Sindhu Menon: ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರ ಜೊತೆಗೂ ಹೀರೋಯಿನ್ ಆಗಿದ್ದ ಸಿಂಧು ಮೆನನ್ ಅವರು ಈಗ ಏನ್ ಮಾಡ್ತಿದ್ದಾರೆ ಗೊತ್ತಾ?

0 22

Sindhu Menon: ಸ್ಯಾಂಡಲ್ ವುಡ್ ನ ಹೆಸರಾಂತ ನಟಿ ಶ್ರುತಿ ಅವರು ನಟಿಸಿದ್ದ ರಶ್ಮಿ ಸಿನಿಮಾದ ಇಬ್ಬನಿ ತಪ್ಪಿದ ಎಲೆಯಲಿ ಹಾಡನ್ನು ಇಂದಿಗು ಯಾರು ಮರೆಯಲು ಸಾಧ್ಯವಿಲ್ಲ. ಈ ಹಾಡನ್ನು ಕೇಳಿದ ತಕ್ಷಣ ರಶ್ಮಿ ಸಿನಿಮಾದ ಈ ಹಾಡಿನಲ್ಲಿ ನಟಿಸಿದ್ದ ಬಾಲನಟಿ ಸಿಂಧು ಮೆನನ್ ಅವರು ನೆನಪಿಗೆ ಬರುತ್ತಾರೆ. ರಶ್ಮಿ ಮತ್ತು ಕೆಲವು ಕನ್ನಡ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿ ಕೆಲ ವರ್ಷಗಳ ನಂತರ ದಕ್ಷಿಣ ಭಾರತದ ಟಾಪ್ ನಟಿಯಾಗಿ ಯಶಸ್ಸು ಪಡೆದವರು ಸಿಂಧು ಮೆನನ್.

ಇವರು ಬೆಂಗಳೂರಿನಲ್ಲಿ ಮಲಯಾಳಿ ಕುಟುಂಬದಲ್ಲಿ ಜನಸಿದರು. 1999 ರಲ್ಲಿ ಪ್ರೇಮ ಪ್ರೇಮ ಪ್ರೇಮ ಸಿನಿಮಾ ಮೂಲಕ ಹೀರೋಯಿನ್ ಆದರು ಸಿಂಧು. ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿಜಯ್ ರಾಘವೇಂದ್ರ ಸೇರಿದಂತೆ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡರು. ಕನ್ನಡ, ಮಲಯಾಳಂ, ತೆಲುಗು, ತಮಿಳು ಮತ್ತು ಇಂಗ್ಲಿಷ್ ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತಾರೆ ಸಿಂಧು ಮೆನನ್.

ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಸ್ಟೇಟ್ ಅವಾರ್ಡ್ ಮತ್ತು ನ್ಯಾಷನಲ್ ಅವಾರ್ಡ್ ಗಳನ್ನು ಪಡೆದಿದ್ದಾರೆ. ಸಿಂಧು ಅವರು ನಟಿಸಿದ್ದು ಕೆಲವು ಸಿನಿಮಾಗಳಲ್ಲಿ ಆದರೂ ಇಂದಿಗು ಇವರನ್ನು ಅಭಿಮಾನಿಗಳು ಮರೆತಿಲ್ಲ. ಮಲಯಾಳಂ ಭಾಷೆಯಲ್ಲಿ ಧಾರವಾಹಿಗಳಲ್ಲಿ ಕೂಡ ನಟಿಸಿದ್ದರು. ಸಿನಿರಂಗದ ಬೇಡಿಕೆಯಲ್ಲಿ ಇರುವಾಗಲೇ ಯುಕೆ ಮೂಲದ ಪ್ರಭು ಎನ್ನುವವರ ಜೊತೆ ಸಿಂಧು ಮೆನನ್ ಅವರ ಮದುವೆ ನಡೆಯಿತು. ಈಗ ಅವರು ಇಂಗ್ಲೆಂಡ್ ನಲ್ಲಿದ್ದಾರೆ.

ಇವರ ಪತಿ ಪ್ರಭು, ಅಲ್ಲಿನ ಪ್ರತಿಷ್ಠಿತ ಐಟಿ ಕಂಪನಿ ಒಂದರಲ್ಲಿ ಅತ್ಯುತ್ತಮ ಹುದ್ದೆಯಲ್ಲಿದ್ದಾರೆ. ಪ್ರಸ್ತುತ ಸಿಂಧು ಮೆನನ್ ಅವರು ಗಂಡ ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಸಿಂಧು ಮೆನನ್ ಅವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಇಬ್ಬರು ಮಕ್ಕಳು. ದೂರದ ಇಂಗ್ಲೆಂಡ್ ದೇಶದಲ್ಲಿ ಇದ್ದರು ಕೂಡ ಮಕ್ಕಳಿಗೆ ಭಾರತ ಸಂಸ್ಕೃತಿ ಸಂಪ್ರದಾಯವನ್ನು ಕಲಿಸುತ್ತಿದ್ದಾರೆ. ಮಕ್ಕಳು ಇನ್ನು ಚಿಕ್ಕವರಾಗಿರುವ ಕಾರಣ ತಮ್ಮ ಸಮಯವನ್ನು ಮಕ್ಕಳಿಗಾಗಿ ಮೀಸಲಾಗಿ ಇಟ್ಟಿದ್ದಾರೆ.

Leave A Reply

Your email address will not be published.