Kiccha Sudeep: ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಪಂಚಾಯ್ತಿ ಎಪಿಸೋಡ್ ನಲ್ಲಿ ಧರಿಸುವ ಬಟ್ಟೆ ಬೆಲೆ ಎಷ್ಟು ಗೊತ್ತಾ?

0 17

Kiccha Sudeep: ಬಿಗ್ ಬಾಸ್ ಶೋನ ಬಹುದೊಡ್ಡ ಆಕರ್ಷಣೆ ಕಿಚ್ಚ ಸುದೀಪ್ ಅವರು. ಸುದೀಪ್ ಅವರು ಬರೋ ವೀಕೆಂಡ್ ಪಂಚಾಯಿತಿ ಎಪಿಸೋಡ್ ನೋಡೋದಕ್ಕೆ ಪ್ರತಿ ವಾರ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಸುದೀಪ್ ಅವರ ಸ್ಪರ್ಧಿಗಳಿಗೆ ತಮ್ಮದೇ ಸ್ಜೈಲ್ ನಲ್ಲಿ ತಿಳಿ ಹೇಳುವ ರೀತಿ ವೀಕ್ಷಕರಿಗೆ ಅಚ್ಚುಮೆಚ್ಚು ಎಂದರೆ ತಪ್ಪಲ್ಲ. ಎಪಿಸೋಡ್ ಗೆ ಬಂದಾಗ ಸುದೀಪ್ ಅವರು ಧರಿಸುವ ಬಟ್ಟೆಯ ಬೆಲೆ ಎಷ್ಟು ಗೊತ್ತಾ?

ಸುದೀಪ್ ಅವರು ಕನ್ನಡ ಚಿತ್ರರಂಗದ ಸ್ಟೈಲ್ ಐಕಾನ್ ಅಂದರೆ ತಪ್ಪಲ್ಲ, ಅವರು ಧರಿಸುವ ಬಟ್ಟೆ, ಶೂ, ವಾಚ್, ಗ್ಲಾಸ್ ಇದೆಲ್ಲವೂ ಸ್ಟೈಲ್ ಸ್ಟೇಟ್ಮೆಂಟ್ ಆಗಿರುತ್ತದೆ. ಸುದೀಪ್ ಅವರು ಬಹಳ ಸ್ಟೈಲಿಶ್ ಆಗಿ ಕಾಣಿಸುತ್ತಾರೆ. ಪ್ರತಿ ವಾರವು ಬಣ್ಣ ಬಣ್ಣದ ಜಂಸೂಟ್, ಜ್ಯಾಕೆಟ್ ಗಳು, ಬ್ಲೇಜರ್ ಧರಿಸಿ ಬರುವ ಸುದೀಪ್ ಅವರ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳು ಫಿದಾ ಆಗುತ್ತಾರೆ ಎಂದರೆ ತಪ್ಪಲ್ಲ.

ಸುದೀಪ್ ಅವರು ಧರಿಸುವ ಈ ಬಟ್ಟೆಗಳ ಬೆಲೆ ಎಷ್ಟಿರಬಹುದು ಎನ್ನುವ ಕುತೂಹಲ ಜನರಲ್ಲಿದೆ, ಅಷ್ಟು ಸ್ಟೈಲಿಶ್ ಆಗಿ ಕಾಣುವ ಸುದೀಪ್ ಅವರು ಧರಿಸುವ ಗ್ಲಾಸ್ ನ ಬೆಲೆಯೇ ₹78,000 ಆಗಿರುತ್ತದೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಅವರ ಜ್ಯಾಕೆಟ್ ಬೆಲೆ ₹98,000 ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಹಾಗೆಯೇ ಶೂ ಬೆಲೆ ₹94,700 ರೂಪಾಯಿ ಎನ್ನಲಾಗಿದೆ. ಅಭಿಮಾನಿಗಳು ಇದನ್ನೆಲ್ಲ ನೋಡಿ ಫಿದಾ ಆಗಿದ್ದಾರೆ.

Leave A Reply

Your email address will not be published.