Rakshak: ಬಿಗ್ ಬಾಸ್ ಮನೆಯಲ್ಲಿರಲು ರಕ್ಷಕ್ ಬುಲೆಟ್ ಪ್ರಕಾಶ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Written by Pooja Siddaraj

Published on:

ಬಿಗ್ ಬಾಸ್ ಕನ್ನಡ ಸೀಸನ್ 10 ನಲ್ಲಿ ವಿವಿಧ ರೀತಿಯ ಸ್ಪರ್ಧಿಗಳು ಬಿಗ್ ಮನೆಯೊಳಗೆ ಸೇರಿದ್ದಾರೆ. ಅದರಲ್ಲಿ ಒಬ್ಬರು ಕನ್ನಡ ಖ್ಯಾತ ಹಾಸ್ಯನಟ ದಿವಂಗತ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಪ್ರಕಾಶ್. ಇದೀಗ ರಕ್ಷಕ್ ಬಗ್ಗೆ ವಿಷಯವೊಂದು ಚರ್ಚೆ ಆಗುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿರಲು ರಕ್ಷಕ್ ಗೆ ಎಷ್ಟು ಸಂಭಾವನೆ ಕೊಡಲಾಗುತ್ತಿದೆ ಎನ್ನುವ ಚರ್ಚೆ ನಡೆಯುತ್ತಿದೆ..

ಬಿಗ್ ವಾಸ್ ಮನೆಯೊಳಗೆ ಹೋಗುವ ಪ್ರತಿ ಸ್ಪರ್ದಿಗೆ ಇಂತಿಷ್ಟು ಎಂದು ಸಂಭಾವನೆ ನಿಗದಿ ಮಾಡಲಾಗಿರುತ್ತದೆ. ಯಾರಿಗೆ ಎಷ್ಟು ಸಂಭಾವನೆ ನಿಗದಿ ಮಾಡಿರುತ್ತಾರೆ ಎನ್ನುವುದು ಯಾವಾಗಲೂ ಹೊರಬರುವುದಿಲ್ಲ. ಕೆಲವರಿಗೆ ದಿನಕ್ಕೆ ಇಷ್ಟು ಸಂಭಾವನೆ ಎಂದು ನಿಗದಿ ಮಾಡಲಾಗಿರುತ್ತದೆ ಇನ್ನು ಕೆಲವರಿಗೆ ವಾರಕ್ಕೆ ಇಷ್ಟು ಸಂಭಾವನೆ ಎಂದು ನಿಗದಿ ಮಾಡಲಾಗಿರುತ್ತದೆ. ಇದೀಗ ರಕ್ಷಕ್ ಅವರಿಗೆ ಸಂಭಾವನೆ ಎಷ್ಟಿರಬಹುದು ಎಂದು ಚರ್ಚೆ ಶುರುವಾಗಿದೆ.

ರಕ್ಷಕ್ ಬಿಗ್ ಬಾಸ್ ಮನೆಯೊಳಗೆ ಹೋಗಲು ನೇರವಾಗಿ ಸೆಲೆಕ್ಟ್ ಆಗಿರಲಿಲ್ಲ. ಕಡಿಮೆ ವೋಟ್ಸ್ ಬಂದು ಹೋಲ್ಡ್ ನಲ್ಲಿ ಇಡಲಾಗಿದ್ದು, ಹೀಗೆ ಹೋಲ್ಡ್ ನಲ್ಲಿದ್ದ ಎಲ್ಲರನ್ನು ಸಹ ಬಿಗ್ ಬಾಸ್ ಮನೆಗೆ ಕಳಿಸಲಾಗಿದೆ. ಅವರಿಗೆಲ್ಲಾ ಒಂದು ವಾರದ ಸಮಯ ನೀಡಿ, ಅಸಮರ್ಥರು ಎಂದು ಕರಾಯಲಾಗಿದ್ದು, ಈ ವಾರದ ಸಮಯದಲ್ಲಿ ಅವರು ನೀಡುವ ಟಾಸ್ಕ್ ಗಳಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡಿ, ಸಮರ್ಥರು ಎಂದು ಪ್ರೂವ್ ಮಾಡಿಕೊಳ್ಳಬೇಕು..

ಈ ಮೊದಲ ಎರಡು ದಿನಗಳಲ್ಲೇ ರಕ್ಷಕ್ ಮೇಲೆ ಕೆಲವರಿಗೆ ನೆಗಟಿವ್ ಅಭಿಪ್ರಾಯ ಶುರುವಾಗಿದೆ. ರಕ್ಷಕ್ ಆರೋಗೆಂಟ್ ಆಗಿರುತ್ತಾರೆ ಎಂದು ಹೇಳಿದ್ದು ಇದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕೆಲವು ವಿಷಯಗಳಿಗೆ ರಕ್ಷಕ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಬಿಗ್ ಬಾಸ್ ವೇದಿಕೆಯ ಮೇಲೆ ಯಾರು ಎಷ್ಟೇ ಟ್ರೋಲ್ ಮಾಡಿದರು, ರೋಸ್ಟ್ ಮಾಡಿದರು ತಾನು ಹೀಗೆ ಇರುತ್ತೇನೆ ಎಂದು ಹೇಳಿ ಬಿಗ್ ಬಾಸ್ ಮನೆಗೆ ಹೋದರು ರಕ್ಷಕ್.

ಇವರಿಗೆ ಸಿಗುವ ಸಂಭಾವನೆ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ದಿನಕ್ಕೆ 15 ರಿಂದ 20 ಸಾವಿರ ರೂಪಾಯಿ ಸಂಭಾವನೆಯನ್ನು ರಕ್ಷಕ್ ಅವರಿಗೆ ನಿಗದಿ ಮಾಡಲಾಗಿದ್ದು, ವಾರಕ್ಕೆ 1 ಲಕ್ಷ ಸಂಭಾವನೆ ನೀಡಲಾಗುತ್ತಿದೆ ಎಂದು ಮಾಹಿತಿಯ ಮೂಲಕ ತಿಳಿದುಬಂದಿದೆ. ಬೇರೆ ಸ್ಪರ್ಧಿಗಳಿಗೆ ಎಷ್ಟು ಸಂಭಾವನೆ ಸಿಗುತ್ತಿದೆ ಎನ್ನುವುದು ಇನ್ನುಮುಂದೆ ಗೊತ್ತಾಗಬೇಕಿದೆ.

Leave a Comment