Bigg Boss: ಬಿಗ್ ಮನೆಯಲ್ಲಿ ತಮ್ಮ ಆಟದ ಶೈಲಿಯನ್ನು ಬದಲಿಸಿ ಹೊಸದೇನೋ ಮಾಡ್ತಿದ್ದಾರಾ ವಿನಯ್?

0 23

Bigg Boss: Bigg Boss: ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಜಗಳಗಳಿಂಸಲೇ ಸದ್ದು ಮಾಡಿದವರು. ನಾಲ್ಕು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು, ಹೆಚ್ಚಾಗಿ ಜಗಳಗಳ ಕಾರಣಕ್ಕೆ ಸುದ್ದಿಯಾಗಿ, ಮನೆಯಲ್ಲಿ ಕೆಲವರಿಗೆ ಗೌರವ ಕೊಡದೇ ಮಾತನಾಡಿ, ಹಲವರಿಗೆ ಹರ್ಟ್ ಆಗುವ ಹಾಗೆ ಮಾತನಾಡಿ ಕಿಚ್ಚನಿಂದ ಸಖತ್ ಆಗಿಯೇ ವಾರ್ನಿಂಗ್ ಪಡೆದಿದ್ದ ವಿನಯ್ ಇಂದು ಬುದ್ಧು ಕಲಿತಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಈ ವಾರ ಬದಲಾಗಿದ್ದಾರಾ ವಿನಯ್?

ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ವಿನಯ್ ಅವರು ಟಾಸ್ಕ್ ವಿಚಾರದಲ್ಲಿ ಪರ್ಸನಲ್ ಆಗಿ ತೆಗೆದುಕೊಂಡು ಕಾರ್ತಿಕ್ ಹಾಗೂ ಸಂಗೀತ ವಿಚಾರಕ್ಕೆ ಆಡಿದ ಮಾತುಗಳು, ಹೆಣ್ಣುಮಕ್ಕಳು ಬಲಹೀನರು ಎನ್ನುವ ರೀತಿಯಲ್ಲಿ ಆಡಿದ ಮಾತುಗಳು ಇದೆಲ್ಲವೂ ಜನರಿಗೆ ಇಷ್ಟವಾಗಿರಲಿಲ್ಲ. ವಿನಯ್ ಆಡಿದ ಮಾತುಗಳು ಸರಿಯಿಲ್ಲ ಎನ್ನುವ ಅಭಿಪ್ರಾಯವೇ ವ್ಯಕ್ತವಾಗಿತ್ತು, ಕಿಚ್ಚ ಸುದೀಪ್ ಅವರು ವಿನಯ್ ಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಜನರು ಬಯಸಿದ್ದರು.

ಅದೇ ರೀತಿ ವೀಕೆಂಡ್ ಎಪಿಸೋಡ್ ನಲ್ಲಿ ವಿನಯ್ ಅವರಿಗೆ ಕಿಚ್ಚ ಸುದೀಪ್ ಅವರು ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡು ತಮ್ಮಿಂದ ಆದ ತಪ್ಪುಗಳನ್ನು ತೋರಿಸಿದ್ದರು. ಆದರೆ ವಿನಯ್ ಯಾಕೋ ಕಿಚ್ಚನ ಮಾತುಗಳಿಂದ ಬುದ್ಧಿ ಕಲಿತ ಹಾಗೆ ಕಾಣುತ್ತಿಲ್ಲ. ಮೊನ್ನೆಯ ಎಪಿಸೋಡ್ ನಲ್ಲಿ ಮತ್ತೆ ತನಿಷಾ ಅವರೊಡನೆ ಮಾತಿಗೆ ನಿಂತು, ಅರ್ಧಕ್ಕೆ ಸುಮ್ಮನಾಗಿದ್ದಾರೆ. ನಿನ್ನೆಯ ಎಪಿಸೋಡ್ ನಲ್ಲಿ ಕೂಡ ಜಗಳ ಆಡುವ ಸಂದರ್ಭ ಇದ್ದರು, ವಿನಯ್ ಸೀನ್ ಕ್ರಿಯೆಟ್ ಮಾಡಿ ದೊಡ್ಡದಾಗಿ ಜಗಳ ಆಡಲಿಲ್ಲ.

ಕಳೆದ ವಾರ ಕಿಚ್ಚ ಸುದೀಪ್ ಅವರು ಹೊರ ಪ್ರಪಂಚದಲ್ಲಿ ವಿನಯ್ ಯಾವ ರೀತಿ ಕಾಣಿಸುತ್ತಿದ್ದಾರೆ ಎನ್ನುವುದನ್ನು ವಿವರಿಸಿ ತಿಳಿಸಿದ್ದದು. ವಿನಯ್ ಗುಂಪುಗಾರಿಕೆ ಮಾಡುತ್ತಿದ್ದಾರೆ, ಮತ್ತೊಬ್ಬರ ವಿರುದ್ಧ ತಮ್ಮ ಟೀಮ್ ಸದಸ್ಯರು ಕೋಪಗೊಂಡು, ಅವರ ವಿರುದ್ಧ ಹೋಗುವ ಹಾಗೆ ಮಾಡುತ್ತಿದ್ದಾರೆ ಎನ್ನುವ ಆರೋಪಗಳೆಲ್ಲವು ಕೇಳಿಬಂದಿತ್ತು. ಅದೇ ರೀತಿ ವಿನಯ್ ಅವರು ಎಲ್ಲರಲ್ಲೂ ಕ್ಷಮೆ ಕೂಡ ಕೇಳಿದ್ದರು.

ಆದರೆ ಈ ವಾರ ವಿನಯ್ ಅವರು ಸೈಲೆಂಟ್ ಇರುವ ಹಾಗೆ ಕಾಣುತ್ತಿದೆ. ಹೆಚ್ಚಾಗಿ ಜಗಳ ಮಾಡದೆ, ಒಳ್ಳೆಯ ರೀತಿಯಲ್ಲೇ ಆಟವಾನ್ನಾಡುತ್ತಾ ಕಾಣಿಸಿಕೊಂಡಿದ್ದಾರೆ ವಿನಯ್. ಮನೆಯ ಕ್ಯಾಪ್ಟನ್ ಆಗಿದ್ದರು ಸಹ ವಿನಯ್ ಅವರು ಹೆಚ್ಚಾಗಿ ತೋರ್ಪಡಿಕೆ ಮಾಡಿಕೊಂಡಿಲ್ಲ. ಹಾಗಾಗಿ ಈ ವಾರದಿಂದ ವಿನಯ್ ಅವರು ಗೇಮ್ ಚೇಂಜ್ ಮಾಡಿರಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Leave A Reply

Your email address will not be published.