Bigg Boss: ಬಿಗ್ ಬಾಸ್ ಶೋ ಶುರುವಾಗುತ್ತೆ ಎಂದರೆ ವೀಕೆಂಡ್ ವೇಳೆ ಕಿಚ್ಚ ಸುದೀಪ್ ಅವರು ಬರುವ ಕಿಚ್ಚನ ಪಂಚಾಯಿತಿ ಎಪಿಸೋಡ್ ನೋಡಲು ಎಲ್ಲರೂ ಕಾಯುತ್ತಿರುತ್ತಾರೆ. ಹಾಗೆಯೇ ವೀಕೆಂಡ್ ನಲ್ಲಿ ಮನೆಯಿಂದ ಎಲಿಮಿನೇಟ್ ಆಗಿ ಹೊರಬರುವ ಸದಸ್ಯರು ಯಾರು ಎನ್ನುವ ಕುತೂಹಲ ಕೂಡ ಇರುತ್ತದೆ. ಈ ವಾರ 6 ಜನ ನಾಮಿನೇಟ್ ಆಗಿದ್ದು, ಮನೆಯಿಂದ ಹೊರಬರುವ ಸದಸ್ಯರು ಯಾರು ಗೊತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಮೊದಲ ವಾರ ನಾಮಿನೇಟ್ ಆಗಿದ್ದ 8 ಸದಸ್ಯರ ಪೈಕಿ ಸ್ನೇಕ್ ಶ್ಯಾಮ್ ಅವರು ಎಲಿಮಿನೇಟ್ ಆಗಿದ್ದರು. ಇನ್ನು ಈ ವಾರ 6 ಜನ ಸದಸ್ಯರು ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಸಂಗೀತ ಶೃಂಗೇರಿ, ಕಾರ್ತಿಕ್ ಮಹೇಶ್, ಭಾಗ್ಯಶ್ರೀ, ಗೌರೀಶ್ ಅಕ್ಕಿ, ತನಿಷಾ ಮತ್ತು ತುಕಾಲಿ ಸಂತೋಷ್ ನಾಮಿನೇಟ್ ಆಗಿದ್ದಾರೆ. ಇವರುಗಳ ಪೈಕಿ ಎಲಿಮಿನೇಟ್ ಆಗೋದು ಯಾರು?
ಈ ವಾರ ಸಂಗೀತ ಶೃಂಗೇರಿ ಅವರು ವಿನಯ್ ಅವರೊಡನೆ ನಡೆದ ಜಗಳದ ಕಾರಣ ಮತ್ತು ಕಾರ್ತಿಕ್ ಅವರೊಡನೆ ಸ್ನೇಹ ಮತ್ತು ಇನ್ನು ಅನೇಕ ಕಾರಣಗಳಿಂದ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ದಿಯಾಗಿದ್ದರು. ಹೆಚ್ಚಾಗಿ ಕಾಣಿಸಿಕೊಂಡಿದ್ದರು, ಹಾಗಾಗಿ ಸಂಗೀತ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗುವುದು ಕಷ್ಟವೇ. ಇನ್ನು ಕಾರ್ತಿಕ್ ಮಹೇಶ್ ಅವರು ಟೀಮ್ ಕ್ಯಾಪ್ಟನ್ ಆಗಿ ಮತ್ತು ಟಾಸ್ಕ್ ಪರ್ಫಾರ್ಮೆನ್ಸ್ ಚೆನ್ನಾಗಿ ಮಾಡಿ ಒಳ್ಳೆಯ ಎಲ್ಲರಿಂದ ಮೆಚ್ಚುಗೆ ಪಡೆದಿದ್ದರು, ಹಾಗಾಗಿ ಇವರು ಕೂಡ ಈ ವಾರ ಎಲಿಮಿನೇಟ್ ಆಗೋದು ಡೌಟ್.
