Jr NTR: ಜಪಾನ್ ಭೂಕಂಪದಲ್ಲಿ ಸಿಲುಕಿದ ತೆಲುಗು ನಟ ಜೂನಿಯರ್ ಎನ್ಟಿಆರ್! ಅಭಿಮಾನಿಗಳಲ್ಲಿ ಆತಂಕ!

0 17

Jr NTR: ನಮಗೆಲ್ಲಾ ಗೊತ್ತಿರುವ ಜಪಾನ್ ನಲ್ಲಿ ನಿನ್ನೆ ಹೊಸ ವರ್ಷದ ದಿವಸವೇ ಭೂಕಂಪ ಸಂಭವಿಸಿದೆ. ಮಾಪಕದಿಂದ ಸಿಕ್ಕಿರುವ ಮಾಹಿತಿಯ ಅನುಸಾರ, 7.6% ತೀವ್ರತೆಯಲ್ಲಿ ಭೂಕಂಪ ನಡೆದಿದೆ. ಸುಮಾರು 21 ಸಾರಿ ಭೂಮಿ ಕಂಪಿಸಿದೆ ಎಂದು ಮಾಹಿತಿ ಸಿಕ್ಕಿದೆ. ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಜೂನಿಯರ್ ಎನ್ಟಿಆರ್ ಅವರು ಜಪಾನ್ ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ..

ಈ ವಿಚಾರವನ್ನು ಜ್ಯೂನಿಯರ್ ಎನ್ಟಿಆರ್ ಅವರೇ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಕಳೆದ ವಾರ ನಾನು ಜಪಾನ್ ನಲ್ಲಿ, ನಾನಿದ್ದ ಜಾಗದಲ್ಲಿ ಭೂಮಿ ಕಂಪಿಸಿತು, ಇದು ನನಗೆ ಹೃದಯಸ್ಪರ್ಶಿಯಾಗಿತ್ತು. ಭೂಕಂಪ ಆಗಿರುವ ಪ್ರದೇಶದ ಜನರು ಬಹಳ ಬೇಗ ಚೇತರಿಸಿಕೊಳ್ಳಲಿ.. ಎಂದು ಜ್ಯೂನಿಯರ್ ಎನ್ಟಿಆರ್ ಅವರು ಟ್ವೀಟ್ ಮಾಡಿದ್ದಾರೆ. ನಟ ಜ್ಯೂನಿಯರ್ ಎನ್ಟಿಆರ್ ಅವರು ಹಾಗೂ ಅವರ ಇಡೀ ಕುಟುಂಬ ಜಪಾನ್ ನಲ್ಲಿತ್ತು..

ಈ ಟ್ವೀಟ್ ಬರುತ್ತಿದ್ದ ಹಾಗೆ ಜ್ಯೂನಿಯರ್ ಎನ್ಟಿಆರ್ ಅವರ ಅಭಿಮಾನಿಗಳಿಗೆ ಆತಂಕ ತಂದಿದೆ, ತಮ್ಮ ನೆಚ್ಚಿನ ನಟ ಹುಷಾರಾಗಿ ಬರಲಿ ಎಂದು ಕಾಯುತ್ತಿದ್ದಾರೆ. ಇನ್ನು ಜಪಾನ್ ನಲ್ಲಿ ಪರಿಸ್ಥಿತಿ ಇನ್ನು ಸರಿಹೋಗಿಲ್ಲ, 36 ಗಂಟೆಗಳ ಕಾಲ ಕರೆಂಟ್ ಇಲ್ಲ, ಹಲವು ದಾರಿಗಳು ಬಂದ್ ಆಗಿವೆ. ಅಲ್ಲಿನ ಜನರು ಬಹಳ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರೆಲ್ಲರ ಪರಿಸ್ಥಿತಿ ಬೇಗ ಸರಿಹೋಗಲಿ ಎಂದು ಹಾರೈಸೋಣ.

Leave A Reply

Your email address will not be published.