ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ಮೊನ್ನೆ ಭಾನುವಾರ ಗ್ರ್ಯಾಂಡ್ ಲಾಂಚ್ ಸಿಕ್ಕಿದೆ. ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಸಿಕ್ಕ ಲಾಂಚ್ ನಲ್ಲಿ ಇದೀಗ ಮನೆಯೊಳಗೆ 17 ಜನ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ 11 ಸ್ಪರ್ಧಿಗಳು ಹೆಚ್ಚು ವೋಟ್ಸ್ ಪಡೆದು ಸಮರ್ಥರು ಎನ್ನಿಸಿಕೊಂಡು ಬಿಗ್ ಮನೆಗೆ ಕಾಲಿಟ್ಟಿದ್ದಾರೆ. ಇನ್ನು 6 ಸ್ಪರ್ಧಿಗಳಿಗೆ ಹೆಚ್ಚಿನ ವೋಟ್ಸ್ ಸಿಗದೆ ಮನೆಗೆ ಬಂದಿದ್ದು ಅವರನ್ನು ಅಸಮರ್ಥರು ಎನ್ನಲಾಗಿದೆ..
ಅಸಮರ್ಥರು ಈ ಮೊದಲ ವಾರದಲ್ಲಿ ತಮ್ಮನ್ನು ತಾವು ಸಮರ್ಥರು ಎಂದು ಪ್ರೂವ್ ಮಾಡಿಕೊಳ್ಳಬೇಕಿದೆ. ನಿನ್ನೆಯ ಮೊದಲ ಸಂಚಿಕೆಯಲ್ಲಿ ಎಂ.ಎಲ್.ಎ ಪ್ರದೀಪ್ ಈಶ್ವರ್ ಅವರು ಗೆಸ್ಟ್ ಆಗಿ ಬಂದು ಒಂದಷ್ಟು ಮೋಟಿವೇಶನ್ ಕೊಟ್ಟು ಹೋಗಿದ್ದಾರೆ. ಇನ್ನು ಎರಡನೇ ದಿನವೇ ಮನೆಯಲ್ಲಿ ಮಾರಾಮಾರಿ ಶುರುವಾಗಿದೆ. ಹೌದು, ನಾಮಿನೇಷನ್ ವಿಚಾರ ಈಗ ಭಾರಿ ಸೆನ್ಸೇಷನ್ ಟಾಪಿಕ್ ಆಗಿದೆ ಎಂದರೆ ತಪ್ಪಲ್ಲ.
ಇದೀಗ ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿರುವ ಪ್ರೊಮೋದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿರುವುದನ್ನು ನೋಡಬಹುದು. ಮೊದಲ ವಾರವೇ ಬಿಗ್ ಬಾಸ್ ಓಪನ್ ನಾಮಿನೇಷನ್ ಇಟ್ಟಿದ್ದಾರೆ. ಸಾಮಾನ್ಯವಾಗಿ ಮೊದಲ ವಾರದಲ್ಲಿ ಕನ್ಫೆಶನ್ ರೂಮ್ ಒಳಗೆ ನಾಮಿನೇಷನ್ ನಡೆಯುತ್ತಿತ್ತು, ಆದರೆ ಈ ಸೀಸನ್ ನಲ್ಲಿ ಮೊದಲ ವಾರವೇ ಓಪನ್ ನಾಮಿನೇಷನ್ ನಡೆದಿದೆ. ಅಷ್ಟೇ ಅಲ್ಲದೆ ನಾಮಿನೇಷನ್ ನಲ್ಲಿ ಒಂದು ಟ್ವಿಸ್ಟ್ ಇಟ್ಟಿದ್ದು, ನಾಮಿನೇಟ್ ಆದವರು ಚೇರ್ ನಲ್ಲಿ ಕುಳಿತುಕೊಳ್ಳಬೇಕು.
ಕುಳಿತವರಿಗೆ ಜೋರಾಗಿ ಬಣ್ಣವನ್ನು ಎರಚಲಾಗುತ್ತಿದೆ. ಇಂಥಾದ್ದೊಂದು ನಾಮಿನೇಷನ್ ಟ್ವಿಸ್ಟ್ ಅನ್ನು ಯಾರು ಕೂಡ ಊಹಿಸಿರಲಿಲ್ಲ. ಈ ಪ್ರೊಮೋನಲ್ಲಿ ಜಗಳ ಇರುವುದನ್ನು ಕೂಡ ನೋಡಬಹುದಾಗಿದೆ. ಹರ ಹರ ಮಹಾದೇವ ಸೀರಿಯಲ್ ಖ್ಯಾತಿಯ ವಿನಯ್ ಅವರು ಅವರ ಜೊತೆ ಸೀರಿಯಲ್ ನಲ್ಲಿ ಹೀರೋಯಿನ್ ಆಗಿದ್ದ ಸಂಗೀತ ಅವರನ್ನೇ ನಾಮಿನೇಟ್ ಮಾಡಿದ್ದು, ಸಂಗೀತ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂದು ಕಾರಣ ಕೊಟ್ಟಿದ್ದಾರೆ.
ಇದರಿಂದ ಸಂಗೀತ ಅವರು ಸಿಟ್ಟುಗೊಂಡಿದ್ದು, ಇದರಿಂದ ನಿಮ್ಮ ನಿಜ ಸ್ವಭಾವ ಹೊರಬಂದಿದೆ ಎಂದು ಎಲ್ಲರೆದುರು ಜೋರಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಎರಡನೇ ದಿನದಿಂದಲೇ ಬಿಗ್ ಬಾಸ್ ಮನೆಯೊಳಗೆ ಯಾರು ಊಹಿಸದ ಹಾಗೆ ಜಗಳ ಶುರುವಾಗಿದೆ. ಇನ್ನು ಟಾಸ್ಕ್ ಗಳು ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.