Rachita Ram: ಸೀರೆಯಲ್ಲಿ ಕಂಗೊಳಿಸಿದ ರಚಿತಾ ರಾಮ್! ಅಭಿನಾನಿಗಳಿಂದ ಮೆಚ್ಚುಗೆ.

0 1

Rachita Ram: ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಎಂದೇ ಖ್ಯಾತಿಯಾಗಿರುವ ನಟಿ ರಚಿತಾ ರಾಮ್. ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ರಚಿತಾ, ಹಿಂದಕ್ಕೆ ತಿರುಗಿ ನೋಡಿದ್ದೆ ಇಲ್ಲ. ಕನ್ನಡ ಚಿತ್ರರಂಗದ ಮೇರು ನಟರಾದ ದರ್ಶನ್, ಪುನೀತ್ ರಾಜ್ ಕುಮಾರ್, ಸುದೀಪ್, ಶ್ರೀಮುರಳಿ, ಧ್ರುವ ಸರ್ಜಾ ಸೇರಿದಂತೆ ಎಲ್ಲಾ ಕನ್ನಡ ನಟರ ಜೊತೆಯಲ್ಲೂ ನಟಿಸಿ ಯಶಸ್ಸು ಪಡೆದಿದ್ದಾರೆ. ಚಿತ್ರರಂಗದಲ್ಲಿ ಸುಮಾರು 10 ವರ್ಷಗಳಿಂದ ಇದ್ದಾರೆ.

ಮೊದಲಿಗೆ ಜೀಕನ್ನಡ ವಾಹಿನಿಯ ಅರಸಿ ಧಾರವಾಹಿಯಲ್ಲಿ ನೆಗಟಿವ್ ರೋಲ್ ನಲ್ಲಿ ನಟಿಸುವ ಮೂಲಕ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ರಚಿತಾ ರಾಮ್ ಅವರು ಡಿಬಾಸ್ ದರ್ಶನ್ ಅವರ ಜೊತೆಗೆ ಬುಲ್ ಬುಲ್ ಸಿನಿಮಾ ಮೂಲಕ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇಂದಿಗೂ ಬಹಳ ಬ್ಯುಸಿ ಇರುವ ಹೀರೋಯಿನ್ ಆಗಿದ್ದಾರೆ.

ಇತ್ತೀಚೆಗೆ ಸೂಪರ್ ಮಚ್ಚಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ಈಗ ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿ ಕೂಡ ಬ್ಯುಸಿ ಆಗಿದ್ದಾರೆ, ಪ್ರಸ್ತುತ ಇವರು ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಚಿತಾ ರಾಮ್ ಅವರ ಅಕ್ಕ ಕೂಡ ಬಣ್ಣದ ಲೋಕದಲ್ಲೇ ಇದ್ದಾರೆ..

ಒಂದು ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ರಚಿತಾ ರಾಮ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ರಚಿತಾ ಅವರು ಈಗ ಸೀರೆಯಲ್ಲಿ ಹೊಸದಾಗಿ ಫೋಟೋಶೂಟ್ ಮಾಡಿಸಿ, ಅವುಗಳನ್ನು ಶೇರ್ ಮಾಡಿದ್ದು, ನೆಟ್ಟಿಗರು ಇವರ ಬ್ಯೂಟಿ ನೋಡಿ ಫಿದಾ ಆಗಿದ್ದಾರೆ.

Leave A Reply

Your email address will not be published.