Deepika Padukone: ರಣವೀರ್ ಜೊತೆಗಿದ್ದಾಗಲೇ ಬೆರೆಯವರೊಡನೆ ಡೇಟ್ ಮಾಡ್ತಿದ್ರಂತೆ ದೀಪಿಕಾ ಪಡುಕೋಣೆ, ಶಾಕಿಂಗ್ ವಿಚಾರ ಬಯಲು

0 22

Deepika Padukone: ಕರ್ನಾಟಕದ ಹುಡುಗಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ, ಕನ್ನಡದಲ್ಲಿ ಉಪೇಂದ್ರ ಅವರೊಡನೆ ಐಶ್ವರ್ಯ ಸಿನಿಮಾದಲ್ಲಿ ನಟಿಸಿದ ದೀಪಿಕಾ ಪಡುಕೋಣೆ ಇಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಸ್ಟಾರ್ ನಟಿ. ಅತಿದೊಡ್ಡ ಅಭಿಮಾನಿ ಬಳಗ ಗಳಿಸಿಕೊಂಡಿರುವ ದೀಪಿಕಾ ಪಡುಕೋಣೆ ಅವರು ಇದೀಗ ತಮ್ಮ ಪರ್ಸನಲ್ ಲೈಫ್ ಬಗ್ಗೆ ಕೊಟ್ಟಿರುವ ಹೇಳಿಕೆ ಭಾರಿ ವೈರಲ್ ಆಗಿದೆ.

ನಟಿ ದೀಪಿಕಾ ಪಡುಕೋಣೆ ಓಂ ಶಾಂತಿ ಓಂ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು, ಮೊದಲ ಸಿನಿಮಾದಲ್ಲೇ ಸ್ಟಾರ್ ಆದ ದೀಪಿಕಾ ಅವರು, ಬಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟಿ ಎನ್ನಿಸಿಕೊಂಡಿದ್ದು ಮಾತ್ರವಲ್ಲದೆ, ಹಾಲಿವುಡ್ ಸಿನಿಮಾದಲ್ಲಿ ಕೂಡ ನಟಿಸಿ ಹೆಸರು ಮಾಡಿದ್ದಾರೆ. ದೀಪಿಕಾ ಅವರಿಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲಿ ಕೂಡ ಸಾಕಷ್ಟು ಅಭಿಮಾನಿಗಳಿದ್ದಾರೆ..

ದೀಪಿಕಾ ಪಡುಕೋಣೆ ಅವರು ನಮ್ಮ ದೇಶದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಮತ್ತು ಅತಿಹೆಚ್ಚು ಬೇಡಿಕೆ ಹೊಂದಿರುವ ನಟಿ ಕೂಡ ಹೌದು. ಇನ್ನು ದೀಪಿಕಾ ಅವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ ಇವರು ಬಾಲಿವುಡ್ ನಟ ರಣವೀರ್ ಸಿಂಗ್ ಅವರೊಡನೆ ಮದುವೆಯಾಗಿ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಮದುವೆ ಬಳಿಕ ಮೊದಲ ಸಾರಿ ರಣವೀರ್ ಮತ್ತು ದೀಪಿಕಾ ಜೊತೆಯಾಗಿ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋಗೆ ಬಂದಿದ್ದಾರೆ.

ಈ ಕಾರ್ಯಕ್ರಮದಲ್ಲಿ ದೀಪಿಕಾ ಅವರು ಹಲವು ವಿಚಾರಗಳನ್ನು ಶೇರ್ ಮಾಡಿದ್ದು, ತಮ್ಮ ಲವ್ ಲೈಫ್ ಬಗ್ಗೆ ಹೇಳಿರುವ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. “ಸಿಂಗಲ್ ಆಗಿರೋದು ನನಗೆ ಇಷ್ಟವಿತ್ತು, ಅದಕ್ಕಿಂತ ಮೊದಲು ನಾನು ಕೆಲವು ರಿಲೇಶನ್ಶಿಪ್ ನಲ್ಲಿದ್ದೆ, ಅಟ್ಯಾಚ್ಮೆಂಟ್ ನನಗೆ ಬೇಕಿರಲಿಲ್ಲ. ನನ್ನ ಮನಸ್ಸಲ್ಲಿ ಯಾರ ಜೊತೆಗೂ ಕಮಿಟ್ ಆಗಬೇಕು ಎನ್ನುವ ಉದ್ದೇಶ ಇರಲಿಲ್ಲ. ಆಗ ನನಗೆ ಎಂಜಾಯ್ ಮಾಡುವ ವಯಸ್ಸು, ಫನ್ ಮಾಡಬೇಕು ಅನ್ನಿಸುತ್ತಿತ್ತು, ಅದನ್ನೇ ಮಾಡುತ್ತಿದ್ದೆ.

ಆಗ ನನ ಜೊತೆ ರಣವೀರ್ ಇದ್ದ, ಆದರೆ ನಾನು ರಣವೀರ್ ಜೊತೆ ಕಮಿಟ್ ಆಗಿರಲಿಲ್ಲ. ನಾವಿಬ್ಬರು ಬೇರೆಯವರನ್ನು ಮೀಟ್ ಮಾಡ್ತಿದ್ವಿ, ಬೇರೆಯವರನ್ನು ನೋಡಿದಾಗ ನಾನು ಕೂಡ ಎಕ್ಸೈಟ್ ಆಗ್ತಿದ್ದೆ. ರಣವೀರ್ ಪ್ರೊಪೋಸ್ ಮಾಡಿದ ಮೇಲೆ ಅಷ್ಟೇ ನಾನು ಅವನೊಡನೆ ಕಮಿಟ್ ಆಗಿದ್ದು. ಅಲ್ಲಿಯವರೆಗೂ ಕಮಿಟ್ಮೆಂಟ್ ಇರಲಿಲ್ಲ. ನಾನು ಯಾರನ್ನಾದರೂ ಭೇಟಿ ಮಾಡುತ್ತಿದ್ದೆ, ಅವರ ಜೊತೆಗೆ ಹೋಗುತ್ತಿದ್ದೇ. ಆದರೆ ಕೊನೆಯಲ್ಲಿ ಅವನ ಹತ್ತಿರ ಹೋಗಬೇಕು ಅಂತ ಮನಸ್ಸಿಗೆ ಅನ್ನಿಸುತ್ತಿತ್ತು.

ನಾವಿಬ್ಬರು ಬೇರೆಯವರ ಬಳಿ ಹೋಗಿ ನಂತರ ನಮ್ಮ ಹತ್ತಿರಕ್ಕೆ ಬರುತ್ತಿದ್ದೆವು..” ಎಂದು ಹೇಳಿದ್ದಾರೆ ದೀಪಿಕಾ. ಈ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೆಯೇ ಈ ಶೋನಲ್ಲಿ ರಣವೀರ್ ದೀಪಿಕಾ ಜೋಡಿ ತಮ್ಮ ಮದುವೆಯ ಸುಂದರ ಕ್ಷಣಗಳ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.

Leave A Reply

Your email address will not be published.