South Actress: ನಟಿಯಾಗೋ ಮೊದಲು ಪಾರ್ಟ್ ಟೈಮ್ ಕೆಲಸಕ್ಕಾಗಿ ಹುಡುಕಾಡುತ್ತಿದ್ರು, ಇಂದು ಈಕೆ ಗ್ಲೋಬಲ್ ಸ್ಟಾರ್

0 28

South Actress: ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಹಳೆಯ ಫೋಟೋಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವು ಫೋಟೋಗಳನ್ನು ನೋಡಿದರೆ, ಅದು ಯಾರು ಎಂದು ಕಂಡು ಹಿಡಿಯುವುದು ಕೂಡ ತುಂಬಾ ಕಷ್ಟ. ಇದೀಗ ಒಬ್ಬ ಸ್ಟಾರ್ ನಟಿಯ ಹಳೆಯ ಫೋಟೋಗಳು ಕೂಡ ವೈರಲ್ ಆಗುತ್ತಿದೆ. ಈಕೆ ಇಂದು ಗ್ಲೋಬಲ್ ಸ್ಟಾರ್. ಆದರೆ ಅಂದು ದಿನದ ಊಟಕ್ಕೂ ಕಷ್ಟಪಡುತ್ತಿದ್ದರು.

ಕಾಲೇಜು ದಿನಗಳಲ್ಲಿ ಹೀಗೆ ಸೀರೆ ಉಟ್ಟು ನಿಂತಿರುವ ನಟಿಯ ಮತ್ಯಾರು ಅಲ್ಲ, ದಕ್ಷಿಣ ಭಾರತ ಚಿತ್ರರಂಗದಿಂದ ಕೆರಿಯರ್ ಶುರು ಮಾಡಿ, ಇಂದು ಹಾಲಿವುಡ್ ವರೆಗು ತಲುಪಿದೆ. ಈ ನಟಿ ಮತ್ಯಾರು ಅಲ್ಲ, ಸೌತ್ ಚಿತ್ರರಂಗದ ಸ್ಟಾರ್ ಆಗಿರುವ ಸಮಂತಾ. ಸಮಂತಾ ಅವರ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಇಂದು ದೊಡ್ಡ ಸ್ಟಾರ್ ಆಗಿರುವ ಸಮಂತಾ ಅವರು ಕೆರಿಯರ್ ಶುರುವಿನಲ್ಲಿ ಬಹಳಷ್ಟು ಕಷ್ಟಗಳನ್ನು ಪಟ್ಟಿದ್ದಾರೆ.

ಸಮಂತಾ ಅವರು ಹುಟ್ಟಿದ್ದು ಮಧ್ಯಮ ವರ್ಗದ ಕುಟುಂಬದಲ್ಲಿ, ಸಮಂತಾ ಅವರಿಗೆ ಹೊರದೇಶಕ್ಕೆ ಹೋಗಿ ಆಡಬೇಕು ಎಂದು ಆಸೆ ಇತ್ತು, ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಸಮಂತಾ ಅವರು ಹೊರದೇಶಕ್ಕೆ ಹೋಗಲು ಆಗಿರಲಿಲ್ಲ. ಚೆನ್ನೈನಲ್ಲೇ ಕಾಲೇಜಿಗೆ ಸೇರಿಕೊಂಡು, ಪಾರ್ಟ್ ಟ್ರೈಮ್ ಕೆಲಸ ಮಾಡುತ್ತಿದ್ದರು. ಸಣ್ಣ ಪುಟ್ಟ ಸೀರೆ ಬ್ರ್ಯಾಂಡ್ ಗಳಿಗೆ ಮಾಡೆಲ್ ಕೂಡ ಆಗಿದ್ದರು ಸಮಂತಾ.

ಅಂದು ತಂದೆ ತಾಯಿಯ ಸಹಾಯ ಪಡೆಯದೇ, ತನ್ನ ಜೀವನ ತಾನು ನೋಡಿಕೊಳ್ಳಬೇಕು ಎಂದುಕೊಂಡಿದ್ದ ಸಮಂತಾ ಅವರು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಬಹಳ ಕಷ್ಟಪಟ್ಟಿದ್ದಾರೆ. ಸಿಗುತ್ತಿದ್ದ ಒಂದೊಂದೇ ಸಣ್ಣ ಪುಟ್ಟ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು, ಮೊದಲು ತೆಲುಗು ಚಿತ್ರರಂಗದಿಂದ ನಟನೆ ಶುರು ಮಾಡಿ, ನಂತರ ತಮಿಳು ಸಿನಿಮಾಗಳಲ್ಲಿ ದೊಡ್ಡ ಸ್ಟಾರ್ ಆಗಿದ್ದಾರೆ ಸಮಂತಾ.

ಬಳಿಕ ಸಮಂತಾ ಅವರು ಬಾಲಿವುಡ್ ಗೆ ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಮೂಲಕ ಎಂಟ್ರಿ ಕೊಟ್ಟು ಅಲ್ಲಿಯೂ ಹೆಸರು ಗಳಿಸಿದರು. ಇಂದು ಸಮಂತಾ ಅವರು ಹಾಲಿವುಡ್ ಗು ಎಂಟ್ರಿ ಕೊಟ್ಟಿದ್ದಾರೆ. ಅಂದು ಅಷ್ಟು ಕಷ್ಟದ ಪರಿಸ್ಥಿತಿಯಲ್ಲಿದ್ದ ಸಮಂತಾ ಅವರು ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ಸಂತೋಷದ ವಿಚಾರ ಆಗಿದೆ.

Leave A Reply

Your email address will not be published.