Kaatera: ಬಿಡುಗಡೆಯಾಗಿ ಮೊದಲ ವಾರಕ್ಕೆ ₹100 ಕೋಟಿ ಗಳಿಕೆ ಮಾಡಿದ ಕಾಟೇರಾ!

0 13

Kaatera: ನಟ ದರ್ಶನ್ ಅವರು 2023ರ ವರ್ಷ ಕೊನೆಯಾಗುವ ವೇಳೆಗೆ ಕಾಟೇರಾ ಸಿನಿಮಾ ಇಂದ ಅಭಿಮಾನಿಗಳ ಎದುರು ಬಂದಿದ್ದಾರೆ. ಈ ಸಿನಿಮಾ ಫಸ್ಟ್ ಲುಕ್ ಬಿಡುಗಡೆಯಾದ ಸಮಯದಿಂದಲೇ ಅಭಿಮಾನಿಗಳ ಗಮನ ಸೆಳೆದಿತ್ತು. ಎಲ್ಲರೂ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಕಾಟೇರಾ ಸಿನಿಮಾಗೆ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮು ನಾಯಕಿಯಾಗಿದ್ದಾರೆ.

ಅಪ್ಪಟ ಕನ್ನಡ ಮಣ್ಣಿನ ಹಳ್ಳಿ ಸೊಗಡಿನ ಕಾಟೇರಾ ಸಿನಿಮಾ ಸಮಾಜದ ಕೆಲವು ಪ್ರಮುಖವಾದ ತೊಂದರೆಗಳ ಬಗ್ಗೆ ಸಂದೇಶ ಸಾರಿರುವ ಸಿನಿಮಾ. ಡಿಸೆಂಬರ್ 29ರಂದು ಬಿಡುಗಡೆಯಾಗಿ ಕಾಟೇರಾ ಭಾರಿ ಸದ್ದು ಮಾಡುತ್ತಿದೆ. ಮೊದಲ ದಿನ ಥಿಯೇಟರ್ ಗಳು, ಮಾಲ್ ಗಳು, ಎಲ್ಲಾ ಕಡೆ ಕಾಟೇರಾ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ದರ್ಶನ್ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಂಥ ಕಂಟೆಂಟ್ ಇರುವ ಸಿನಿಮಾಗಳು ಚಿತ್ರರಂಗದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಮೊನ್ನೆಯಷ್ಟೇ ಕಾಟೇರಾ ಸಿನಿಮಾದ ಸೆಲೆಬ್ರಿಟಿ ಶೋ ನಡೆದು, ಚಿತ್ರರಂಗದ ಗಣ್ಯರು ಸಿನಿಮಾ ನೋಡಿ ಮೆಚ್ಚಿಕೊಂಡರು. ಇನ್ನು ಮೊದಲ ದಿನವೇ ಕಾಟೇರಾ ಸಿನಿಮಾ 19.70 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿತ್ತು, ಇದೀಗ 6 ದಿನಗಳಲ್ಲಿ 52 ಲಕ್ಷಕ್ಕಿಂತ ಹೆಚ್ಚು ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿದ್ದು, ಬರೋಬ್ಬರಿ 104 ಕೋಟಿ ಹಣಗಳಿಕೆ ಮಾಡಿದೆ ಕಾಟೇರಾ. ಈ ವಿಚಾರವನ್ನು ನಟ ದರ್ಶನ್ ಅವರ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ..

ಕಾಟೇರಾ ಸಿನಿಮಾ ನೋಡಲು ಜನರು ಮುನ್ನುಗ್ಗಿ ಥಿಯೇಟರ್ ಗೆ ಬರುತ್ತಿದ್ದಾರೆ. 2023ರ ಕೊನೆಯಲ್ಲಿ ಬಿಡುಗಡೆಯಾಗಿ ಆ ಸಾಲಿನ ಅತ್ಯುತ್ತಮ ಚಿತ್ರದ ಸಾಲಿಗೆ ಕಾಟೇರಾ ಸೇರಿದ್ದು, ಜನರ ರೆಸ್ಪಾನ್ಸ್ ಚೆನ್ನಾಗಿರುವ ಕಾರಣ ಶೀಘ್ರದಲ್ಲೇ ವಿದೇಶದಲ್ಲಿ ಕೂಡ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಹೊಂದಿದೆ ಚಿತ್ರತಂಡ.

Leave A Reply

Your email address will not be published.