Bigg Boss: ಬಿಗ್ ಬಾಸ್ ಕನ್ನಡ ಶೋ ಅನ್ನು ಇಡೀ ವಾರ ನೋಡುವುದಕ್ಕಿಂತ ಹೆಚ್ಚು ಆಸಕ್ತಿಯಿಂದ ವೀಕೆಂಡ್ ಎಪಿಸೋಡ್ ನೋಡುವುದಕ್ಕೆ ಎಲ್ಲರಿಗೂ ಆಸಕ್ತಿ ಹೆಚ್ಚು. ವೀಕೆಂಡ್ ಗಳಲ್ಲಿ ಕಿಚ್ಚನ ಪಂಚಾಯಿತಿ ಎಪಿಸೋಡ್ ಗೆ ಬರುವ ಕಿಚ್ಚ ಸುದೀಪ್ ಅವರು, ಇಡೀ ವಾರ ನಡೆದ ವಿಚಾರಗಳ ಬಗ್ಗೆ ಮಾತನಾಡಿ, ಕೆಲವೊಮ್ಮೆ ನಗುವಿನಿಂದ ಕೆಲವೊಮ್ಮೆ ಸ್ಟ್ರಿಕ್ಟ್ ಆಗಿ ನಡೆದ ತಪ್ಪುಗಳಿಗೆ ಬೈದು ಬುದ್ಧಿ ಹೇಳುತ್ತಾರೆ.
ಕಿಚ್ಚನ ಖಡಕ್ ಮಾತುಗಳಿಗೆ ಅಭಿಮಾನಿಗಳು ಪ್ರತಿ ವಾರ ಫಿದಾ ಆಗುತ್ತಾರೆ. ಆದರೆ ಈ ವಾರದ ವೀಕೆಂಡ್ ಎಪಿಸೋಡ್ ಇಂದ ಅಭಿಮಾನಿಗಳು ಅಸಮಾಧಾನಗೊಂಡ ಹಾಗೆ ಕಾಣುತ್ತಿದೆ. ಈ ಶನಿವಾರ ಕಿಚ್ಚ ಸುದೀಪ್ ಅವರು ಸ್ವಲ್ಪ ವಿಭಿನ್ನವಾಗಿಯೇ ಎಪಿಸೋಡ್ ನಡೆಸಿಕೊಟ್ಟರು. ದಸರಾ ಹಬ್ಬದ ಪ್ರಯುಕ್ತ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಗಿಫ್ಟ್ ನೀಡಿ, ಅದರ ಮೂಲಕ ಎಲ್ಲರಿಗೂ ತಲುಪಬೇಕಾಗಿರುವ ಸಂದೇಶವನ್ನು ತಲುಪಿಸಿದರು.
ಇನ್ನು ಡ್ರೋನ್ ಪ್ರತಾಪ್ ಅವರಿಗೆ ಗೂಬೆ ಎಂದು ಕರೆದ ಕಾರಣಕ್ಕೆ ರಕ್ಷಕ್ ಅವರಿಗೆ ಕ್ಲಾಸ್ ತೆಗೆದುಕೊಂಡರು. ಮನೆಯಲ್ಲಿ ತನಿಷಾ, ಸಿರಿ, ನೀತು, ಕಾರ್ತಿಕ್ ಇವರಿಗೆಲ್ಲಾ ಮುಂದಿನ ದಿನಗಳಲ್ಲಿ ಆಟ ಹೇಗಿರಬೇಕು ಎನ್ನುವುದನ್ನು ಸೂಕ್ಷ್ಮವಾಗಿ ಹೇಳುವುದರ ಜೊತೆಗೆ ಬೈದು ಬುದ್ಧಿ ಹೇಳಿಯು ಅರ್ಥ ಮಾಡಿಸಿದರು. ತುಕಾಲಿ ಸಂತೋಷ್ , ಸ್ನೇಹಿತ್, ನಮ್ರತಾ ಎಲ್ಲರಿಗೂ ಬುದ್ಧಿ ಹೇಳಿದ ಕಿಚ್ಚ, ಈ ವಾರದ ಇಂಪ್ರೂವ್ಮೆಂಟ್ ಗಾಗಿ ನೀತು ಅವರಿಗೆ ಈ ಸೀಸನ್ ನ ಮೊದಲ ಕಿಚ್ಚನ ಚಪ್ಪಾಳೆ ನೀಡಿದರು.
ಆದರೆ ಅಭಿಮಾನಿಗಳು, ನೆಟ್ಟಿಗರು ಕಾದು ಕುಳಿತಿದ್ದ ಅದೊಂದು ಕೆಲಸ ಮಾತ್ರ ಮಾಡಿಲ್ಲ ಸುದೀಪ್ ಅವರು. ವಿನಯ್ ಅವರು ಮನೆಯಲ್ಲಿ ತಾನೇ ಎಲ್ಲಾ ಎನ್ನುವ ಹಾಗಿದ್ದಾರೆ, ಪ್ರತಾಪ್ ಅವರಿಗೆ ಮುಚ್ಕೊಂಡು ಕೇಳು ಅಂತ ಹೇಳಿದ್ದರು, ಇದ್ಯಾವುದಕ್ಕೂ ಕಿಚ್ಚ ಸುದೀಪ್ ಅವರು ಪ್ರಶ್ನೆ ಕೇಳಲಿಲ್ಲ. ಬದಲಾಗಿ, ಮನೆಯವರೆಲ್ಲಾ ಸೇರಿ ಒಬ್ಬ ಫೈನಲಿಸ್ಟ್ ನ ತಯಾರು ಮಾಡಿದ್ದೀರಿ ಎಂದು ಹೇಳಿದರು. ಹಾಗೆಯೇ ವಿನಯ್ ಅವರಿಗೆ ನೀವೇ ಆನೆ ಅಂದುಕೊಂಡಿರೋದು ತಪ್ಪು ಎಂದು ಹೇಳಿದರು.
ಹೀಗೆ ವಿನಯ್ ವಿಚಾರದಲ್ಲಿ ಸ್ವಲ್ಪ ಪಾಸಿಟಿವ್ ಆಗಿಯೇ ಮಾತನಾಡಿದ್ದಾರೆ ಎನ್ನುವುದು ಹಲವರಿಗೆ ಇಷ್ಟವಾಗಿಲ್ಲ. ಸುದೀಪ್ ಅವರು ವಿನಯ್ ಅವರಿಗು ಕ್ಲಾಸ್ ತೆಗೆದುಕೊಳ್ಳಬೇಕಿತ್ತು, ವಿನಯ್ ಅಂದ್ರೆ ಸುದೀಪ್ ಮತ್ತು ಕಲರ್ಸ್ ಕನ್ನಡ ವಾಹಿನಿ ಅವರಿಗು ಭಯನ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಕಿಚ್ಚ ಅವರು ಮೈಂಡ್ ಗೇಮ್ ಪ್ಲಾನ್ ಮಾಡಿದ್ದಾರೆ, ವಿನಯ್ ಮೇಲೆ ಹೇಗೆ ಸ್ಟ್ರಾಂಗ್ ಆಗಿರಬೇಕು ಎನ್ನುವುದನ್ನ ತಿಳಿಸಿದ್ದಾರೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಇಂದಿನ ಎಪಿಸೋಡ್ ನಲ್ಲಿ ಕಿಚ್ಚನ ಮಾತು ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.