Giorgia Meloni: ಆ ಒಂದು ಕಾರಣದಿಂದ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟ ಇಟಲಿ ಪ್ರಧಾನಿ ಜಾರ್ಜಿಯಾ ಮೇಲೊನಿ!

Written by Pooja Siddaraj

Published on:

Giorgia Meloni: ಇಟಲಿ ದೇಶದ ಪ್ರಧಾನ ಮಂತ್ರಿ ಆಗಿ ಅಧಿಕಾರದಲ್ಲಿರುವ ಜಾರ್ಜಿಯಾ ಮೆಲೋನಿ ಅವರು 10 ವರ್ಷಗಳ ಹಿಂದೆ ಜರ್ನಲಿಸ್ಟ್ ಆಂಡ್ರಿಯಾ ಗಿಯಾಂಬ್ರುನೋ ಅವರೊಡನೆ ಮದುವೆಯಾಗಿದ್ದರು. ಇವರಿಬ್ಬರಿಗೆ 7 ವರ್ಷದ ಮಗುವಿದೆ. ಇದೀಗ ಇವರಿಬ್ಬರು ತಮ್ಮ 10 ವರ್ಷಗಳ ಸುದೀರ್ಫ ಜೀವನಕ್ಕೆ ಕೊನೆ ಹಾಡಿದ್ದಾರೆ. ಇವರಿಬ್ಬರು ಲೈಂಗಿಕ ಕಮೆಂಟ್ಸ್ ವಿಚಾರಕ್ಕೆ ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಹೊರಗಡೆ ಎದುರಾದ ಟೀಕೆಗಳ ಕಾರಣ ಇವರಿಬ್ಬರು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ನಿರ್ಧಾರ ತೆಗೆದುಕೊಂಡರು ಎಂದು ಮಾಹಿತಿ ಸಿಕ್ಕಿದೆ.

ಆಂಡ್ರಿಯಾ ಅವರು ಮಾಧ್ಯಮದ ಎದುರು ನೀಡಿದ ಒಂದು ಕಮೆಂಟ್ ಇಂದ ವಿವಾದಕ್ಕೆ ಸಿಕ್ಕಿಹಾಕಿಕೊಂಡಿದ್ದರು. ಅವರು ಮಾಡಿದ ಕಮೆಂಟ್ ಅನುಚಿತ ವರ್ತನೆಯ ಹಾಗಿತ್ತು ಎನ್ನುವ ಕಾರಣಕ್ಕೆ ಫ್ಲಾಕ್ ಕೂಡ ಎದುರಿಸಬೇಕಾಯಿತು. ಈ ಕಾರಣದಿಂದ ಮೆಲೋನಿ ಅವರು ವಿಚ್ಛೇದನ ಪಡೆಯುವ ನಿರ್ಧಾರ ಮಾಡಿದರು. ಗಂಡನಿಂದ ದೂರ ಆಗುವ ನಿರ್ಧಾರವನ್ನು ಟ್ವಿಟರ್ ಖಾತೆಯ ಮೂಲಕ ಅಧಿಕೃತವಾಗಿ ಘೋಷಿಸಿದರು.

“10 ವರ್ಷಗಳ ಸಂಬಂಧಕ್ಕೆ ಅಂತ್ಯ ಹಾಡುವ ಸಮಯ ಈಗ ಬಂದಿದೆ. ನಾವಿಬ್ಬರು ನಮ್ಮ ದಾರಿಗಳು ಬೇರೆ ಬೇರೆ ಎನ್ನುವುದನ್ನು ಅರ್ಥಮಾಡಿಕೊಂಡಿದ್ದೇವೆ..” ಎಂದು ಮೆಲೋನಿ ಅವರು ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಜೋಡಿ ಮೊದಲ ಸಾರಿ ಭೇಟಿಯಾಗಿದ್ದು 2014ರಲ್ಲಿ ಟಿವಿ ಸ್ಟುಡಿಯೋದಲ್ಲಿ. ಆಂಡ್ರಿಯಾ ಅವರಿಗೆ 42 ವರ್ಷ, ಇವರು ಮೆಲೋನಿ ಅವರ ದಿವಂಗತ ಸ್ನೇಹಿತ ಸಿಲ್ವಿಯೋ ಬೆರ್ಲುಸ್ಕೊನಿಯಾ ಅವರ ಉತ್ತರಾಧಿಕಾರಿಗಳು ಒಡೆಯರಾಗಿರುವ ಮೀಡಿಯಾ ಸೆಟ್ ಸುದ್ದಿಗಳನ್ನು ಪ್ರೆಸೆಂಟ್ ಮಾಡುವ ನಿರೂಪಕರಾಗಿದ್ದರು.

ಇತ್ತೀಚೆಗೆ ಆಂಡ್ರಿಯೋ ಅವರು ಮಹಿಳೆಯೊಬ್ಬರ ಜೊತೆಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹೆಣ್ಣುಮಕ್ಕಳ ಜೊತೆಗೆ ಅನುಚಿತವಾಗಿ ವರ್ತಿಸುತ್ತಿರುವುದು ಇದು ಮೊದಲ ಸಾರಿ ಅಲ್ಲ, ಇದೊಂದೇ ಅಲ್ಲದೆ ಇವರು ಸಂಬಂಧದ ಬಗ್ಗೆ ಮಾತನಾಡುತ್ತಿರುವ ಆಡಿಯೋ ಕ್ಲಿಪ್ ಕೂಡ ವೈರಲ್ ಆಗಿತ್ತು. ಅವರ ಜೊತೆಗೆ ಕೆಲಸ ಮಾಡುವ ಮಹಿಳಾ ಸಹೋದ್ಯೋಗಿಗಳು, ಅವರೊಡನೆ ಲೈಂಗಿಕವಾಗಿ ಮುಂದುವರೆದರೆ, ಅವರಿಗೆ ಬೇಕಾದ ಹಾಗೆ ಸಹಕಾರ ಸಿಗುತ್ತದೆ ಎಂದು ಹೇಳಿದ್ದರು

Leave a Comment