Guru Kiran: ಸಂಗೀತ ನಿರ್ದೇಶಕ ಗುರುಕಿರಣ್ ಅತ್ತೆ ಮನೆಯಲ್ಲಿ 2.5 ಲಕ್ಷ ಕಳ್ಳತನ! ಕದ್ದಿರೋದು ಮನೆ ಕೆಲಸದವರಾ?

0 20

Guru Kiran: ಈಗಿನ ಕಾಲದಲ್ಲಿ ಕಳ್ಳತನ ಯಾರ ಮನೆಯಲ್ಲಿ ಬೇಕಾದರೂ ನಡೆಯಬಹುದು. ಸೆಲೆಬ್ರಿಟಿಗಳ ಮನೆಗಳು ಇದಕ್ಕೆ ಹೊರತಾಗಿಲ್ಲ. ಇದೀಗ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್ ಅವರ ಅತ್ತೆಯ ಮನೆಯಲ್ಲಿ ಕಳ್ಳತನ ನಡೆದು ಹೋಗಿದೆ. ಅಷ್ಟಕ್ಕೂ ಏನಾಗಿದೆ ಗೊತ್ತಾ?

ಗುರು ಕಿರಣ್ ಅವರ ಅತ್ತೆ ಮನೆ ಇರುವುದು ಬೆಂಗಳೂರಿನ ಚಂದ್ರಲೇಔಟ್ ನಲ್ಲಿ ಇದೆ, ಡಿಸೆಂಬರ್ 31ರಂದು ಇವರ ಅತ್ತೆ ಮನೆಯಲ್ಲಿ 2.5 ಲಕ್ಷ ರೂಪಾಯಿಗಳನ್ನು ಇಟ್ಟಿದ್ದರು. ಆದರೆ ಜನವರಿ 5ರ ವೇಳೆಗೆ, ಹಣ ಮನೆಯಿಂದ ಕಳುವಾಗಿದೆ. ಎಲ್ಲರೂ ಕೂಡ 2 ದಿನಗಳ ಕಾಲ ಇಡೀ ಮನೆಯಲ್ಲಿ ಹುಡುಕಾಡಿದ್ದಾರೆ. ಆದರೆ ಎಷ್ಟೇ ಹುಡುಕಿದರೂ ಸಹ ಹಣ ಪತ್ತೆಯಾಗಿಲ್ಲ.

ಹಾಗಾಗಿ ಜನವರಿ 7ರಂದು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರ ಬಳಿ ಗುರುಕಿರಣ್ ಅವರ ಅತ್ತೆ, ಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಏನು ಎಂದರೆ, ಹಣ ಇಟ್ಟಿದ್ದ ರೂಮ್ ಗೆ ಆಕೆಯನ್ನು ಬಿಟ್ಟು ಬೇರೆ ಯಾರು ಹೊರಗಿನವರು ಹೋಗಿಲ್ಲ ಎನ್ನಲಾಗಿದ್ದು, ಈ ಕಾರಣಕ್ಕೆ ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ..

ಸಧ್ಯಕ್ಕೆ ಪೊಲೀಸರು ಆಕೆಯನ್ನು ಸ್ಟೇಶನ್ ಗೆ ಕರೆಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಕೂಡ ಕಳೆದು ಹೋಗಿರುವ ಹಣ ಸಿಕ್ಕಿಲ್ಲ. ಈ ಪ್ರಕರಣ ಯಾವ ರೀತಿ ಸಾಗುತ್ತದೆ ಎಂದು ನೋಡಬೇಕಿದೆ.

Leave A Reply

Your email address will not be published.