Aryavardhan Guruji: ಇದೀಗ ನಮ್ಮ ರಾಜ್ಯದಲ್ಲಿ ವರ್ತೂರ್ ಸಂತೋಷ್ ಮತ್ತು ಡಿಬಾಸ್ ದರ್ಶನ್ ಅವರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿದ್ದ ವರ್ತೂರ್ ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಮಾಡಲಾಗಿದೆ. ಅರಣ್ಯಾಧಿಕಾರಿಗಳು ವರ್ತೂರ್ ಸಂತೋಷ್ ಅವರ ಬಳಿ ಹುಲಿ ಉಗುರಿನ ಪೆಂಡೆಂಟ್ ಇರುವ ಚಿನ್ನದ ಚೈನ್ ಧರಿಸಿರುವುದಕ್ಕೆ ಅರೆಸ್ಟ್ ಮಾಡಿದ್ದಾರೆ.
ವರ್ತೂರ್ ಸಂತೋಷ್ ಅವರನ್ನು ವಿಚಾರಣೆ ನಡೆಸಿ, ಎಲ್ಲಾ ಮಾಹಿತಿ ಪಡೆದುಕೊಂಡ ನಂತರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ, ವರ್ತೂರ್ ಸಂತೋಷ್ ಅವರು ಜೈಲು ಸೇರಿದ್ದಾಗಿದೆ. ಈ ಘಟನೆ ಬಳಿಕ ಡಿಬಾಸ್ ದರ್ಶನ್ ಅವರ ಮೇಲೆ ಕೂಡ ದೂರು ದಾಖಲಾಯಿತು. ಅದಾದ ಬಳಿಕ ನಟ ಜಗ್ಗೇಶ್ ಅವರು ತಮ್ಮ ಬಳಿ ಇರುವ ಹುಲಿ ಉಗುರಿನ ಉಂಗುರ ತೋರಿಸಿ ಮಾತನಾಡಿರುವ ವಿಚಾರ ಕೂಡ ವೈರಲ್ ಆಯಿತು.
ಅಷ್ಟೇ ಅಲ್ಲದೆ, ಕನ್ನಡದ ಇನ್ನು ಬೇರೆ ಕಲಾವಿದರು ಶಿವ ರಾಜ್ ಕುಮಾರ್, ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ ಇವರೆಲ್ಲರ ಬಳಿ ಹುಲಿ ಉಗುರಿನ ಪೆಂಡೆಂಟ್ ಇರುವ ಬಗ್ಗೆ ಚರ್ಚೆಯಾಯಿತು. ಇದೀಗ ಬಿಗ್ ಬಾಸ್ ಶೋ ನ ಮಾಜಿ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಮೇಲು ಕೂಡ ಇದೇ ಆರೋಪ ಕೇಳಿಬಂದಿದ್ದು, ಇವರು ಕೂಡ ಹುಲಿ ಉಗುರಿನ ಉಂಗುರ ಧರಿಸಿದ್ದ ವಿಚಾರ ಈಗ ವೈರಲ್ ಆಗಿದೆ.
ಕಳೆದ ವರ್ಷ ಲಾಂಚ್ ಆದ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ನಲ್ಲಿ ಆರ್ಯವರ್ಧನ್ ಗುರುಜಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಶೋ ಲಾಂಚ್ ದಿವಸ ಹುಲಿ ಉಗುರಿನ ಪೆಂಡೆಂಟ್ ಧರಿಸಿ ಬಂದಿದ್ದ ಗುರೂಜಿ ಇಡೀ ಸೀಸನ್ ನಲ್ಲಿ ಅದೇ ಚೈನ್ ಹಾಕಿಕೊಂಡಿದ್ದರು. ಇದನ್ನೆಲ್ಲ ಚೆಕ್ ಮಾಡಿದ ನಂತರ ಅರಣ್ಯಾಧಿಕಾರಿಗಳು ಆರ್ಯವರ್ಧನ್ ಗುರುಜಿ ಅವರಿಗೆ ನೋಟಿಸ್ ಕಳಿಸಿದ್ದರು ಎಂದು ಹೇಳಲಾಗುತ್ತಿದೆ.
ಆರ್ಯವರ್ಧನ್ ಗುರೂಜಿ ಅಧಿಕಾರಿಗಳಿಗೆ ಸಹಕರಿಸಿದ್ದು, ಆ ಚಿನ್ನದ ಚೈನ್ ಅನ್ನು ಅಧಿಕಾರಿಗಳಿಗೆ ನೀಡಿದ್ದು, ಆ ಚೈನ್ ಅನ್ನು ಚಿನ್ನದ ಅಂಗಡಿಗೆ ತೆಗೆದುಕೊಂಡು ಹೋಗಿ, ಪೆಂಡೆಂಟ್ ಅನ್ನು ಮಾತ್ರ ಪರಿಶೀಲಿಸಲು ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ಆರ್ಯವರ್ಧನ್ ಅವರಿಂದ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ, ಶೀಘ್ರದಲ್ಲೇ ಈ ವಿಚಾರದ ಬಗ್ಗೆ ಅಧಿಕೃತವಾಗಿ ತಿಳಿಸುತ್ತಾರೆ ಎಂದು ಮಾಹಿತಿ ಸಿಕ್ಕಿದೆ.