Allu Arha: Jr. NTR ಸಿನಿಮಾದಲ್ಲಿ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹ ನಟನೆ! ಮಗುವಿನ ಸಂಭಾವನೆ ಎಷ್ಟು ಲಕ್ಷ ಗೊತ್ತಾ?

Written by Pooja Siddaraj

Published on:

Allu Arha: ನಟ ಜ್ಯೂನಿಯರ್ ಎನ್ಟಿಆರ್ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಹಾಗಿಲ್ಲ. RRR ಸಿನಿಮಾ ಯಶಸ್ಸಿನ ನಂತರ ಇವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಯಶಸ್ವಿಯಾಗಿದ್ದಾರೆ. ಇವರ ಮುಂದಿನ ಸಿನಿಮಾ ದೇವರ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದು, ಕೆಲ ನಿಮಿಷಗಳ ಪಾತ್ರಕ್ಕೆ ಅಲ್ಲು ಅರ್ಜುನ್ ಅವರ ಮಗಳಿಗೆ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ತೆಲುಗು ಚಿತ್ರರಂಗದ ಸ್ಟಾರ್ ಗಳಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಾಯಕರು ಜೂನಿಯರ್ ಎನ್ಟಿಆರ್ ಹಾಗೂ ಅಲ್ಲು ಅರ್ಜುನ್. ಇವರಿಬ್ಬರು ತಮ್ಮದೇ ಆದ ಸ್ಟೈಲ್ ಸಿನಿಮಾಗಳನ್ನು ಮಾಡುತ್ತಾ, ದೊಡ್ಡ ಫ್ಯಾನ್ ಬೇಸ್ ಗಳಿಸಿದ್ದಾರೆ. ಈ ಇಬ್ಬರು ಕೂಡ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಈಗ ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹ ಜೂನಿಯರ್ ಎನ್ಟಿಆರ್ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ವಿಚಾರ ವೈರಲ್ ಆಗಿದೆ.

ಈ ಸಿನಿಮಾದಲ್ಲಿ ನಟಿ ಜಾನ್ವಿ ಕಪೂರ್ ಅವರು ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. 2024ರ ಏಪ್ರಿಲ್ ನಲ್ಲಿ ಸಿನಿಮಾ ತೆರೆಕಾಣಲಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನ ಮತ್ತೊಬ್ಬ ನಟ ಸೈಫ್ ಅಲಿ ಖಾನ್ ಅವರು ನಟಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಈಗ ಅಲ್ಲು ಅರ್ಹ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ವಿಶೇಷ ಪಾತ್ರದಲ್ಲಿ ನಟಿಸಲಿರುವ ಅಲ್ಲು ಅರ್ಹ ಅವರಿಗೆ 20 ಲಕ್ಷದ ಸಂಭಾವನೆ ಕೊಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.

ಅಲ್ಲು ಅರ್ಹ ಅವರು ನಟಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನಟಿ ಸಮಂತಾ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದ ಶಾಕುಂತಲಂ ಸಿನಿಮಾದಲ್ಲಿ ಅಲ್ಲು ಅರ್ಹ ನಟಿಸಿದ್ದರು. ಚಿಕ್ಕ ವಯಸ್ಸಿಗೆ ಒಳ್ಳೆಯ ಟ್ಯಾಲೆಂಟ್ ಇದೆ ಎಂದು ಎಲ್ಲರಿಂದ ಅಲ್ಲು ಅರ್ಹ ಅವರಿಗೆ ಪ್ರಶಂಸೆ ಸಿಕ್ಕಿತ್ತು.

Leave a Comment