Viral News: ಹೈವೇಯಲ್ಲಿ ಬೈಕ್ ರೈಡ್ ಮಾಡುತ್ತಾ ರೊಮ್ಯಾನ್ಸ್ ಮಾಡುತ್ತಿದ್ದ ಜೋಡಿಯ ಕಥೆ ಏನಾಗಿದೆ ಗೊತ್ತಾ? ಭಾರಿ ದಂಡ ಹಾಕಿದ ಪೊಲೀಸರು

0 20

ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಜನರಿಗೆ ಕಿರಿ ಕಿರಿ ಎನ್ನಿಸುವಂಥ ಘಟನೆಗಳು ನಡೆಯುತ್ತಿದ್ದು, ಅವುಗಳ ಫೋಟೋ ಮತ್ತು ವಿಡಿಯೋಗಳು ಟ್ವಿಟರ್, ಯೂಟ್ಯೂಬ್, ಇನ್ಸ್ಟ್ಯಾಗ್ರ್ಯಾಂ ಇವುಗಳಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿತ್ತು.

ಹೆದ್ದಾರಿಯಲ್ಲಿ ಒಂದು ಜೋಡಿ ಬೈಕ್ ನಲ್ಲಿ ಹೋಗುವಾತ ಮೈಮರೆತು ಟ್ರಾಫಿಕ್ ರೂಲ್ಸ್ ಗಳನ್ನು ಬ್ರೇಕ್ ಮಾಡಿ ಸಾಗುತ್ತಿದ್ದರು. ಇದು ಜನರಿಗೆ ಕಿರಿಕಿರಿ ಅನ್ನಿಸುವುದು ಮಾತ್ರವಲ್ಲ, ಅವರ ಜೀವಕ್ಕೆ ಅಪಾಯ ತರಬಹುದಾದಂಥ ಸಂದರ್ಭ ಕೂಡ ಆಗಿತ್ತು. ಆದರೆ ಆ ಜೋಡಿ ಯಾವುದರ ಬಗ್ಗೆ ಕೂಡ ತಲೆಕೆಡಿಸಿಕೊಳ್ಳದೆ, ತಮ್ಮಿಷ್ಟದ ಹಾಗೆ ಬೈಕ್ ನಲ್ಲಿ ಹೋಗುತ್ತಿದ್ದರು. ನಂತರ ಆವರಿಬ್ಬರ ಕಥೆ ಏನಾಗಿದೆ ಗೊತ್ತಾ?

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಯುಪಿಯ ಹಾಪುರ್ ನ ನ್ಯಾಷನಲ್ ಹೈವೇ 9ರಲ್ಲಿ ಚಲಿಸುತ್ತಿದ್ದ ಈ ಜೋಡಿ, ಯಾವುದೇ ಟ್ರಾಫಿಕ್ ರೂಲ್ಸ್ ಗೆ ತಲೆಕೆಡಿಸಿಕೊಳ್ಳದೆ, ಬೈಕ್ ನಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಹೋಗುತ್ತಿದ್ದರು. ಇದನ್ನು ವಿಡಿಯೋ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿತ್ತು. ನೆಟ್ಟಿಗರು ಕೂಡ ಈ ವಿಡಿಯೋ ನೋಡಿ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಹೀಗೆಲ್ಲಾ ಯಾರಾದರೂ ಮಾಡ್ತಾರಾ? ಇಂಥವರ ಬಗ್ಗೆ ಪೊಲೀಸರು ಆಕ್ಷನ್ ತೆಗೆದುಕೊಳ್ಳಬೇಕು, ಇವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಪೊಲೀಸರಿಗೆ ನೆಟ್ಟಿಗರು ಒತ್ತಾಯ ಮಾಡಿದ್ದರು. ಅದೇ ರೀತಿ ಪೊಲೀಸರು ಕೂಡ ಇವರಿಬ್ಬರ ವಿಷಯದಲ್ಲಿ ಆಕ್ಷನ್ ತೆಗೆದುಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ ಎಂದು ಮಾಹಿಫಿ ಸಿಕ್ಕಿದೆ.

ಸಿಂಬೊಲಿ ಪೊಲೀಸ್ ಸ್ಟೇಶನ್ ವ್ಯಾಪ್ತಿಗೆ ಸೇರುವ ರೋಡ್ ನಲ್ಲಿ ಇವರಿಬ್ಬರು ಪ್ರಯಾಣ ಮಾಡುತ್ತಿದ್ದ ಕಾರಣ, ಸಿಂಬೋಲಿ ಪೊಲೀಸ್ ಸ್ಟೇಶನ್ ನ ಪೊಲೀಸರು ಇವರಿಬ್ಬರನ್ನು ಹಿಡಿದು, ಬಂಧಿಸಿ, ರಸ್ತೆಯಲ್ಲಿ ಆ ರೀತಿ ಅಪ್ಪಿಕೊಂಡು ಗಾಡಿ ಓಡಿಸಿರುವುದು ಜೊತೆಗೆ ಹೆಲ್ಮೆಟ್ ಧರಿಸದೆ ಪ್ರಯಾಣ ಮಾಡಿರುವುದು ಈ ಎಲ್ಲಾ ಕಾರಣಕ್ಕೆ ಇವರಿಗೆ 8000 ರೂಪಾಯಿಗಳ ದಂಡ ವಿಧಿಸಿದ್ದಾರೆ. ಇದೀಗ ಈ ಘಟನೆ ಸಿಕ್ಕಾಪಟ್ಟೆ ವೈರಲ್ ಆಗಿದೆ..

Leave A Reply

Your email address will not be published.