Darshan: ದರ್ಶನ್ ಪವಿತ್ರಾ ಗೌಡ ರಿಲೇಶನ್ಷಿಪ್ ಗೆ 10 ವರ್ಷ! ಕೌಂಟರ್ ಕೊಟ್ಟ ಡಿಬಾಸ್ ಪತ್ನಿ ವಿಜಯಲಕ್ಷ್ಮಿ!

0 27

Darshan: ನಟ ದರ್ಶನ್ ಅವರು ಈಗ ಕಾಟೇರಾ ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಾ ಇದ್ದಾರೆ. ಆದರೆ ವಿವಾದಗಳು ಇವರ ಸುತ್ತ ಇದೆ ಎಂದರೆ ತಪ್ಪಲ್ಲ. ಇದೀಗ ನಟಿ ಪವಿತ್ರಾ ಗೌಡ ತಮ್ಮ ಹಾಗು ದರ್ಶನ್ ಅವರ ರಿಲೇಶನ್ಷಿಪ್ ಗೆ 10 ವರ್ಷವಾಗಿದೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸುದ್ದಿ ಮಧ್ಯರಾತ್ರಿ ಇಂದಲೂ ವೈರಲ್ ಆಗಿದೆ.

ಇಂದು ಮಧ್ಯ ರಾತ್ರಿ ದರ್ಶನ್ ಅವರ ಜೊತೆಗಿರುವ ಒಂದಷ್ಟು ಫೋಟೋಸ್ ಗಳನ್ನು ಶೇರ್ ಮಾಡಿ, ಬ್ಯಾಗ್ರೌಂಡ್ ನಲ್ಲಿ ಒಂದು ಮಳೆಬಿಲ್ಲು ಹಾಡನ್ನು ಹಾಕಿರುವ ನಟಿ ಪವಿತ್ರಾ ಗೌಡ, 10 ವರ್ಷಗಳ ಸಂಬಂಧ ಇನ್ನಷ್ಟು ವರ್ಷ ಹೀಗೆ ಇರಲಿ ಎಂದು ಬರೆದಿದ್ದಾರೆ. ಈ ಪೋಸ್ಟ್ ಗೆ ದರ್ಶನ್ ಅವರನ್ನು, ತಮ್ಮ ಮಗಳು ಖುಷಿ ಅವರನ್ನು ಟ್ಯಾಗ್ ಮಾಡಿದ್ದಾರೆ. ನೆಗಟಿವ್ ಕಮೆಂಟ್ಸ್ ಬರುತ್ತಿದ್ದ ಹಾಗೆ ಪೋಸ್ಟ್ ಗೆ ಕಮೆಂಟ್ಸ್ ಆಫ್ ಮಾಡಿದ್ದಾರೆ.

 
 
 
 
 
View this post on Instagram
 
 
 
 
 
 
 
 
 
 
 

 

A post shared by 𝙋𝙖𝙫𝙞𝙩𝙝𝙧𝙖 𝙂𝙤𝙬𝙙𝙖 (@pavithra_gowda_7)

ಇವರಿಬ್ಬರದ್ದು 10 ವರ್ಷಗಳ ಸಂಬಂಧವೇ ಎಂದು ಅಭಿಮಾನಿಗಳು ಹಾಗೂ ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ. ಈ ಪೋಸ್ಟ್ ಬರುತ್ತಿದ್ದ ಹಾಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಆಕೆಯನ್ನು ತರಾಟೆಗೆ ತೆಗೆದುಕೊಂಡು ಪೋಸ್ಟ್ ಮಾಡಿದ್ದಾರೆ. ಪವಿತ್ರಾ ಗೌಡ ತನ್ನ ಮೊದಲ ಗಂಡನ ಜೊತೆಗಿರುವ ಹಾಗೂ ಮಗಳ ಜೊತೆಗಿರುವ ಒಂದಷ್ಟು ಫೋಟೋಸ್ ಶೇರ್ ಮಾಡಿ, ಖುಷಿ ಆಕೆಯ ಮೊದಲ ಗಂಡನ ಮಗು ಅನ್ನೋದು ನೆನಪಿರಲಿ..

ಇನ್ನೊಬ್ಬರ ಗಂಡನ ಬಗ್ಗೆ ಈ ರೀತಿ ಪೋಸ್ಟ್ ಮಾಡೋ ಮೊದಲು ಜ್ಞಾನ ಇರಬೇಕು, ಸ್ವಾರ್ಥಕ್ಕಾಗಿ ಎಲ್ಲರನ್ನು ಬಳಸಿಕೊಳ್ಳುತ್ತಾರೆ. ಈಕೆಯ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂದು ಬರೆದಿದ್ದಾರೆ ವಿಜಯಲಕ್ಷ್ಮಿ ದರ್ಶನ್. ಇದೀಗ ಈ ವಿಚಾರ ಭಾರಿ ವೈರಲ್ ಆಗಿದೆ.

Leave A Reply

Your email address will not be published.