Keerthy Suresh: ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ಕೀರ್ತಿ ಸುರೇಶ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?

0 28

Keerthy Suresh: ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗಿನ ಮಹಾನಟಿ ಎಂದು ಹೆಸರು ಮಾಡಿರುವವರು ನಟಿ ಕೀರ್ತಿ ಸುರೇಶ್. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಕೀರ್ತಿ ಸುರೇಶ್ ಅವರು ಬ್ಯುಸಿ ಆಗಿದ್ದಾರೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕೀರ್ತಿ ಸುರೇಶ್ ಅವರು ನಟಿಯಾಗಿ ಇದುವರೆಗೂ ಎಷ್ಟು ಕೋಟಿ ಆಸ್ತಿ ಸಂಪಾದನೆ ಮಾಡಿದ್ದಾರೆ ಗೊತ್ತಾ?

ನಟಿ ಕೀರ್ತಿ ಸುರೇಶ್ ಅವರದ್ದು ಸಿನಿಮಾ ಕುಟುಂಬ, ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಸುರೇಶ್ ಇವರು ತಮಿಳು ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು, ಕನ್ನಡದಲ್ಲಿ ಅಣ್ಣಾವ್ರ ಜೊತೆಗೆ ತಂಗಿ ಪಾತ್ರದಲ್ಲಿ ನಟಿಸಿದ್ದರು. ಇನ್ನು ಕೀರ್ತಿ ಸುರೇಶ್ ಅವರ ತಂದೆ ಸುರೇಶ್ ಅವರು ಮಲಯಾಳಂ ಚಿತ್ರರಂಗದ ಹೆಸರಾಂತ ಪ್ರೊಡ್ಯುಸರ್ ಆಗಿದ್ದಾರೆ. ಕೀರ್ತಿ ಸುರೇಶ್ ಅವರಿಗೆ ಒಬ್ಬರು ಅಕ್ಕ ಕೂಡ ಇದ್ದಾರೆ.

ಕೀರ್ತಿ ಸುರೇಶ್ ಅವರು ಚಿತ್ರರಂಗಕ್ಕೆ ಬಾಲ ಕಲಾಗಿದೆಯಾಗಿ ನಟಿಸಿದರು, ಬಳಿಕ ಹೀರೋಯಿನ್ ಆಗಿಯೂ ಎಂಟ್ರಿ ಕೊಟ್ಟರು. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಕೀರ್ತಿ ಸುರೇಶ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು ತೆಲುಗಿನ ಮಹಾನಟಿ ಸಿನಿಮಾ, ಇದು 50 ಮತ್ತು 60ರ ದಶಕದ ಖ್ಯಾತ ನಟಿ ಮಹಾನಟಿ ಸಾವಿತ್ರಿ ಅವರ ಜೀವನಾಧಾರಿತ ಸಿನಿಮಾ ಆಗಿತ್ತು.

ಈ ಸಿನಿಮಾಗೆ ಕೀರ್ತಿ ಸುರೇಶ್ ಅವರು ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದರು. ಅದಾದ ಬಳಿಕ ಕೀರ್ತಿ ಸುರೇಶ್ ಅವರು ಮಹಿಳಾ ಪ್ರಧಾನ ಸಿನಿಮಾಗಳು ಜೊತೆಗೆ ಕಮರ್ಷಿಯಲ್ ಸಿನಿಮಾಗಳು ಎರಡು ರೀತಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಇವರು ನಟ ನಾನಿ ಅವರೊಡನೆ ದಸರಾ ಸಿನಿಮಾದಲ್ಲಿ ನಟಿಸಿದರು, ಆ ಸಿನಿಮಾದ ಪಾತ್ರ ಒಳ್ಳೆಯ ಹೆಸರನ್ನು ತಂದುಕೊಟ್ಟಿತು, ಜೊತೆಗೆ ಸೂಪರ್ ಹಿಟ್ ಕೂಡ ಆಯಿತು.

ಸಿನಿಮಾರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿರುವ ಕೀರ್ತಿ ಸುರೇಶ್ ಅವರ ಒಟ್ಟು ಆಸ್ತಿ ಬಗ್ಗೆ ಈಗ ಪ್ರಶ್ನೆ ಕೇಳಿಬರುತ್ತಿದ್ದು, ಈ ಒಂದು ವರ್ಷ 2023ರಲ್ಲೇ ಕೀರ್ತಿ ಸುರೇಶ್ ಅವರು ಸುಮಾರು 41 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಹಾಗೆಯೇ ಇವರು ಪ್ರತಿ ತಿಂಗಳು ಸುಮಾರು 35 ಲಕ್ಷ ರೂಪಾಯಿಗಳನ್ನು ಸೋಷಿಯಲ್ ಮೀಡಿಯಾ ಮೂಲಕವೇ ಸಂಪಾದನೆ ಮಾಡುತ್ತಾರಂತೆ.

ಇನ್ನು ಒಂದು ಸಿನಿಮಾಗೆ ಸುಮಾರು 3 ರಿಂದ 4 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಕೀರ್ತಿ ಸುರೇಶ್. ಜೋಸ್ ಅಲುಕ್ಕಾಸ್, ರಿಲೈನ್ಸ್ ಟ್ರೆಂಡ್ಸ್ ಸೇರಿದಂತೆ ಸಾಕಷ್ಟು ಬ್ರ್ಯಾಂಡ್ ಗಳಿಗೆ ರಾಯಭಾರಿ ಆಗಿದ್ದಾರೆ. ಜೊತೆಗೆ ಐಷಾರಾಮಿ ಕಾರ್ ಗಳ ಒಡತಿ, ಚೆನ್ನೈ ನಲ್ಲಿ ಕೀರ್ತಿ ಸುರೇಶ್ ಅವರ ಭವ್ಯವಾದ ಮನೆಯಿದೆ ಜೊತೆಗೆ ಹೈದರಾಬಾದ್ ನಲ್ಲಿ ಕೂಡ ಐಷಾರಾಮಿ ಅಪಾರ್ಟ್ಮೆಂಟ್ ಒಂದನ್ನು ಸಹ ಖರೀದಿ ಮಾಡಿದ್ದಾರೆ.

Leave A Reply

Your email address will not be published.