Bigg Boss: ಏನೇ ಮಾಡಿದ್ರು ನಾಯಿ ಬಾಲ ಡೊಂಕು! ವಿನಯ್ ವಿರುದ್ಧ ಮತ್ತೆ ಗರಂ ಆದ ನೆಟ್ಟಿಗರು!

0 15

Bigg Boss: ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಜಗಳಗಳಿಂಸಲೇ ಸದ್ದು ಮಾಡಿದವರು. ನಾಲ್ಕು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು, ಹೆಚ್ಚಾಗಿ ಜಗಳಗಳ ಕಾರಣಕ್ಕೆ ಸುದ್ದಿಯಾಗಿ, ಮನೆಯಲ್ಲಿ ಕೆಲವರಿಗೆ ಗೌರವ ಕೊಡದೇ ಮಾತನಾಡಿ, ಹಲವರಿಗೆ ಹರ್ಟ್ ಆಗುವ ಹಾಗೆ ಮಾತನಾಡಿ ಕಿಚ್ಚನಿಂದ ಸಖತ್ ಆಗಿಯೇ ವಾರ್ನಿಂಗ್ ಪಡೆದಿದ್ದ ವಿನಯ್ ಇಂದು ಬುದ್ಧು ಕಲಿತಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಮತ್ತೊಮ್ಮೆ ವಿನಯ್ ಮೇಲೆ ಕೆಂಡ ಕಾರುತ್ತಿದ್ದಾರೆ ನೆಟ್ಟಿಗರು.

ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ವಿನಯ್ ಅವರು ಟಾಸ್ಕ್ ವಿಚಾರದಲ್ಲಿ ಪರ್ಸನಲ್ ಆಗಿ ತೆಗೆದುಕೊಂಡು ಕಾರ್ತಿಕ್ ಹಾಗೂ ಸಂಗೀತ ವಿಚಾರಕ್ಕೆ ಆಡಿದ ಮಾತುಗಳು, ಹೆಣ್ಣುಮಕ್ಕಳು ಬಲಹೀನರು ಎನ್ನುವ ರೀತಿಯಲ್ಲಿ ಆಡಿದ ಮಾತುಗಳು ಇದೆಲ್ಲವೂ ಜನರಿಗೆ ಇಷ್ಟವಾಗಿರಲಿಲ್ಲ. ವಿನಯ್ ಆಡಿದ ಮಾತುಗಳು ಸರಿಯಿಲ್ಲ ಎನ್ನುವ ಅಭಿಪ್ರಾಯವೇ ವ್ಯಕ್ತವಾಗಿತ್ತು, ಕಿಚ್ಚ ಸುದೀಪ್ ಅವರು ವಿನಯ್ ಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಜನರು ಬಯಸಿದ್ದರು.

ಅದೇ ರೀತಿ ವೀಕೆಂಡ್ ಎಪಿಸೋಡ್ ನಲ್ಲಿ ವಿನಯ್ ಅವರಿಗೆ ಕಿಚ್ಚ ಸುದೀಪ್ ಅವರು ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡು ತಮ್ಮಿಂದ ಆದ ತಪ್ಪುಗಳನ್ನು ತೋರಿಸಿದ್ದರು. ಆದರೆ ವಿನಯ್ ಯಾಕೋ ಕಿಚ್ಚನ ಮಾತುಗಳಿಂದ ಬುದ್ಧಿ ಕಲಿತ ಹಾಗೆ ಕಾಣುತ್ತಿಲ್ಲ. ನಿನ್ನೆಯ ಎಪಿಸೋಡ್ ನಲ್ಲಿ ಮತ್ತೆ ತನಿಷಾ ಅವರೊಡನೆ ಮಾತಿಗೆ ನಿಂತು, ಅರ್ಧಕ್ಕೆ ಸುಮ್ಮನಾಗಿದ್ದಾರೆ. ನಿನ್ನೆಯ ಟಾಸ್ಕ್ ನಲ್ಲಿ ತನಿಷಾ, ಸ್ನೇಹಿತ್ ನಡುವೆ ವಾದ ನಡೆಯುವಾಗ, ತನಿಷಾ ಅವರು ವಿನಯ್ ಮತ್ತು ಮೈಕಲ್ ಇಂದ ಆದ ತಪ್ಪಿನಿಂದ ಮನೆಯವರು ಶಿಕ್ಷೆ ಅನುಭವಿಸಿದ ಘಟನೆಯನ್ನು ಉದಾಹರಣೆಯಾಗಿ ನೀಡುತ್ತಾರೆ..

ಆಗ ಮಧ್ಯೆ ಪ್ರವೇಶ ಮಾಡುವ ವಿನಯ್, ಅದೆಲ್ಲಾ ಮಾತಾಡೋದು ಬೇಡ ಎನ್ನುತ್ತಾರೆ, ಆಗ ತನಿಷಾ ನಾನು ಮಾತಾಡ್ತಿರೋದು ಸ್ನೇಹಿತ್ ಜೊತೆಗೆ, ನಿಮ್ಮ ಜೊತೆಗಲ್ಲ ಎಂದಾಗ ನಾನು ಹುಳದ ಜೊತೆಗೆ ಮಾತಾಡ್ತಿದ್ದೀನಿ ಎನ್ನುತ್ತಾರೆ ವಿನಯ್. ಆ ಮಾತಿಗೆ ತನಿಷಾ ಬಿಡುವುದಿಲ್ಲ, ಕೋಪದಲ್ಲಿ ಇನ್ನಷ್ಟು ಮಾತನಾಡುತ್ತಾರೆ. ವಿನಯ್ ಪದೇ ಪದೇ ತಾನು ಹುಳದ ಜೊತೆಗೆ ಮಾತಾಡ್ತಿರೋದು ಎಂದು ಹೇಳುತ್ತಾರೆ. ಆಗ ತನಿಷಾ, ಮಾತಾಡೋಕು ತಾಕತ್ ಇರ್ಬೇಕು, ಹುಳದ ಜೊತೆಗೆ ಮಾತಾಡ್ಲಿ, ಬಿಗ್ ಬಾಸ್ ಮನೆಯಲ್ಲಿ ಯಾಕಿರಬೇಕು ಎಂದು ಹೇಳುತ್ತಾರೆ.

ಈ ಮಾತುಕತೆ ನಡೆದ ಬಳಿಕ ನೆಟ್ಟಿಗರು ಹಾಗೂ ವೀಕ್ಷಕರು ವಿನಯ್ ಗೆ ಮತ್ತೆ ಬಾಯಿಗೆ ಬಂದ ಹಾಗೆ ಬಯ್ಯುವುದಕ್ಕೆ ಶುರು ಮಾಡಿದ್ದಾರೆ. ನಾಯಿ ಬಾಲ ಯಾವತ್ತಿದ್ರು ಡೊಂಕು ಎನ್ನುವ ಹಾಗೆ ಸುದೀಪ್ ಅವರು ಅಷ್ಟು ಬೈದಿದ್ರು ಕೂಡ ವಿನಯ್ ಗೆ ಬುದ್ಧಿ ಬಂದಿಲ್ಲ, ಮತ್ತದೇ ಕೆಲಸ ಮಾಡುತ್ತಿದ್ದಾರೆ. ಇಂಥವರಿಗೆ ಏನೇ ಅಂದ್ರು ಬುದ್ಧಿ ಬರಲ್ಲ ಎಂದು ವಿನಯ್ ಮೇಲೆ ಮತ್ತೆ ನೆಟ್ಟಿಗರ ಅಸಮಾಧಾನ ಶುರುವಾಗಿದೆ.

Leave A Reply

Your email address will not be published.