Health Tips: ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಕಡಿಮೆ ಆಗಬೇಕು ಎಂದರೆ ಈ ಈ ರೀತಿ ಮಾಡಿ

0 31

Health Tips: ಈಗ ಬಹುತೇಕ ಜನರು ಶುಗರ್ ಅಥವಾ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈಗಿನ ಲೈಫ್ ಸ್ಟೈಲ್, ಅನಾರೋಗ್ಯಕರ ಆಹಾರ ಪದ್ಧತಿ, ಒತ್ತಡ ಹೀಗೆ ಅನೇಕ ಕಾರಣಗಳಿಂದ ಶುಗರ್ ಶುರುವಾಗುತ್ತದೆ. ರಕ್ತದಲ್ಲಿ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ನೀವು ಈ ಒಂದು ಸಣ್ಣ ಕೆಲಸ ಮಾಡಿದರೆ ಸಾಕು. ಮನೆಯಲ್ಲೇ ಲಭ್ಯವಿರುವ ವಸ್ತುಗಳಲ್ಲೇ ಎಲ್ಲಾ ಲಾಭ ಸಿಗುತ್ತದೆ..

ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ನಲ್ಲಿ ಇಡುವುದಕ್ಕೆ ಸಹಾಯ ಮಾಡುವುದು ಕಪ್ಪು ಎಳ್ಳು. ಹೌದು, ಮನೆಯಲ್ಲಿ ಯಾವಾಗಲೂ ಇರುವ ಪದಾರ್ಥ ಇದು. ಇದನ್ನು ಬಳಸಿದರೆ ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ನಲ್ಲಿ ಇರುತ್ತದೆ. ಕಪ್ಪು ಎಳ್ಳಿನಲ್ಲಿ ಪ್ರೋಟಿನ್ ಇರುತ್ತದೆ, ಇದರಲ್ಲಿ ಪಿನೊರೆಸಿನಾಲ್ ಎನ್ನುವ ಅಂಶ ಸಹ ಇರುತ್ತದೆ. ನಮ್ಮ ಆರೋಗ್ಯದಲ್ಲಿ ಕಿಣ್ವ ರಚನೆ ಆಗುವ ಪ್ರಕ್ರಿಯೆಯಲ್ಲಿ ಎಳ್ಳು ಸಹಾಯ ಮಾಡುತ್ತದೆ..ಹಾಗಾಗಿ ಇದು ಶುಗರ್ ಲೆವೆಲ್ ಕಡಿಮೆ ಮಾಡಲಿದ್ದು, ಕಪ್ಪು ಎಳ್ಳನ್ನು ಹೇಗೆ ಸೇವಿಸಬೇಕು ಎಂದು ತಿಳಿಯೋಣ..

ಫ್ರೈ ಮಾಡಿ ತಿನ್ನಿ:
ಕಪ್ಪು ಎಳ್ಳನ್ನು ಒಂದು ಬಾಣಲೆಯಲ್ಲಿ ಫ್ರೈ ಮಾಡಿ ಇಟ್ಟುಕೊಳ್ಳಿ. ಪ್ರತಿ ದಿನ ಹುರಿದಿರುವ ಕಪ್ಪು ಎಳ್ಳನ್ನು ಒಂದು ಸ್ಪೂನ್ ತಿನ್ನಿ. ಬಳಿಕ ನೀರು ಕುಡಿಯಿರಿ. ಇದರಿಂದ ಶುಗರ್ ಲೆವೆಲ್ ಕಂಟ್ರೋಲ್ ನಲ್ಲಿ ಇರುವುದಕ್ಕೆ ಸಹಾಯ ಆಗುತ್ತದೆ.

ನೀರಿನಲ್ಲಿ ನೆನೆಸಿ:
ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ನೀರಿಗೆ ಎರಡು ಸ್ಪೂನ್ ಕಪ್ಪು ಎಳ್ಳು ಸೇರಿಸಿ, ಇಡೀ ರಾತ್ರಿ ನೆನೆಸಿ ಇಡೀ. ಬೆಳಗ್ಗೆ ಎದ್ದ ನಂತರ ಈ ನೀರನ್ನು ಕುಡಿಯಿರಿ. ಇದರಿಂದ ನಿಮ್ಮ ದೇಹಕ್ಕೆ ಒಳ್ಳೆಯದು, ಹಾಗೆಯೇ ಶುಗರ್ ಲೆವೆಲ್ ಕಡಿಮೆಯಾಗುತ್ತದೆ.

ಕಪ್ಪು ಎಳ್ಳು ಸೇವಿಸುವುದರಿಂದ ಏನೆಲ್ಲಾ ಅನುಕೂಲ ಎಂದು ನೋಡುವುದಾದರೆ.. ಬ್ಲಡ್ ಸರ್ಕ್ಯುಲೇಶನ್ ಅನ್ನು ಉತ್ತಮವಾಗಿಸುತ್ತದೆ. ಶುಗರ್ ಇರುವವರಿಗೆ ಸುಸ್ತಾಗುವುದನ್ನು ಕಡಿಮೆ ಮಾಡುತ್ತದೆ. ದೇಹದ ಎಲ್ಲಾ ಅಂಗಗಳು ಆರೋಗ್ಯವಾಗಿ ಇರುವ ಹಾಗೆ ನೋಡಿಕೊಳ್ಳುತ್ತದೆ.

Leave A Reply

Your email address will not be published.