Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ವಿನಯ್ ಗೌಡ ಅವರು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಮೂರು ವಾರಗಳಿಂದ ರೂಡ್ ಅನ್ನಿಸುತ್ತಿದ್ದು, 4ನೇ ವಾರ ಇದು ಇನ್ನಷ್ಟು ಜಾಸ್ತಿಯಾಗಿದೆ. ಕಳೆದ ಎಪಿಸೋಡ್ ಗಳಿಂದ ವಿನಯ್ ಅವರ ವರ್ತನೆ ಅತಿಯಾಗಿದ್ದು, ಜನರಿಗೂ ಇಷ್ಟವಾಗಿಲ್ಲ. ಇದರ ನಡುವೆ ವಿನಯ್ ಹೇಳಿರುವ ಒಂದು ಮಾತು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಮೂರನೇ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಎಲ್ಲಾ ಸ್ಪರ್ಧಿಗಳಿಗೆ ವೀಕ್ಷಕರಿಂದ ಬಂದಿರುವ ಒಂದು ಗಿಫ್ಟ್ ಮತ್ತು ಲೆಟರ್ ಕೊಟ್ಟರು. ಅದರಲ್ಲಿ ವಿನಯ್ ಅವರಿಗೆ ಆನೆಯನ್ನು ಗಿಫ್ಟ್ ಆಗಿ ಕೊಡಲಾಗಿತ್ತು, ಹಾಗೆಯೇ ವಿನಯ್ ಅವರಿಗೆ ಸರಿಸಾಟಿ ಯಾರು ಇಲ್ಲ ಎನ್ನುವ ಹಾಗೆ ಬಿಂಬಿಸಲಾಯಿತು. ವಿನಯ್ ಅವರು ಕೂಡ ಆ ಮನೆಯಲ್ಲಿ ತಮಗೆ ಕಾಂಪಿಟೇಶನ್ ಎನ್ನುವ ಹಾಗೆ ಯಾರು ಇಲ್ಲ ಎಂದು ಹೇಳಿದ್ದರು.
ಆದರೆ ಇದು ಮನೆಯವರಿಗೆ ಸರಿ ಎನ್ನಿಸಲಿಲ್ಲ, ಕಾರ್ತಿಕ್, ನಮ್ರತಾ ಎಲ್ಲರೂ ನಾವು ಟಫ್ ಕಾಂಪಿಟೇಶನ್ ಎಂದು ಹೇಳಿದ್ದರು. ಇತ್ತ ಹೊರಗಿರುವ ವೀಕ್ಷಕರಿಗೆ ಕೂಡ ವಿನಯ್ ಅವರ ವರ್ತನೆ ಇಷ್ಟವಿರಲಿಲ್ಲ. ಅಂದು ಸಿಕ್ಕ ಬಿಲ್ಡಪ್ ನಲ್ಲೇ ನಾಲ್ಕನೇ ವಾರ ವಿನಯ್ ಅವರ ಕೋಪ, ದರ್ಪ ಇದೆಲ್ಲವೂ ಇನ್ನಷ್ಟು ಹೆಚ್ಚಾದ ಹಾಗೆ ಹಾಗಿತ್ತು. ಮನೆಯ ಬೇರೆ ಸ್ಪರ್ಧಿಗಳ ಮೇಲೆ ಬೇಕೆಂದೇ ರೇಗುವುದು, ಹರ್ಟ್ ಆಗುವ ಹಾಗೆ ಮಾತನಾಡುವುದು ಮಾಡಿದ್ದಾರೆ.
ಅಷ್ಟೇ ಅಲ್ಲದೆ ಟಾಸ್ಕ್ ನಡೆಯುವ ವೇಳೆ ಕಾರ್ತಿಕ್ ಅವರಿಗೆ ಬಳೆ ತೊಟ್ಟುಕೊಂಡಿರೋ ಹೆಂಗಸಿನ ಹಾಗೆ ಆಡಬೇಡ ಎಂದಿದ್ದರು. ಹಾಗೆಯೇ ಮನೆಯಲ್ಲಿ ಸಾಕಷ್ಟು ತಪ್ಪುಗಳು ಕೂಡ ನಡೆದಿದೆ, ರೂಲ್ಸ್ ಬ್ರೇಕ್ ಆಗಿದೆ. ವಿನಯ್ ಗೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಎಲ್ಲರು ಬಯಸಿದ್ದರು. ಇದೀಗ ಇಂದಿನ ಪ್ರೊಮೋ ಬಿಡುಗಡೆ ಆಗಿದ್ದು, ಮನೆಯ ಸ್ಪರ್ಧಿಗಳಿಗೆ ಕ್ಲಾಸ್ ತಗೊಳ್ಳೋಕೆ ರೆಡಿಯಾಗಿ ಬಂದಿದ್ದಾರೆ ಕಿಚ್ಚ.
“ಬಳೆ ಅಂದ್ರೆ ಏನು? ಹಿರಿಯರು ಸಂಸ್ಕೃತಿ ಅಂದ್ರು, ಕಿರಿಯರು ಶಕ್ತಿ ಅಂದ್ರು..ಅದೇ ಹೊತ್ತಲ್ಲಿ ಮನೆಯಲ್ಲಿ ಒಬ್ಬರು ಬಳೆಯನ್ನ ಬಲಹೀನತೆ ಅನ್ನೋ ಥರ ಮಾತಾಡಿದ್ರು.. ಬಳೆ ಬಲಹೀನತೆಯ ಸಂಕೇತನ? ಬಲಶಾಲಿಗಳ ಸಂಕೇತನ? ಇವತ್ತಿನ ಪಂಚಾಯ್ತಿಯಲ್ಲಿ ಮನವರಿಕೆ ಮಾಡೋದು ಸಿಕ್ಕಾಪಟ್ಟೆ ಇದೆ..” ಎಂದು ಪ್ರೊಮೋದಲ್ಲಿ ಹೇಳಿದ್ದಾರೆ ಸುದೀಪ್. ಇದೀಗ ಈ ಪ್ರೊಮೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು. ಇಂದಿನ ಕಿಚ್ಚನ ಪಂಚಾಯ್ತಿ ಎಪಿಸೋಡ್ ನೋಡಲು ಕಿರುತೆರೆ ವೀಕ್ಷಕರೆಲ್ಲರು ಕಾಯುತ್ತಿದ್ದಾರೆ.