Horoscope: ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಒಂದೆರಡೆ ದಿನಗಳು ಬಾಕಿ ಉಳಿದಿದೆ. ದೀಪಾವಳಿ ಹಬ್ಬ ಮುಗಿದ ಬಳಿಕ ಶುಕ್ರದೇವನಿಂದ ಮಾಲವ್ಯ ರಾಜಯೋಗ ರೂಪುಗೊಳ್ಳಲಿದೆ. ಇದೊಂದು ವಿಶೇಷವಾದ ರಾಜಯೋಗ ಆಗಿದ್ದು, ಈ ರಾಜಯೋಗದಿಂದ ಕೆಲವು ರಾಶಿಗಳಿಗೆ ಬಹಳ ವಿಶೇಷವಾದ ಫಲ ಸಿಗಲಿದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯ ಫಲ ಸಿಗಲಿದೆ ಎಂದು ತಿಳಿಸುತ್ತೇವೆ ನೋಡಿ..
ಮಕರ ರಾಶಿ :- ರಾಜಯೋಗವು ನಿಮ್ಮ ರಾಶಿಯ ಕರ್ಮದ ಮನೆಯಲ್ಲಿ ರೂಪುಗೊಳ್ಳುತ್ತಿರುವ ಕಾರಣ, ನಿಮಗೆ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ. ಆದಾಯ ಜಾಸ್ತಿ ಮಾಡುವುದರ ಬಗ್ಗೆ ಚಿಂತಿಸಿದರೆ, ಅದರಲ್ಲೂ ಯಶಸ್ಸು ನಿಮ್ಮದಾಗುತ್ತದೆ. ಕೆಲಸ ಇಲ್ಲದೆ ಇರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭ ಸಿಗುತ್ತದೆ. ಶುಕ್ರದೇವನು ನಿಮ್ಮ ರಾಶಿಯ 5ನೇ ಮನೆಗೆ ಅಧಿಪತಿ, ಹಾಗಾಗಿ ಪ್ರೀತಿಯ ವಿಷಯದಲ್ಲಿ ಯಶಸ್ಸು, ದಿಢೀರ್ ಧನಲಾಭ ಎರಡು ಸಿಗುತ್ತದೆ.
ತುಲಾ ರಾಶಿ :- ರಾಜಯೋಗ ರೂಪುಗೊಳ್ಳುತ್ತಿರುವುದು ಈ ರಾಶಿಯಲ್ಲಿ, ಹಾಗಾಗಿ ನಿಮ್ಮ ಅದ್ಭುತವಾದ ಸಮಯ ರೂಪುಗೊಳ್ಳುತ್ತದೆ. ನಿಮ್ಮ ವ್ಯಕ್ತಿತ್ವ ಹೊಳೆಯುವ ಸಮಯ ಇದು. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಲಾಭದ ಸಮಯ, ನೀವು ಕೆಲಸ ಮಾಡುವ ರೀತಿ ಉತ್ತಮವಾಗಿರುತ್ತದೆ. ಅರ್ಧಕ್ಕೆ ನಿಂತ ಕಾರ್ಯಗಳು ಮತ್ತೆ ಶುರುವಾಗುತ್ತದೆ. ಸಂಗಾತಿಯ ಬೆಂಬಲ ಸಿಗುತ್ತದೆ. ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಅದ್ಭುತವಾದ ಸಮಯ ಆಗಿದೆ. ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿ ಬರಲಿದೆ.
ಕನ್ಯಾ ರಾಶಿ ;- ರಾಜಯೋಗ ರೂಪುಗೊಳ್ಳುತ್ತಿರುವುದು ಈ ರಾಶಿಯ ಧನ ಮತ್ತು ವಾಣಿ ಮನೆಯಲ್ಲಿ. ಆ ಕಾರಣಕ್ಕೆ ಹಣದ ವಿಚಾರದಲ್ಲಿ ಲಾಭ ಸಿಗಲಿದೆ, ನಿಮ್ಮ ಮಾತು ಹೆಚ್ಚು ಪ್ರಭಾವ ಬೀರಲಿದೆ. ಜನರು ನಿಮ್ಮ ಮೇಲೆ ಪ್ರಭಾವಿತರಾಗುತ್ತಾರೆ, ಹೊರದೇಶಕ್ಕೆ ಹೋಗಬೇಕು ಎನ್ನುವ ನಿಮ್ಮ ಆಸೆ ನೆರವೇರುತ್ತದೆ. ಬ್ಯುಸಿನೆಸ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಹಣ ವಾಪಸ್ ನಿಮಗೆ ಸಿಗುತ್ತದೆ. ಶುಕ್ರನು ನಿಮ್ಮ ಜಾತಕದ 9ನೇ ಮನೆಗೆ ಅಧಿಪತಿ, ಹಾಗಾಗಿ ಬದುಕಿನಲ್ಲಿ ಒಳ್ಳೆಯದಾಗುತ್ತದೆ. ಒಳ್ಳೆಯ ಕೆಲಸಗಳಲ್ಲಿ ಪಾಲ್ಗೊಳ್ಳುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಇದು ಸೂಕ್ತವಾದ ಸಮಯ.
ವೃಷಭ ರಾಶಿ :- ಈ ರಾಶಿಗೆ ಕೂಡ ಶುಕ್ರನೆ ಅಧಿಪತಿ, ಶುಕ್ರ ದೇವನ ಗೋಚರ ನಿಮ್ಮ ರಾಶಿಯ 6ನೇ ಮನೆಯಲ್ಲಿ ನಡೆಯಲಿದೆ. ಈ ಕಾರಣದಿಂದ ಈ ವೇಳೆ ನಿಮ್ಮ ವ್ಯಕ್ತಿತ್ವಕ್ಕೆ ಹೆಸರು ಬರುತ್ತದೆ. ದಿಢೀರ್ ಧನಲಾಭ ಉಂಟಾಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಸಂಗಾತಿಯ ಸಲಹೆ ಇಂದ ಸಮಸ್ಯೆಗಳನ್ನು ಬಗೆಹರಿಸುತ್ತೀರಿ. ಕೋರ್ಟ್ ಕೇಸ್ ಇದ್ದರೆ ಯಶಸ್ಸು ನಿಮ್ಮದೇ ಆಗುತ್ತದೆ. ಪಾರ್ಟ್ನರ್ಶಿಪ್ ಕೆಲಸ ಮಾಡುವವರಿಗೆ ಲಾಭ ಸಿಗುತ್ತದೆ.
ಕುಂಭ ರಾಶಿ :- ರಾಜಯೋಗ ನಿಮ್ಮ ರಾಶಿಯ 9ನೇ ಮನೆಯಲ್ಲಿ ಸಂಭವಿಸಲಿದೆ. ಈ ವೇಳೆ ನಿಮ್ಮ ಭಾಗ್ಯ ಬದಲಾಗುತ್ತದೆ, ಈ ವೇಳೆ ನೀವು ಯಾತ್ರೆಗೆ ಹೋಗಬಹುದು. ಅದರಿಂದ ಲಾಭ ಸಿಗಲಿದೆ. ಕೆಲಸದಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಹೆಚ್ಚು ಲಾಭ ಗಳಿಸುತ್ತೀರಿ. ದಾಂಪತ್ಯ ಜೀವನದಲ್ಲಿ ಮಧುರತೆ ಇರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಇದು ಅದ್ಭುತವಾದ ಸಮಯ.