Darshan: ದುಬೈನಲ್ಲಿ ಹುಲಿ ಜೊತೆ ಡಿಬಾಸ್! ವಿಡಿಯೋ ವೈರಲ್!

0 20

Darshan: Kaatera: ನಟ ದರ್ಶನ್ ಅವರು 2023ರ ವರ್ಷ ಕೊನೆಯಾಗುವ ವೇಳೆಗೆ ಕಾಟೇರಾ ಸಿನಿಮಾ ಇಂದ ಅಭಿಮಾನಿಗಳ ಎದುರು ಬಂದಿದ್ದಾರೆ. ಈ ಸಿನಿಮಾ ಫಸ್ಟ್ ಲುಕ್ ಬಿಡುಗಡೆಯಾದ ಸಮಯದಿಂದಲೇ ಅಭಿಮಾನಿಗಳ ಗಮನ ಸೆಳೆದಿತ್ತು. ಎಲ್ಲರೂ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಕಾಟೇರಾ ಸಿನಿಮಾಗೆ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮು ನಾಯಕಿಯಾಗಿದ್ದಾರೆ.

ಅಪ್ಪಟ ಕನ್ನಡ ಮಣ್ಣಿನ ಹಳ್ಳಿ ಸೊಗಡಿನ ಕಾಟೇರಾ ಸಿನಿಮಾ ಸಮಾಜದ ಕೆಲವು ಪ್ರಮುಖವಾದ ತೊಂದರೆಗಳ ಬಗ್ಗೆ ಸಂದೇಶ ಸಾರಿರುವ ಸಿನಿಮಾ. ಡಿಸೆಂಬರ್ 29ರಂದು ಬಿಡುಗಡೆಯಾಗಿ ಕಾಟೇರಾ ಭಾರಿ ಸದ್ದು ಮಾಡುತ್ತಿದೆ. ಮೊದಲ ದಿನ ಥಿಯೇಟರ್ ಗಳು, ಮಾಲ್ ಗಳು, ಎಲ್ಲಾ ಕಡೆ ಕಾಟೇರಾ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ದರ್ಶನ್ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇಂಥ ಕಂಟೆಂಟ್ ಇರುವ ಸಿನಿಮಾಗಳು ಚಿತ್ರರಂಗದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಈ ಸಿನಿಮಾಗೆ ಬೇಡಿಕೆ ಮತ್ತು ಜನಪ್ರಿಯತೆ ಎಷ್ಟಿದೆ ಎಂದರೆ, ಹೊರದೇಶದಲ್ಲಿರುವ ಕನ್ನಡಿಗರು, ತಮ್ಮ ದೇಶದಲ್ಲಿ ಸಿನಿಮಾ ಬಿಡುಗಡೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇಷ್ಟು ಬೇಡಿಕೆ ಇರುವ ಕಾರಣ ದರ್ಶನ್ ಅವರ ಕಾಟೇರಾ ಸಿನಿಮಾ ದುಬೈನಲ್ಲಿ ಬಿಡುಗಡೆ ಆಗಿದೆ. ದುಬೈನಲ್ಲಿ ಸಿನಿಮಾ ಬಿಡುಗಡೆಗೆ ಕಾಟೇರಾ ತಂಡ ಹೋಗಿದ್ದು, ಅಲ್ಲಿ ಕೂಡ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಪ್ರಸ್ತುತ ದುಬೈನಲ್ಲಿ ಸಿನಿಮಾ ಸಕ್ಸಸ್ ಎಂಜಾಯ್ ಮಾಡುತ್ತಿರುವ ಡಿಬಾಸ್ ದರ್ಶನ್ ಅವರು, ಹುಲಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಹೌದು, ದರ್ಶನ್ ಅವರು ಪ್ರಾಣಿಪ್ರಿಯ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಅಲ್ಲಿ ಕೂಡ ಹುಲಿಯನ್ನು ನೇರವಿಸುತ್ತಾ, ಹುಲಿಗೆ ಡಿಬಾಸ್ ಕೇರ್ ಮಾಡುತ್ತಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ದರ್ಶನ್ ಅವರನ್ನು ಈ ರೀತಿ ನೋಡಿ, ಸಂತೋಷಪಡುತ್ತಿದ್ದಾರೆ.

Leave A Reply

Your email address will not be published.