ಇನ್ನು ತನಿಶಾ ಅವರು ಕಳೆದ ವಾರದಿಂದ ಹೈಲೈಟ್ ಆಗುತ್ತಲೇ ಇದ್ದಾರೆ. ಇವರ ಜೋರು ಕಂಠ ಎಲ್ಲರ ನಡುವೆ ವಿಭಿನ್ನ ರೀತಿಯ ಕಾರಣಗಳಿಗೆ ಸುದ್ದಿಯಾಗಿದ್ದಾರೆ. ಹಾಗೆಯೇ ಟಾಸ್ಕ್ ಗಳಲ್ಲಿ ಮತ್ತು ಅಡುಗೆ ಕೆಲಸದಿಂದಲೂ ಹೆಚ್ಚು ಕಾಣಿಸಿಕೊಂಡಿದ್ದಾರೆ ತನಿಷಾ. ಹಾಗಾಗಿ ಇವರು ಕೂಡ ಎಲಿಮಿನೇಟ್ ಅಗೋದು ಡೌಟ್. ಮತ್ತೊಬ್ಬರು ತುಕಾಲಿ ಸಂತು, ಇವರು ಮೊದಲ ವಾರ ಎಲ್ಲರ ಕೋಪಕ್ಕೆ ಗುರಿಯಾದರು ಕೂಡ, ಎರಡನೇ ವಾರ ತಮ್ಮ ಟ್ಯಾಲೆಂಟ್ ಹಾಗೂ ಮಿಮಿಕ್ರಿ ಮಾಡುವುದರಿಂದ ಎಲ್ಲರ ಗಮನ ಸೆಳೆದಿದ್ದಾರೆ.
ತುಕಾಲಿ ಸಂತೋಷ್ ಈ ರೀತಿ ಇದ್ದರೆ ಉತ್ತಮ ಎಂದು ಎನ್ನಿಸಿಕೊಂಡಿದ್ದಾರೆ. ಹಾಗಾಗಿ ಈ ವಾರ ಇವರು ಕೂಡ ಎಲಿಮಿನೇಟ್ ಅಗೋದು ಡೌಟ್. ಇನ್ನು ಗೌರೀಶ್ ಅಕ್ಕಿ ಅವರು ನಾಮಿನೇಟ್ ಆಗಿದ್ದು, ಈ ವಾರ ಅವರು ಟಾಸ್ಕ್ ಗಳಲ್ಲಿ ಹೆಚ್ಚಾಗಿ ಪಾಲ್ಗೊಂಡಿಲ್ಲ, ಜೊತೆಗೆ ಮನೆಯಲ್ಲಿ ಕಾಣಿಸಿಕೊಂಡಿದ್ದು ಕೂಡ ಕಡಿಮೆಯೇ ಎನ್ನಬಹುದು. ಜೊತೆಗೆ ಗೌರೀಶ್ ಅವರ 2 ಅಥವಾ 4 ವಾರಗಳ ಕಾಲ ಇರಬೇಕು ಎನ್ನುವುದು ನನ್ನ ಟಾರ್ಗೆಟ್ ಎಂದು ಹೇಳಿದ್ದರು. ಹಾಗಾಗಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ..
ಇನ್ನು ಕೊನೆಯದಾಗಿ ಭಾಗ್ಯಶ್ರೀ ಅವರು, ಇವರು ಈ ವಾರ ಹೆಚ್ಚಾಗಿ ಟಾಸ್ಕ್ ಗಳಲ್ಲಿ ಪರ್ಫಾರ್ಮ್ ಮಾಡಿಲ್ಲ, ಹಾಗೆಯೇ ಶಿಕ್ಷೆಯಾಗಿ ಇಡೀ ರಾತ್ರಿ ಮನೆಯಿಂದ ಹೊರಗಡೆ ಇದ್ದು, ಶಿಕ್ಷೆ ಅನುಭವಿಸಿದರು. ಹಾಗೆಯೇ ಕೆಲವು ಘಟನೆಗಳಿಂದ ತೊಂದರೆ ಕೂಡ ಆಯಿತು. ಹಾಗಾಗಿ ಇವರು ಮನೆಯಿಂದ ಹೊರ ಹೋಗಬಹುದು ಎನ್ನಲಾಗುತ್ತಿದೆ. ಹಾಗಾಗಿ ಇವರು ಮನೆಯಿಂದ ಹೊರ ಹೋಗುತ್ತಾರಾ ಎಂದು ಕಾದು ನೋಡಬೇಕಿದೆ.