ಈ ತಿಂಗಳು ದಸರಾ ಹಬ್ಬ ಇರಲಿದೆ, ಜೊತೆಗೆ ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಕೂಡ ಮುಂಬರುವ ದಿನಗಳಲ್ಲಿ ಬರಲಿದೆ. ಈ ಸಮಯದಲ್ಲಿ ಸೂರ್ಯದೇವನ ಸ್ಥಾನ ಬದಲಾವಣೆ ನಡೆಯಲಿದೆ, ಸೂರ್ಯಾದೇವ ಎಲ್ಲಾ ಗ್ರಹಗಳ ರಾಜ, ತಿಂಗಳಿಗೆ ಒಂದು ಸಾರಿ ಸ್ಥಾನ ಬದಲಾವಣೆ ಮಾಡುವ ಸೂರ್ಯದೇವನು ಆಕ್ಟೊಬರ್ 18ರಂದು ತುಲಾ ರಾಶಿಗೆ ಬಂದು ನವೆಂಬರ್ 17ರವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ. ಸೂರ್ಯನ ಈ ಸ್ಥಾನ ಬದಲಾವಣೆ ಇಂದ 3 ರಾಶಿಗಳ ಮೇಲೆ ಅದೃಷ್ಟದ ಮಳೆ ಹರಿಯಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.
ವೃಷಭ ರಾಶಿ :- ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳನ್ನು ಈ ಸಮಯದಲ್ಲಿ ಪೂರ್ತಿ ಮಾಡಿಕೊಳ್ಳಬಹುದು. ಈ ವೇಳೆ ಆಸ್ತಿ ಅಥವಾ ವಾಹನ ಖರೀದಿ ಮಾಡುವ ಯೋಗವಿದೆ. ಹೊಸದಾಗಿ ಹೂಡಿಕೆ ಮಾಡುವ ಬಗ್ಗೆ ನೀವು ನಿರ್ಧಾರ ಮಾಡಬಹುದು. ಮನೆಯವರ ಜೊತೆಗೆ ಪ್ರಯಾಣ ಮಾಡುತ್ತೀರಿ. ಈ ವೇಳೆ ನಿಮ್ಮ ಯಶಸ್ಸು ಹೆಚ್ಚಾಗುತ್ತದೆ.
ಸಿಂಹ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ನಿಮಗೆ ಹೆಚ್ಚಿನ ಅನುಕೂಲ ತಂದುಕೊಡುತ್ತದೆ. ಉದ್ಯೋಗದಲ್ಲಿ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ದಿಢೀರ್ ಧನಲಾಭ ಪಡೆಯುತ್ತೀರಿ. ಈ ವೇಳೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಧನು ರಾಶಿ :- ಈ ವೇಳೆ ಉದ್ಯೋಗದ ವಿಷಯದಲ್ಲಿ ನಿಮಗೆ ದೊಡ್ಡ ಕಂಪನಿ ಇಂದ ಆಫರ್ ಬರಬಹುದು. ಈಗಾಗಲೇ ಉದ್ಯೋಗದಲ್ಲಿ ಇರುವವರಿಗೆ ಬಡ್ತಿ ಮತ್ತು ಹೊಸ ಜವಾಬ್ದಾರಿ ಸಿಗಬಹುದು. ನಿಮ್ಮ ಮನೆಯಲ್ಲಿ ಕೆಲವು ಒಳ್ಳೆಯ ಕೆಲಸಗಳು ನಡೆಯಬಹುದು.