Health Tips: ಈಗಿನ ಕಾಲದಲ್ಲಿ ಬದಲಾಗಿರುವ ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ಇನ್ನಿತರ ಸಮಸ್ಯೆಗಳ ಕಾರಣದಿಂದ ದೇಹದಲ್ಲಿ ಬೆಲ್ಲಿ ಫ್ಯಾಟ್ ಬರುತ್ತಿದೆ. ಬೆಲ್ಲಿ ಫ್ಯಾಟ್ ಶುರುವಾದರೆ, ದೇಹದ ಆಕಾರವೇ ಬದಲಾಗಿ ಹೋಗುತ್ತದೆ. ಹಾಗಾಗಿ ಬೆಲ್ಲಿ ಫ್ಯಾಟ್ ಬರದ ಹಾಗೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಮಸ್ಯೆ ಇದು. ಒಂದು ವೇಳೆ ನೀವು ಕೂಡ ಬೆಲ್ಲಿ ಫ್ಯಾಟ್ ಸಮಸ್ಯೆ ಇಂದ ಬಳಲುತ್ತಿದ್ದರೆ, ಈ ರೀತಿ ಮಾಡಿ, ಬೆಲ್ಲಿ ಫ್ಯಾಟ್ ಕಡಿಮೆ ಆಗುವುದು ಗ್ಯಾರಂಟಿ.
ಬಿಸಿನೀರು ಕುಡಿಯಿರಿ :- ಬೆಲ್ಲಿ ಫ್ಯಾಟ್ ಕಡಿಮೆ ಮಾಡಲು ಬಿಸಿನೀರು ಸಹಾಯ ಮಾಡುತ್ತದೆ. ಪ್ರತಿದಿನ ಎದ್ದ ಕೂಡಲೇ ಬಿಸಿನೀರು ಕುಡಿಯುವುದರಿಂದ ಬೆಲ್ಲಿ ಫ್ಯಾಟ್ ಕಡಿಮೆ ಮಾಡಬಹುದು. ಹಾಗೆಯೇ ಇಡೀ ದಿನ ಬಿಸಿನೀರು ಕುಡಿದರೆ ನಿಮ್ಮ ಕ್ಯಾಲೋರಿಗಳು ಕಡಿಮೆ ಆಗಲು ಸಹಾಯ ಮಾಡುತ್ತದೆ.
ವ್ಯಾಯಾಮ ಮಾಡಿ :- ದೇಹದ ತೂಕ ಕಡಿಮೆ ಮಾಡಲು ಫಿಸಿಕಲ್ ಆಕ್ಟಿವಿಟಿ ಇರುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಪ್ರತಿದಿನ ಜಿಮ್ ಗೆ ಹೋಗಿ ವ್ಯಾಯಾಮ ಮಾಡಿ ಅಥವಾ ಯೋಗ ಮಾಡಿ. ಇದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು.
ನಿದ್ದೆ ಚೆನ್ನಾಗಿರಬೇಕು :- ನಿದ್ದೆ ಮಾಡುವುದು ಆರೋಗ್ಯದ ದೃಷ್ಟಿಯಲ್ಲಿ ತುಂಬಾ ಒಳ್ಳೆಯದು. ಹಾಗಾಗಿ ದಿನಕ್ಕೆ 8 ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ನಿಮ್ಮ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ ಹಾಗೆಯೇ ಬೆಲ್ಲಿ ಫ್ಯಾಟ್ ಕೂಡ ಕಡಿಮೆ ಆಗುತ್ತದೆ.
ಬ್ಯಾಲೆನ್ಸ್ಡ್ ಡಯೆಟ್ ಸೇವಿಸಿ :- ಪ್ರತಿದಿನ ಉತ್ತಮವಾದ ಸಮತೋಲನ ಇರುವ ಬ್ಯಾಲೆನ್ಸ್ಡ್ ಡಯೆಟ್ ಸೇವಿಸುವುದು ಒಳ್ಳೆಯದು. ಪ್ರತಿದಿನ ಪ್ರೋಟೀನ್ ಸೇವನೆ ಕೂಡ ಒಳ್ಳೆಯದೇ, ಬ್ರೆಡ್, ಅನ್ನ, ಸಲಾಡ್ ಇವುಗಳನ್ನು ತಿನ್ನಬಹುದು.