Priya Varirer: ಪ್ರಿಯಾ ವಾರಿಯರ್ ಮೂಲತಃ ಮಲಯಾಳಂ ಚಿತ್ರರಂಗದ ಹುಡುಗಿ, ಇವರು ಮೊದಲ ಸಿನಿಮಾದ ಒಂದೇ ಒಂದು ಕಣ್ಸನ್ನೆ ದೃಶ್ಯದಿಂದಲೇ ದೇಶಾದ್ಯಂತ ವೈರಲ್ ಆಗಿದ್ದರು. ಸಾಕಷ್ಟು ಹುಡುಗರ ಕ್ರಶ್ ಆಗಿದ್ದರು ಪ್ರಿಯಾ ವಾರಿಯರ್. ಒರು ಅಡಾರ್ ಲವ್ ಸಿನಿಮಾ ನಂತರ ಪ್ರಿಯಾ ವಾರಿಯರ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು, ಪ್ರಸ್ತುತ ಈಕೆ ಏನು ಮಾಡುತ್ತಿದ್ದಾರೆ ಗೊತ್ತಾ?
ನಟಿ ಪ್ರಿಯಾ ವಾರಿಯರ್ ಮಲಯಾಳಂ ನಲ್ಲಿ ಮೊದಲು ನಟಿಸಿದರು ನಂತರ ಅವರಿಗೆ ಎಲ್ಲಾ ಭಾಷೆಗಳಲ್ಲೂ ಅವಕಾಶಗಳು ಬರುವುದಕ್ಕೆ ಶುರುವಾದವು.. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಪ್ರಿಯಾ. ಈಗಾಗಲೇ ಇವರು 8 ರಿಂದ 9 ಸಿನಿಮಾಗಳಲ್ಲಿ ನಟಿಸಿ, ಒಳ್ಳೆಯ ಅಭಿಮಾನಿ ಬಳಗವನ್ನು ಕೂಡ ಗಳಿಸಿಕೊಂಡಿದ್ದಾರೆ.
ಪ್ರಿಯಾ ವಾರಿಯರ್ ಅವರು ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾಗಿದೆ. ನಿರ್ಮಾಪಕ ಕೆ.ಮಂಜು ಅವರ ಮಗ ಶ್ರೇಯಸ್ ಮಂಜು ಹಾಗೂ ಪ್ರಿಯಾ ವಾರಿಯರ್ ಜೊತೆಯಾಗಿ ವಿಷ್ಣುಪ್ರಿಯಾ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆ ಆಗಬೇಕಿದೆ. ವಿಷ್ಣುಪ್ರಿಯಾ ಸಿನಿಮಾ ಮೂಲಕ ಪ್ರಿಯಾ ವಾರಿಯರ್ ಕನ್ನಡಕ್ಕೂ ಎಂಟ್ರಿ ಕೊಡಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರಿಯಾ ಅವರು ಅಭಿನಯಿಸಿರುವ ಯಾವುದೇ ಸಿನಿಮಾ ತೆರೆಕಂಡಿಲ್ಲ. ಆದರೆ ಪ್ರಿಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿರುವ ಪ್ರಿಯಾ ವಾರಿಯರ್ ಹಲವು ಫೋಟೋಶೂಟ್ ಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಆಗಾಗ ಹೊಸ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ.
ಇತ್ತೀಚೆಗೆ ಪ್ರಿಯಾ ವಾರಿಯರ್ ಅವರು ಅಪ್ಪಟ ಕೇರಳ ಸ್ಟೈಲ್ ನಲ್ಲಿ ಹೊಸದೊಂದು ಫೋಟೋಶೂಟ್ ಮಾಡಿಸಿದ್ದಾರೆ. ಬಿಳಿ ಸೀರೆಗೆ ರೆಡ್ ಬಾರ್ಡರ್ ಇರುವ ಸೀರೆಯಲ್ಲಿ ಕಂಗೊಳಿಸುತ್ತಾ, ನದಿಯಲ್ಲಿ ಮುಳುಗಿ ಎದ್ದಿದ್ದಾರೆ ಪ್ರಿಯಾ. ನದಿಯಲ್ಲಿ ಮಾಡಿಸಿರುವ ಈ ಫೋಟೋಶೂಟ್ ಎಲ್ಲರ ಗಮನ ಸೆಳೆಯುತ್ತಿದ್ದು, ಪ್ರಿಯಾ ಅವರ ಹೊಸ ಫೋಟೋಸ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.