Virat Kohli Son: ಹುಟ್ಟುತ್ತಲೇ ಮಹಾನ್ ದಾಖಲೆ ಬರೆದ ಕಿಂಗ್ ಕೊಹ್ಲಿ ಮಗ! ಏನದು ಗೊತ್ತಾ?

0 41

Virat Kohli Son: ಕ್ರಿಕೆಟರ್ ಗಳು ಸಿನಿಮಾ ಕಲಾವಿದರನ್ನು ಮದುವೆ ಆಗಿರುವುದು ಹೊಸ ವಿಚಾರ ಅಲ್ಲ. ಈ ಹಿಂದೆಯೇ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ. ಅದೇ ಸಾಲಿಗೆ ಸೇರುವ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ ಈ ಜೋಡಿ, 2017ರಲ್ಲಿ ಇಟಲಿಯಲ್ಲಿ ತಮ್ಮ ಆತ್ಮೀಯ ಬಳಗದವರ ಸಮ್ಮುಖದಲ್ಲಿ ಮದುವೆಯಾದರು. ಈ ಜೋಡಿ ಇಂದು ಎಲ್ಲಾ ಅಭಿಮಾನಿಗಳ ಮೆಚ್ಚಿನ ಜೋಡಿ ಆಗಿದ್ದಾರೆ ಎಂದರೆ ತಪ್ಪಲ್ಲ.

ವಿರುಷ್ಕಾ ದಂಪತಿಗೆ ಪ್ರಪಂಚಾದ್ಯಂತ ಕೋಟಿಗಟ್ಟಲೇ ಅಭಿಮಾನಿಗಳಿದ್ದಾರೆ. ಈ ಜೋಡಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತದೆ. ಇತ್ತೀಚಿನ ಕೆಲ ದಿನಗಳಿಂದ ಈ ಜೋಡಿಯ ಬಗ್ಗೆ ಒಂದು ಸಿಹಿ ಸುದ್ದಿ ಕೇಳಿಬಂದಿತ್ತು, ಅದೇನು ಎಂದರೆ, ಇವರಿಬ್ಬರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿತ್ತು, ಆದರೆ ಇಬ್ಬರು ಕೂಡ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರಲಿಲ್ಲ.

ವಿರಾಟ್ ಅನುಷ್ಕಾ ದಂಪತಿಗಳಿಗೆ 2021ರಲ್ಲಿ ಹೆಣ್ಣುಮಗು ಜನಿಸಿತು. ತಮ್ಮ ಮುದ್ದು ಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ ಈ ಜೋಡಿ. ಇವರಿಬ್ಬರು ಕೂಡ ಇದುವರೆಗೂ ತಮ್ಮ ಮಗುವಿನ ಮುಖವನ್ನು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿಲ್ಲ. ಮಗುವಿನ ವಿಚಾರದಲ್ಲಿ ತಮಗೆ ಪ್ರೈವೆಸಿ ನೀಡಬೇಕು ಎಂದು ಮಾಧ್ಯಮದವರನ್ನು ಕೂಡ ಕೇಳಿಕೊಂಡಿದ್ದಾರೆ. ಮಗುವಿಗೆ 2 ವರ್ಷ ತುಂಬಿದ್ದರು ಈಗಲೂ ಅದೇ ಮಾತನ್ನು ಪಾಲಿಸಿಕೊಂಡು ಬರುತ್ತಿದ್ದಾರೆ..

ನಿನ್ನೆಯಷ್ಟೇ ಈ ಜೋಡಿ ತಮ್ಮ ಎರಡನೇ ಮಗುವಿನ ಬಗ್ಗೆ ತಿಳಿಸಿದ್ದಾರೆ. ಫೆಬ್ರವರಿ 5ರಂದು ವಿರಾಟ್ ಅನುಷ್ಕಾ ದಂಪತಿಗೆ ಎರಡನೇ ಮಗು ಜನಿಸಿದ್ದು, ಮಗುವಿನ ಹೆಸರು ಅಕಾಯ್. ಈ ಬಗ್ಗೆ ಜೋಡಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಪೋಸ್ಟ್ ಹಾಕಿದ ಕೆಲವೇ ಸಮಯದಲ್ಲಿ ವಿರಾಟ್ ಕೊಹ್ಲಿ ಅವರ ಮಗ ದಾಖಲೆ ಬರೆದಿದ್ದಾರೆ. ಹಾಗೆಯೇ ಈ ಜೋಡಿಗೆ ಎಲ್ಲಾ ಕಡೆಯಿಂದ ಶುಭಾಶಯ ಕೇಳಿಬರುತ್ತಿದೆ.

ವಿರಾಟ್ ಅವರು ಮ್ಯಾಚ್ ನಲ್ಲಿ ದಾಖಲೆ ಬರೆದರೆ, ಅವರ ಮಗ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ದಾಖಲೆ ಬರೆದಿದ್ದಾರೆ. ಆ ದಾಖಲೆ ಏನು ಎಂದರೆ, ಇಡೀ ಏಷ್ಯಾದಲ್ಲೇ ಅತ್ಯಂತ ವೇಗವಾಗಿ 5 ಮಿಲಿಯನ್ ಲೈಕ್ಸ್ ಪಡೆದ ಪೋಸ್ಟ್ ಇದಾಗಿದ್ದು, ವಿರಾಟ್ ಅವರ ಮಗ ದೊಡ್ಡ ದಾಖಲೆ ಬರೆದಿದ್ದಾರೆ.

Leave A Reply

Your email address will not be published.