Ramya: ರಮ್ಯಾ ಅವರೊಡನೆ ಫೋಟೋದಲ್ಲಿ ವೈರಲ್ ಆಗಿರುವ ಈ ಹುಡುಗ ಯಾರು?

Written by Pooja Siddaraj

Published on:

Ramya: ಚಂದನವನದ ಸ್ಯಾಂಡಲ್ ವುಡ್ ಕ್ವೀನ್ ಎಂದು ಹೆಸರು ಪಡೆದಿರುವವರು ನಟಿ ರಮ್ಯಾ. ನಟಿ ರಮ್ಯಾ ಅವರು ಆಗಾಗ ಹಲವು ಕಾರಣಗಳಿಂದ ಸುದ್ದಿಯಾಗುತ್ತಾರೆ. ಮೊನ್ನೆಯಷ್ಟೇ ನಡೆದ ಇಂಡಿಯಾ ವರ್ಸಸ್ ಪಾಕಿಸ್ತಾನ್ ಪಂದ್ಯವನ್ನು ನೋಡಲು ನಟಿ ರಮ್ಯಾ ಅವರು ಕೂಡ ಅಹಮದಾಬಾದ್ ಗೆ ಹೋಗಿದ್ದರು. ಆ ವೇಳೆ ರಮ್ಯಾ ಅವರ ಜೊತೆಗಿದ್ದ ವ್ಯಕ್ತಿ ಯಾರು? ಎನ್ನುವ ವಿಚಾರ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಟಿ ರಮ್ಯಾ ಅವರು ಮ್ಯಾಚ್ ನೋಡಿದ ನಂತರ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ರಮ್ಯಾ ಅವರೊಡನೆ ಒಬ್ಬ ಹುಡುಗ ಇದ್ದು, ಅವರಿಬ್ಬರನ್ನು ನೋಡಿದರೆ ಬಹಳ ಕ್ಲೋಸ್ ಫ್ರೆಂಡ್ಸ್ ಎಂದು ಗೊತ್ತಾಗುತ್ತದೆ. ರಮ್ಯಾ ಅವರೊಡನೆ ಇಷ್ಟು ಕ್ಲೋಸ್ ಆಗಿರುವ ಈ ಹುಡುಗ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದ್ದು, ಆ ಹುಡುಗನ ಬಗ್ಗೆ ಮಾಹಿತಿ ಹುಡುಕಲು ಶುರು ಮಾಡಿದ್ದಾರೆ.

ಅಂದ ಹಾಗೆ ರಮ್ಯಾ ಅವರೊಡನೆ ಇರುವ ಈ ಹುಡುಗನ ಹೆಸರು ಸಂಜೀವ್ ಮೋಹನ್. ಇವರೊಡನೆ ರಮ್ಯಾ ಅವರು ಈ ಮೊದಲೇ ಫೋಟೋಸ್ ಶೇರ್ ಮಾಡಿದ್ದಾರೆ. ರಮ್ಯಾ ಅವರ ಹುಟ್ಟುಹಬ್ಬಕ್ಕೆ ಸಹ ಸಂಜೀವ್ ಅವರು ಬರ್ತ್ ಡೇ ವಿಶ್ ಮಾಡುತ್ತಾರೆ. ರಮ್ಯಾ ಅವರ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋಸ್ ಲಾಂಚ್ ಸಮಯದಲ್ಲಿ ಕೂಡ ಸಂಜೀವ್ ಮೋಹನ್ ಜೊತೆಯಾಗಿದ್ದರು. ಇದೀಗ ರಮ್ಯಾ ಅವರೊಡನೆ ಮ್ಯಾಚ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವ್ಯಕ್ತಿ ಯಾರು ಎನ್ನುವ ಕುತೂಹಲ ಇರುವವರಿಗೆ ಉತ್ತರ ಇವರು ರಮ್ಯಾ ಅವರ ಬೆಸ್ಟ್ ಫ್ರೆಂಡ್ ಎಂದು ಹೇಳಲಾಗುತ್ತಿದೆ. ಅದನ್ನು ಹೊರತುಪಡಿಸಿ ಸಂಜೀವ್ ಮೋಹನ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಇನ್ನು ಸಂಜೀವ್ ಮೋಹನ್ ಅವರು ಕೂಡ ರಮ್ಯಾ ಅವರೊಡನೆ ಇರುವ ಕೆಲವು ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಮೊನ್ನೆ ನಡೆದ ಮ್ಯಾಚ್ ಫೋಟೋಸ್ ಗೆ ಅವರು ಕೊಟ್ಟಿರುವ ಕ್ಯಾಪ್ಶನ್ ಬೆಸ್ಟ್ ಫ್ರೆಂಡ್ ಜೊತೆಗೆ ಮ್ಯಾಚ್ ನೋಡಿದ್ದು ಎನ್ನುವ ರೀತಿ ಇದೆ.

ಹಾಗಾಗಿ ಇವರಿಬ್ಬರು ಬೆಸ್ಟ್ ಫ್ರೆಂಡ್ ಗಳೇ ಇರಬಹುದು ಎಂದು ಹೇಳಲಾಗುತ್ತಿದೆ. ಈ ಮೊದಲು ಹಲವು ಪಾರ್ಟಿಗಳಲ್ಲಿ ಮತ್ತು ರಂಹ ಅವರ ಫ್ರೆಂಡ್ಸ್ ಗ್ಯಾಂಗ್ ಜೊತೆಗೆ ಕೂಡ ಸಂಜೀವ್ ಕಾಣಿಸಿಕೊಂಡಿದ್ದಾರೆ. ಮೊನ್ನೆ ರಮ್ಯಾ ಅವರು ಶೇರ್ ಮಾಡಿರುವ ಮ್ಯಾಚ್ ಡೇ ಫೋಟೋಗಳಂತೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

Leave a Comment