅಡುಗೆ ಮಾಡಲು ಬಳಸುವಾಗ, ಮೊಟ್ಟೆಯನ್ನು ಒಡೆಯುತ್ತೀರಿ, ಆಗ ಅದರಲ್ಲಿ ಕೆಂಪು ಬಣ್ಣ ರಕ್ತದ ಹಾಗೆ ಕಂಡುಬಂದರೆ, ಮೊಟ್ಟೆ ಚೆನ್ನಾಗಿಲ್ಲ ಕೊಳೆತು ಹೋಗಿದೆ ಎಂದು ಅರ್ಥ..

ಮೊಟ್ಟೆ ಕೊಳೆತು ಹೋಗಿದೆ ಎಂದರೆ ಅದರಲ್ಲಿ ವಾಸನೆ ಜಾಸ್ತಿ ಇರುತ್ತದೆ. ಇದನ್ನು ಕೂಡ ನೆನಪಿಡಿ, ಈ ಲಕ್ಷಣಗಳು ಮೊಟ್ಟೆಯಲ್ಲಿ ಕಂಡುಬಂದರೆ, ಕೊಳೆತು ಹೋಗಿದೆ ಎಂದು ಗೊತ್ತಾಗಬೇಕು. ಮೊಟ್ಟೆಯನ್ನು ನೀರಿನಲ್ಲಿ ಹಾಕಿದಾಗ ತಕ್ಷಣವೇ ಮುಳುಗಿದರೆ, ಫ್ರೆಶ್ ಆಗಿದೆ ಎಂದು ಅರ್ಥ. ಈ ಎಲ್ಲಾ ಅಂಶಗಳನ್ನು ನೆನಪಿಟ್ಟುಕೊಂಡು, ಆರೋಗ್ಯಕರ ಮೊಟ್ಟೆಗಳನ್ನು ಮಾತ್ರ ಸೇವಿಸಿ, ನೀವು ಆರೋಗ್ಯವಂತರಾಗಿರಿ.

Leave A Reply

Your email address will not be published.