Healthy Food: ದಿನಕ್ಕೆ ಎರಡು ರಾಗಿ ರೊಟ್ಟಿ ತಿಂದರೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

0 33

Healthy Food: ನಮ್ಮ ರಾಜ್ಯದಲ್ಲಿ ರಾಗಿಯನ್ನು ಹೆಚ್ಚಾಗಿ ಬಳಸುತ್ತಾರೆ. ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ದೋಸೆ ಹೀಗೆ ಅನೇಕ ಆಹಾರ ಪದಾರ್ಥಗಳನ್ನು ರಾಗಿಯಿಂದ ತಯಾರಿಸಲಾಗುತ್ತದೆ. ಹಾಗೆಯೇ ರಾಗಿಯಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ವಿಟಮಿನ್ಸ್, ಐರನ್ ಸೇರಿದಂತೆ ಇನ್ನು ಅನೇಕ ಅಂಶಗಳು ಇರುವುದರಿಂದ ಪ್ರತಿ ದಿನ ರಾಗಿಯಿಂದ ಮಾಡಿದ ಪದಾರ್ಥವನ್ನು ಸೇವಿಸುವುದರಿಂದ, ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?

ಡೈಯಾಬಿಟಿಸ್ ಕಂಟ್ರೋಲ್: ರಾಗಿ ರೊಟ್ಟಿ ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟ ಜಾಸ್ತಿ ಆಗುವುದಿಲ್ಲ. ಹಾಗಾಗಿ ಪ್ರತಿ ದಿನ ರಾಗಿ ರೊಟ್ಟಿ ಸೇವಿಸಬಹುದು.
ತೂಕ ಇಳಿಕೆ: ರಾಗಿ ರೊಟ್ಟಿ ತಿನ್ನುವುದರಿಂದ ಹೆಚ್ಚು ಸಮಯ ನಿಮಗೆ ಹಸಿವು ಆಗುವುದಿಲ್ಲ. ಹಾಗಾಗಿ ತೂಕ ಇಳಿಸುವವರಿಗೆ ರಾಗಿ ರೊಟ್ಟಿ ಒಳ್ಳೆಯ ಆಯ್ಕೆ. ಪ್ರತಿದಿನ ರಾಗಿ ರೊಟ್ಟಿ ತಿಂದರೆ ಬೇಗ ತೂಕ ಇಳಿಸಿಕೊಳ್ಳುತ್ತೀರಿ.

ತ್ವಚೆ ಮತ್ತು ಕೂದಲಿನ ಆರೋಗ್ಯ: ಗೋಧಿ ಬದಲಾಗಿ ರಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ ರಾಗಿ ರೊಟ್ಟಿ ತಿನ್ನುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಹಾಗೆಯೇ ಕೂದಲು ಮತ್ತು ತ್ವಚೆ ಕಾಂತಿಯುಕ್ತವಾಗಿರುತ್ತದೆ.
ಹೊಟ್ಟೆ ಆರೋಗ್ಯ: ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ ಸಮಸ್ಯೆ ಇರುವವರಿಗೆ ರಾಗಿ ರೊಟ್ಟಿ ಒಳ್ಳೆಯ ಆಯ್ಕೆ ಆಗಿರುತ್ತದೆ. ಇಂಥ ಸಮಸ್ಯೆ ಇರುವವರು ಪ್ರತಿದಿನ ರಾಗಿ ರೊಟ್ಟಿ ಸೇವಿಸಿದರೆ, ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ..

ಮೂಳೆಗಳ ಆರೋಗ್ಯ: ರಾಗಿಯಲ್ಲಿ ಕಾರ್ಬೊಹೈಡ್ರೇಟ್, ಪ್ರೊಟೀನ್, ಕ್ಯಾಲ್ಸಿಯಂ ಹಾಗೂ ಇನ್ನಿತರ ಅಂಶಗಳು ಇರುತ್ತದೆ. ಇದೆಲ್ಲವೂ ಕೂಡ ಮೂಳೆ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಒಳ್ಳೆಯದು. ಇವುಗಳ ಶಕ್ತಿಯನ್ನು ಹೆಚ್ಚಿಸುತ್ತದೆ.
ಈ ಎಲ್ಲಾ ಒಳ್ಳೆಯ ಆಂಶಗಳು ಇರುವ ಕಾರಣ, ರಾಗಿ ರೊಟ್ಟಿಯನ್ನು ಸೇವಿಸಬಹುದು.

Leave A Reply

Your email address will not be published.