Bharathi Vishnuvardhan: ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಟ ವಿನೋದ್ ರಾಜ್!

0 22

Bharathi Vishnuvardhan: ಚಂದನವನದ ದಂತಕಥೆ ದಿವಂಗತ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಪತ್ನಿ ಹಿರಿಯನಟಿ ಭಾರತಿ ವಿಷ್ಣುವರ್ಧನ್ ಅವರು ಕೆಲ ತಿಂಗಳುಗಳಿಂದ ಅನಾರೋಗ್ಯದ ಕಾರಣ ಬಳಲುತ್ತಿದ್ದಾರೆ. ಈ ವಿಚಾರ ಸ್ವಲ್ಪ ದಿನಗಳು ವೈರಲ್ ಆಗಿತ್ತು. ಇದೀಗ ಭಾರತಿ ಅವರ ಮನೆಗೆ ನಟ ವಿನೋದ್ ರಾಜ್ ಅವರು ಭೇಟಿ ನೀಡಿ, ಭಾರತಿ ಅಮ್ಮನವರ ಆರೋಗ್ಯ ವಿಚಾರಿಸಿದ್ದಾರೆ.

ತಮ್ಮ ತಾಯಿ ಲೀಲಾವತಿ ಅವರನ್ನು ವಿನೋದ್ ರಾಜ್ ಅವರು ಇತ್ತೀಚೆಗೆ ಕಳೆದುಕೊಂಡರು, ಆ ನೋವಿನಲ್ಲಿ ಇದ್ದರು ಸಹ ವಿನೋದ್ ರಾಜ್ ಅವರು ಭಾರತಿ ವಿಷ್ಣುವರ್ಧನ್ ಅವರ ಮನೆಗೆ ಭೇಟಿ ನೀಡಿ, ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಇದೀಗ ವಿನೋದ್ ರಾಜ್ ಅವರು ಭಾರತಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿರುವ ಫೋಟೋಗಳು ವೈರಲ್ ಆಗಿದೆ.

ವಿನೋದ್ ರಾಜ್ ಅವರಿ ಭೇಟಿ ನೀಡಿದ್ದ ವೇಳೆ ಅನಿರುದ್ಧ್ ಅವರು ಕೂಡ ಮನೆಯಲ್ಲಿ ಇದ್ದು, ಎಲ್ಲರೂ ಜೊತೆಯಾಗಿ ಸಮಯ ಕಳೆದಿದ್ದಾರೆ. ಕೆಲ ದಿನಗಳ ಹಿಂದೆ ಖುದ್ದು ಅನಿರುದ್ಧ್ ಅವರೇ ಭಾರತಿ ಅಮ್ಮನವರ ಆರೋಗ್ಯದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಭಾರತಿ ಅಮ್ಮನವರಿಗೆ ಮಂಡಿ ನೋವು ಶುರುವಾಗಿದೆ, ಈ ಕಾರಣಕ್ಕೆ ಅವರು ಸರಿಯಾಗಿ ಊಟ ಮಾಡಲು ಆಗುತ್ತಿಲ್ಲ, ನಿಶಕ್ತಿಯಾಗಿದೆ, 2 ತಿಂಗಳಿಂದ ಎಲ್ಲಿಯೂ ಹೋಗಿಲ್ಲ ಎಂದು ಹೇಳಿದ್ದರು.

ಪ್ರಸ್ತುತ ಭಾರತಿ ವಿಷ್ಣುವರ್ಧನ್ ಅವರು ಮಂಡಿ ನೋವಿನಿಂದ ಕಷ್ಟಪಡುತ್ತಿದ್ದು ಓಡಾಡುವುದಕ್ಕೆ ಆಗದೆ ವೀಲ್ ಚೇರ್ ಮೂಲಕ ಓಡಾಡುತ್ತಿದ್ದಾರೆ. ಅವರನ್ನು ಭೇಟಿ ಮಾಡಿರುವ ವಿನೋದ್ ರಾಜ್ ಅವರು ಭಾರತಿ ವಿಷ್ಣುವರ್ಧನ್ ಅವರು ಬೇಗ ಹುಷಾರಾಗಲಿ ಎಂದು ಹಾರೈಸಿದ್ದಾರೆ. ಲೀಲಾವತಿ ಅವರನ್ನು ಕಳೆದುಕೊಂಡ ಬೆನ್ನಲ್ಲೇ ಭಾರತಿ ವಿಷ್ಣುವರ್ಧನ್ ಅವರಿಗೆ ಅನಾರೋಗ್ಯ ಆಗಿದೆ ಎಂದು ತಿಳಿದು, ಚಿತ್ರರಂಗ ಕೂಡ ಶಾಕ್ ಆಗಿತ್ತು.

Leave A Reply

Your email address will not be published.