Yash: ಹುಟ್ಟುಹಬ್ಬದಂದೇ 4 ಅಭಿಮಾನಿಗಳ ಮರಣ, ಅತೀವವಾದ ನೋವಿನಲ್ಲಿ ನಟ ಯಶ್!

0 15

Yash: ನಿನ್ನೆ ನಟ ಯಶ್ ಅವರ ಹುಟ್ಟುಹಬ್ಬ. ಈ ವರ್ಷ ಯಶ್ ಅವರು ಟಾಕ್ಸಿಕ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಕಾರಣ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳಲು ಆಗುವುದಿಲ್ಲ, ಉ ವರ್ಷವೂ ಅಭಿಮಾನಿಗಳ ಜೊತೆಗೆ ಇರಲು ಸಾಧ್ಯ ಆಗುತ್ತಿಲ್ಲ ಎಂದು ಹುಟ್ಟುಹಬ್ಬಕ್ಕಿಂತ ಮೊದಲೇ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಯಶ್ ಅವರು ಲಂಡನ್ ನಲ್ಲಿ ಶೂಟಿಂಗ್ ನಲ್ಲಿದ್ದರು.

ಆದರೆ ಇಲ್ಲಿನ ಗದಗ ಜಿಲ್ಲೆಯಲ್ಲಿ ಯಶ್ ಅವರ ಕಟೌಟ್ ಹಾಕುವ ಭರದಲ್ಲಿ ವಿದ್ಯುತ್ ತಂತಿ ತಗುಲಿದ ಕಾರಣ ಯಶ್ ಅವರ ಮೂವರು ಅಭಿಮಾನಿಗಳು ವಿಧಿವಶರಾದರು. ಇದು ಬಹಳ ನೋವಿನ ವಿಚಾರ ಆಗಿದ್ದು, ಯಶ್ ಅವರ ಲಂಡನ್ ಇಂದ ತಮ್ಮ ಅಭಿಮಾನಿಗಳಿಗಾಗಿ ನಿನ್ನೆ ಸಂಜೆ ವಿಶೇಷ ವಿಮಾನದ ಮೂಲಕ ಬಂದರು. ಮೃತ ಅಭಿಮಾನಿಗಳ ಮನೆಗೆ ಭೇಟಿ ನೀಡಿ, ಅವರ ಕಷ್ಟಗಳನ್ನು ಆಲಿಸಿ ಸಾಂತ್ವನ ಹೇಳಿದರು.

ಅವರ ಕುಟುಂಬಗಳಿಗೆ ಅವಶ್ಯಕತೆ ಇರುವುದನ್ನು ಮಾಡಿಕೊಡುವ ಜವಾಬ್ದಾರಿ ನನ್ನದು ಎಂದು ಕೂಡ ಹೇಳಿದರು. ಮಾಧ್ಯಮದ ಎದುರು ಮಾತನಾಡಿ, ಈ ಥರ ಮಾಡಬೇಡಿ ಅಪ್ಪ ಅಮ್ಮನ ಬಗ್ಗೆ ಯೋಚನೆ ಮಾಡಿ ಎಂದು ಮನವಿಯನ್ನು ಮಾಡಿಕೊಂಡರು. ಏನೇ ಮಾಡಿದರು ಮನೆಗೆ ಮಗ ಬರ್ತಾನಾ ಎಂದು ಮನೆಯವರ ದುಃಖವನ್ನು ಅರ್ಥ ಮಾಡಿಕೊಂಡರು ನಟ ಯಶ್. ಅಭಿಮಾನಿಗಳ ಮೇಲೆ ಇರುವ ಪ್ರೀತಿ ನೋಡಿ ಎಲ್ಲರೂ ಭಾವುಕರಾಗಿದ್ದು ನಿಜ.

ಆದರೆ ನಿನ್ನೆ ಯಶ್ ಅವರು ಗದಗಕ್ಕೆ ಬಂದಾಗ, ಅವರನ್ನು ನೋಡಲು ಬೈಕ್ ನಲ್ಲಿ ಬರುತ್ತಿದ್ದ ಮತ್ತೊಬ್ಬ ಅಭಿಮಾನಿಗೆ ಆಕ್ಸಿಡೆಂಟ್ ಆಗಿ, ಆಸ್ಪತ್ರೆಗೆ ಸೇರಿಸಿ ಆತ ಕೂಡ ಮೃತ ಪಟ್ಟಿದ್ದಾನೆ. ಕಲಾವಿದರಿಗೆ ಅಭಿಮಾನಿಗಳು ಎಷ್ಟು ಮುಖ್ಯವೋ, ಅವರ ಸೌಖ್ಯವೂ ಅಷ್ಟೇ ಮುಖ್ಯ. ತಮ್ಮ ಅಭಿಮಾನಿಗಳಿಗೆ ಈ ರೀತಿ ಆದ ಕಾರಣ ಯಶ್ ಅವರು ಬಹಳ ನೋವಿನಲ್ಲಿದ್ದಾರೆ.

Leave A Reply

Your email address will not be published.