Pradeep Eshwar: ಬಿಗ್ ಬಾಸ್ ಮನೆಗೆ ಹೋಗಲು ಪ್ರದೀಪ್ ಈಶ್ವರ್ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?

Written by Pooja Siddaraj

Published on:

ಕನ್ನಡದ ಬಿಗ್ ಬಾಸ್ ಶೋ ಶುರುವಾಗುತ್ತದೆ ಎಂದರೆ ಪ್ರತಿ ಸೀಸನ್ ನಲ್ಲೂ ಜನರಿಗೆ ಕುತೂಹಲ ಹೆಚ್ಚು. ಬಿಗ್ ಮನೆಗೆ ಬರುವ ಸ್ಪರ್ಧಿಗಳು ಯಾರ್ಯಾರು ಎನ್ನುವ ಕುತೂಹಲವೇ ಜಾಸ್ತಿ ಇರುತ್ತದೆ ಎಂದರೆ ತಪ್ಪಲ್ಲ. ಈ ವರ್ಷ ಕೂಡ ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿದೆ. ಬಿಗ್ ಬಾಸ್ ಶೋ ಶುರುವಾಗಿ ಕಳೆದಿರುವುದು ಎರಡು ದಿನಗಳು ಮಾತ್ರ, ಆದರೆ ಈಗಾಗಲೇ ಶೋನಲ್ಲಿ ಸಾಕಷ್ಟು ಟ್ವಿಸ್ಟ್ ಗಳು ಶುರುವಾಗಿದೆ.

ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಟ್ಟ ಮರುದಿನವೇ ಬಿಗ್ ಟ್ವಿಸ್ಟ್ ಎನ್ನುವ ಹಾಗೆ ಎಮ್.ಎಲ್.ಎ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟರು. ಮೊದಲಿಗೆ ಪ್ರದೀಪ್ ಈಶ್ವರ್ ಅವರು ಸ್ಪರ್ಧಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ ಎಂದು ಸ್ವತಃ ಅವರೇ ಹೇಳುಕೊಂಡರು. ಬಳಿಕ ಪ್ರದೀಪ್ ಈಶ್ವರ್ ಅವರು ಗೆಸ್ಟ್ ಆಗಿ ಬಿಗ್ ಮನೆಗೆ ಬಂದಿದ್ದಾರೆ ಎನ್ನುವುದು ಗೊತ್ತಾಯಿತು. ಇವರು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದು ಸಿಕ್ಕಾಪಟ್ಟೆ ವಿವಾದಗಳನ್ನು ಸೃಷ್ಟಿಸಿತು ಎಂದರೆ ತಪ್ಪಲ್ಲ.

ಇದುವರೆಗೂ ಯಾವುದೇ ರಾಜಕಾರಣಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿರಲಿಲ್ಲ. ಇದೇ ಮೊದಲ ಸಾರಿ MLA ಆಗಿರುವ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟರು. ಎಂ.ಎಲ್.ಎ ಆಗಿ ಕೆಲಸಗಳನ್ನು ಬಿಟ್ಟು ಇವರು ಬಿಗ್ ಬಾಸ್ ಮನೆಯಲ್ಲಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆಗಳು ಶುರುವಾಗಿತ್ತು, ವಿರೋಧ ಪಕ್ಷದವರು ಅಣಕಿಸಿಕೊಂಡಿದ್ದು ನಡೆದಿದೆ, ಆದರೆ ಪ್ರದೀಪ್ ಈಶ್ವರ್ ಸೆನ್ಸೇಷನ್ ಆಗಿದ್ದರು ಎನ್ನುವುದಂತೂ ಸುಳ್ಳಲ್ಲ..

ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಬಂದು, ಎಲ್ಲರೊಡನೆ ಬೆರೆತು, ಒಂದು ಸಣ್ಣ ಆಕ್ಟಿವಿಟಿಯನ್ನು ಮಾಡಿಸಿ, ಎಲ್ಲರಿಗೂ ಸ್ವೀಟ್ ಕೊಟ್ಟು ಮನೆಯಿಂದ ಹೊರಬಂದಿದ್ದು ಆಗಿದೆ. ಹಾಗಿದ್ದರೆ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಹೋಗಿದ್ದೇಕೆ? ಬಿಗ್ ಮನೆಯಲ್ಲಿರಲು ಅವರು ಪಡೆದ ಸಂಭಾವನೆ ಎಷ್ಟು? ಎಷ್ಟು ಸಮಯ ಬಿಗ್ ಬಾಸ್ ಮನೆಯೊಳಗೆ ಇದ್ದರು? ಪೂರ್ತಿ ಡೀಟೇಲ್ಸ್ ತಿಳಿಸುತ್ತೇವೆ ನೋಡಿ..

ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೆ ಮುಖ್ಯ ಕಾರಣ ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ಸ್ಪೂರ್ತಿ ತುಂಬಲಿ ಎಂದು. ವಾಹಿನಿಯವರು ಕೇಳಿಕೊಂಡಿದ್ದಕ್ಕೆ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಪ್ರದೀಪ್ ಈಶ್ವರ್ ಅವರಿಗೆ ಯಾವುದೇ ಸಂಭಾವನೆಯನ್ನು ಕೂಡ ನೀಡಿಲ್ಲ ಎಂದು ಮಾಹಿತಿ ಸಿಕ್ಕಿದೆ.

ಇನ್ನು ಪ್ರದೀಪ್ ಈಶ್ವರ್ ಅವರು ಸುಮಾರು 3 ಗಂಟೆಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಇದ್ದರು ಎನ್ನುವುದು ಗೊತ್ತಾಗಿದೆ. ಇನ್ನು ಪ್ರದೀಪ್ ಈಶ್ವರ್ ಅವರ ಬಗ್ಗೆ ಹೇಳುವುದಾದರೆ, ಈ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಇವರು, ಬಿಜೆಪಿ ಪಕ್ಷದ ಹಿರಿಯ ರಾಜಕಾರಣಿ ಡಾ. ಕೆ ಸುಧಾಕರ್ ಅವರನ್ನು ಸೋಲಿಸಿ ಎಲೆಕ್ಷನ್ ನಲ್ಲಿ ಗೆದ್ದು ಎಂ.ಎಲ್.ಎ ಆಗಿದ್ದಾರೆ. ಈ ಗೆಲುವಿನಿಂದ ಇವರು ರಾಜ್ಯದ ಜನರ ಗಮನ ಸೆಳೆದಿದ್ದಂತೂ ನಿಜ.

ಎಂ.ಎಲ್.ಎ ಆಗಿ ತಮ್ಮ ಕ್ಷೇತ್ರದ ಜನರ ಮನೆಗಳಿಗೆ ಭೇಟಿ ನೀಡಿ ಅವರ ಕಷ್ಟಸುಖಗಳನ್ನು ಕೇಳುತ್ತಾರೆ, ಇದರಿಂದ ಮನೆಮಾತಾಗಿದ್ದ ಪ್ರದೀಪ್ ಈಶ್ವರ್ ಅವರು ಮೋಟಿವೇಶನ್ ಟಾಕ್ ಗಳ ಮೂಲಕ ಇನ್ನಷ್ಟು ಫೇಮಸ್ ಅದರು. ಸೋಷಿಯಲ್ ಮೀಡಿಯಾದಲ್ಲಿ ಇವರು ಮೋಟಿವೇಷನ್ ಟಾಕ್ ಗಳಿಂದ ಟ್ರೋಲ್ ಆಗಿದ್ದು ಕೂಡ ಇದೆ. ಆದರೆ ಈಗ ಬಿಗ್ ಬಾಸ್ ಇಂದ ಸುದ್ದಿಯಾಗುತ್ತಿದ್ದಾರೆ.

Leave a Comment