Darshan: ದುಬೈನಲ್ಲಿ ಪ್ರಾಣಿಗಳ ಜೊತೆಗೆ ಕಾಣಿಸಿಕೊಂಡ ಡಿಬಾಸ್ ದರ್ಶನ್!

Written by Pooja Siddaraj

Published on:

Darshan: ನಟ ದರ್ಶನ್ ಅವರು ಈಗ ಕಾಟೇರಾ ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ನಟ ದರ್ಶನ್ ಅವರ ಸಿನಿಮಾ ಕಾಟೇರಾ ಡಿಸೆಂಬರ್ 29ರಂದು ಬಿಡುಗಡೆಯಾಗಿ ಭಾರಿ ಯಶಸ್ವಿಯಾಗಿದೆ. ಸಿನಿಮಾದಲ್ಲಿರುವ ಕಥೆ ಎಲ್ಲರಿಗೂ ಇಷ್ಟವಾಗಿದ್ದು, ವಿದೇಶದಲ್ಲಿರುವ ದರ್ಶನ್ ಅವರ ಅಭಿಮಾನಿಗಳು ಕೂಡ ತಮ್ಮ ದೇಶದಲ್ಲಿ ಕಾಟೇರಾ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು.

ಅಭಿಮಾನಿಗಳ ಕೋರಿಕೆಯ ಹಾಗೆ ಡಿಬಾಸ್ ದರ್ಶನ್ ಅವರು ಕಾಟೇರಾ ಸಿನಿಮಾವನ್ನು ದುಬೈ ನಲ್ಲಿ ಬಿಡುಗಡೆ ಮಾಡಿದ್ದು, ಇಡೀ ಕಾಟೇರಾ ತಂಡ ದುಬೈನಲ್ಲಿ ರಿಲೀಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು. ಹಾಗೆಯೇ ದರ್ಶನ್ ಅವರು ದುಬೈ ಪ್ರವಾಸ ಮಾಡುತ್ತಿದ್ದಾರೆ. ದರ್ಶನ್ ಅವರು ಪ್ರಾಣಿಪ್ರಿಯ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ.

ದುಬೈ ನಲ್ಲಿ ಕೂಡ ನಟ ದರ್ಶನ್ ಅವರು ಹಾವು, ಟೈಗರ್ ಗಳ ಜೊತೆಗೆ ಸಮಯ ಕಳೆದಿದ್ದಾರೆ. ಪ್ರಾಣಿಗಳಿಗೆ ದರ್ಶನ್ ಅವರು ಪ್ರೀತಿ ತೋರಿಸುತ್ತಿರುವ ಫೋಟೋಸ್ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ದರ್ಶನ್ ಅವರು ಈ ರೀತಿ ನೋಡಿ, ಅಭಿಮಾನಿಗಳು ಕೂಡ ಸಂತೋಷಪಟ್ಟಿದ್ದಾರೆ.

Leave a Comment