Actress: ತನ್ನ ಮನೆಯಲ್ಲೇ ನೇ*ಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ನಟಿ

0 17

Actress: ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ನಿಜಕ್ಕೂ ನಮಗೆ ಶಾಕ್ ನೀಡುವುದಂತೂ ಖಂಡಿತ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ ಎಂದುಕೊಳ್ಳುವಷ್ಟರಲ್ಲೇ, ಚಿತ್ರರಂಗದಿಂದ ಕೇಳಿಬರುಗ ಯಾವುದಾದರೊ ಒಂದು ಸುದ್ದಿ, ಮನಸ್ಸಿಗೆ ಬಹಳ ನೋವು ತರುತ್ತದೆ. ಇದೀಗ ಅಂಥದ್ದೇ ಒಂದು ಘಟನೆ ನಡೆದಿದ್ದು, ಅದರ ಬಗ್ಗೆ ತಿಳಿಸುತ್ತೇವೆ ನೋಡಿ..

ಮಲಯಾಳಂ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಸಕ್ರಿಯವಾಗಿದ್ದ ಖ್ಯಾತ ನಟಿ ರೆಂಜುಶ ಮೆನನ್ ಅವರು ಇದ್ದಕ್ಕಿದ್ದ ಹಾಗೆ ತಮ್ಮದೇ ಮನೆಯ ರೂಮ್ ನಲ್ಲಿ, ನಿನ್ನೆ ಬೆಳಿಗ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರೆಂಜುಶ ಮೆನನ್ ಅವರು ಕೇರಳದ ತಿರುವನಂತಪುರಂನಲ್ಲಿರುವ ಶ್ರೀಕಾರ್ಯಮ್ ಅಪಾರ್ಟ್ಮೆಂಟ್ ನಲ್ಲಿ ತಮ್ಮ ಕುಟುಂಬದ ಜೊತೆಗೆ ವಾಸ ಮಾಡುತ್ತಿದ್ದರು ಎನ್ನಲಾಗಿದೆ.

ನಿನ್ನೆ ಬೆಳಿಗ್ಗೆ ಎಷ್ಟು ಹೊತ್ತಾದರೂ ರೂಮ್ ಬಾಗಿಲು ತೆಗೆಯದ ಕಾರಣ ಮನೆಯವರು ಹೋಗಿ ನೋಡಿದಾಗ, ಈ ರೀತಿ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ನಟಿ ರೆಂಜುಶ ಮೆನನ್ ಅವರು ಕಿರುತೆರೆಯಲ್ಲಿ ಹೆಸರು ಮಾಡಿದ್ದ ನಟಿ ಎನ್ನುವುದರ ಜೊತೆಗೆ ಪ್ರೊಡ್ಯುಸರ್ ಸಹ ಆಗಿದ್ದರು. ಅವರಿಗೆ ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಆಗಿರುವ ಕಾರಣದಿಂದ, ಈ ರೀತಿ ಮಾಡಿಕೊಂಡಿರಬಹುದು ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ.

ಆದರೆ ಪೊಲೀಸರು ಮುಂದಿನ ಎಲ್ಲಾ ವಿಚಾರಗಳನ್ನು ತನಿಖೆಯ ಮೂಲಕ ತಿಳಿಸಲಿದ್ದಾರೆ. ರೆಂಜುಶ ಮೆನನ್ ಅವರು ಹಲವು ವರ್ಷಗಳಿಂದ ಮಲಯಾಳಂ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಸಕ್ರಿಯವಾಗಿರುವ ನಟಿ, ಇವರ ಕೆರಿಯರ್ ಶುರುವಾಗಿದ್ದು ಕಿರುತೆರೆ ನಿರೂಪಕಿಯಾಗಿ. ಈವರೆಗೂ 20ಕ್ಕಿಂತ ಹೆಚ್ಚು ಧಾರವಾಹಿಗಳಲ್ಲಿ ಸಹ ನಟಿಸಿದ್ದಾರೆ. ಕೈರಾಲಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ, ನಕ್ಷತ್ರದೀಪಂಗಲ್ ಎನ್ನುವ ರಿಯಾಲಿಟಿ ಶೋನಲ್ಲಿ ಸ್ಪರ್ದಿಯಾಗಿದ್ದರು.

ಒನ್ ವೇ ಟಿಕೆಟ್, ವಾಧ್ಯರ್, ವೀಡು ಸೇರಿದಂತೆ 20ಕ್ಕಿಂತ ಹೆಚ್ಚು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇವರು ನಟಿ ಎನ್ನುವುದರ ಜೊತೆಗೆ ನೃತ್ಯಗಾರ್ತಿ ಕೂಡ ಹೌದು, ಇಂಗ್ಲಿಷ್ ವಿಷಯದಲ್ಲಿ ಮಾಸ್ಟರ್ಸ್, ಭಾರತನಾಟ್ಯಮ್ ನಲ್ಲಿ ಡಿಗ್ರಿ ಮಾಡಿದ್ದಾರೆ. ಆದರೆ ಹಣಕಾಸಿನ ಸಮಸ್ಯೆಯ ಕಾರಣ ಈ ರೀತಿ ಮಾಡಿಕೊಂಡಿದ್ದಾರೆ ನಟಿ ರೆಂಜುಶ ಮೆನನ್. ಮಲಯಾಳಂ ಕಿರುತೆರೆ ಲೋಕಕ್ಕೆ ಇದು ದೊಡ್ಡ ಶಾಕ್ ಎಂದರೆ ತಪ್ಪಲ್ಲ.

Leave A Reply

Your email address will not be published.