Viral News: ತಾತ ಮೊಬೈಲ್ ಕೊಡಿಸಲಿಲ್ಲ ಎಂದು ಪ್ರಾಣವನ್ನೇ ಕಳೆದುಕೊಂಡ ಹುಡುಗ

Written by Pooja Siddaraj

Published on:

Viral News: ಕೆಲವೊಮ್ಮೆ ಸಣ್ಣಪುಟ್ಟ ವಿಷಯಕ್ಕೆ ತೆಗೆದುಕೊಳ್ಳುವ ನಿರ್ಧಾರ, ಬದುಕನ್ನೇ ನಾಶ ಮಾಡಿಬಿಡುತ್ತದೆ. ನಮ್ಮ ಬದುಕನ್ನು ಮಾತ್ರವಲ್ಲ, ನಮ್ಮ ಜೊತೆಗೆ ಇರುವವರಿಗೂ ನೋವು ಕೊಡುತ್ತದೆ. ಇಂಥದ್ದೊಂದು ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕೊಳಾಳ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೊಬೈಲ್ ಫೋನ್ ಕೊಡಿಸಲಿಲ್ಲ ಎನ್ನುವ ಸಣ್ಣ ಕಾರಣಕ್ಕೆ ಹುಡುಗನೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಪ್ರಾಣವನ್ನೇ ಕಳೆದುಕೊಂಡಿರುವ ಈ ಹುಡುಗನ ಹೆಸರು ಯಶವಂತ್, ಇವನಿಗೆ 20 ವರ್ಷ ವಯಸ್ಸು. ಈ ಹುಡುಗನ ಹತ್ತಿರ ಮೊಬೈಲ್ ಇತ್ತು, ಆಕ್ಟೊಬರ್ 8ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ಯಶವಂತ್ ತನ್ನ ಮೊಬೈಲ್ ಕಳೆದುಕೊಂಡಿದ್ದ, ಹಾಗಾಗಿ ತನಗೆ ಹೊಸ ಮೊಬೈಲ್ ಕೊಡಿಸಬೇಕು ಎಂದು ತಾತನ ಹತ್ತಿರ ಕೇಳಿಕೊಂಡಿದ್ದ. ಪದೇ ಪದೇ ತಾತನ ಬಳಿ ತನಗೆ ಹೊಸ ಮೊಬೈಲ್ ಕೊಡಿಸಲೇಬೇಕು ಎಂದು ಹಠ ಮಾಡಿ ಕೇಳುತ್ತಲೇ ಇದ್ದ..

ಆದರೆ ಮನೆಯ ಬೇರೆ ಸದಸ್ಯರು ಆ ರೀತಿ ಹಠ ಮಾಡುವುದು ಬೇಡ ಎಂದು ಯಶವಂತ್ ಗೆ ಬುದ್ಧಿ ಹೇಳಿದ್ದರು. ಯಶವಂತ್ ಮನೆಯಲ್ಲಿ ಅವನಿಗೆ ಹೊಸ ಫೋನ್ ಅನ್ನು ತಕ್ಷಣವೇ ಕೊಡಿಸುವಷ್ಟು ಸೌಕರ್ಯ ಇರಲಿಲ್ಲ. ಹಾಗಾಗಿ ಸ್ವಲ್ಪ ದಿನ ಕಳೆದ ತಕ್ಷಣವೇ ನಿನಗೆ ಹೊಸ ಫೋನ್ ಕೊಡಿಸಲು ಆಗುವುದಿಲ್ಲ ಎಂದು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು.

ಆದರೆ ಯಶವಂತ್ ಹಠ ಬಿಡದೆ, ತನಗೆ ಈಗಲೇ ಹೊಸ ಮೊಬೈಲ್ ಕೊಡಿಸಲೇ ಬೇಕು ಎಂದು ಕೇಳುತ್ತಲೇ ಇದ್ದ, ಕೊನೆಗೆ ಮನೆಯವರು ತಕ್ಷಣವೇ ಮೊಬೈಲ್ ಕೊಡಿಸುವುದಿಲ್ಲ ಎಂದು ಮನನೊಂದ ಯಶವಂತ್ ಆಕ್ಟೊಬರ್ 18ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ, ರಾಸಾಯನಿಕ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಮನೆಯವರಿಗೆ ಈ ವಿಷಯ ಗೊತ್ತಾದ ತಕ್ಷಣವೇ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಆದರೆ ಆತನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎನ್ನುವ ಕಾರಣಕ್ಕೆ ಅವನನ್ನು ದಾವಣಗೆರೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು, ಆದರೆ ಮಾರ್ಗದ ಮಧ್ಯದಲ್ಲೇ ಯಶವಂತ್ ಮೃತಪಟ್ಟಿದ್ದಾನೆ. ಯಶವಂತ್ ವಿಚಾರದ ಈ ಪ್ರಕರಣಕ್ಕೆ ಚಿತ್ರಹಳ್ಳಿ ಪೊಲೀಸ್ ಸ್ಟೇಶನ್ ನಲ್ಲಿ ದೂರು ದಾಖಲಿಸಲಾಗಿದೆ.

Leave a Comment