Kannada Actress: ಕಣ್ಣಿಂದಲೇ ಸೆಳೆಯುತ್ತಿರುವ ಈ ಸುಂದರಿ ಯಾರು ಗೊತ್ತಾ?

0 19

Kannada Actress: ಕಲಾವಿದರು ಹೊಸ ಫೋಟೋಶೂಟ್ ಗಳ ಮೂಲಕ ನೆಟ್ಟಿಗರ ಗಮನ ಸೆಳೆಯೋದು, ವಿವಿಧ ರೀತಿಯಲ್ಲಿ ಫೋಟೋಶೂಟ್ ಮಾಡಿಸೋದು ಕಾಮನ್. ಇಲ್ಲೊಬ್ಬ ಸುಂದರ ಹುಡುಗಿ, ತಮ್ಮ ಕಣ್ಣುಗಳ ಫೋಟೋ ಇಂದಲೇ ಇನ್ಸ್ಟಾಗ್ರಾಮ್ ಶೇಕ್ ಮಾಡಿದ್ದಾರೆ. ಈ ಮುದ್ದು ಹುಡುಗಿ ಯಾರು ಅಂತ ನೀವು ಯೋಚಿಸುತ್ತಿರಬಹುದು. ಈಕೆ ಮತ್ಯಾರು ಅಲ್ಲ, ಚಂದನವನದ 90ರ ದಶಕದ ಸ್ಟಾರ್ ಕಲಾವಿದೆಯ ಮಗಳು.

ಈ ಫೋಟೋಸ್ ನಟಿ ಶ್ರುತಿ ಅವರ ಮಗಳು ಗೌರಿ ಅವರದ್ದು, ಅಮ್ಮನ ಹಾಗೆ ಗೌರಿ ಕೂಡ ನೋಡಲು ಬಹಳ ಸುಂದರವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಗೌರಿ ಅವರು ಹಲವು ಫೋಟೋಸ್ ಹಾಗೂ ಹಾಡುತ್ತಿರುವ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ತಮ್ಮ ಕಣ್ಣುಗಳ ಫೋಟೋಸ್ ಶೇರ್ ಮಾಡಿ, ಹೊಸ ಟ್ರೆಂಡ್ ಆಗಿದ್ದಾರೆ ಗೌರಿ.

ಅಮ್ಮನ ಹಾಗೆ ಗೌರಿ ಅವರಿಗು ನಟನೆಯಲ್ಲಿ ಆಸಕ್ತಿ ಇದೆ. ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ನಟನೆ ಜೊತೆಗೆ ಸಂಗೀತವನ್ನು ಕಲಿಯುತ್ತಿದ್ದಾರೆ. ಆಗಾಗ ತಾವು ಹಾಡುವ ವಿಡಿಯೋಗಳನ್ನು ಕೂಡ ಶೇರ್ ಮಾಡುತ್ತಾರೆ ಗೌರಿ. ಶೀಘ್ರದಲ್ಲೇ ಇವರು ಕೂಡ ಚಂದನವನಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ. ಪ್ರಸ್ತುತ ತಮ್ಮ ಫೋಟೋಸ್ ಗಳ ಮೂಲಕ ನೆಟ್ಟಿಗರು ಫಿದಾ ಆಗುವ ಹಾಗೆ ಮಾಡಿದ್ದಾರೆ.

Leave A Reply

Your email address will not be published.