Darshan: ಮಗನ ಜೊತೆಗೆ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸಿ ಡಿಬಾಸ್

0 22

Darshan: ನಟ ದರ್ಶನ್ ಅವರು ಈಗ ಕಾಟೇರಾ ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ನಟ ದರ್ಶನ್ ಅವರ ಸಿನಿಮಾ ಕಾಟೇರಾ ಡಿಸೆಂಬರ್ 29ರಂದು ಬಿಡುಗಡೆಯಾಗಿ ಭಾರಿ ಯಶಸ್ವಿಯಾಗಿದೆ. ಸಿನಿಮಾದಲ್ಲಿರುವ ಕಥೆ ಎಲ್ಲರಿಗೂ ಇಷ್ಟವಾಗಿದ್ದು, ವಿದೇಶದಲ್ಲಿರುವ ದರ್ಶನ್ ಅವರ ಅಭಿಮಾನಿಗಳು ಕೂಡ ತಮ್ಮ ದೇಶದಲ್ಲಿ ಕಾಟೇರಾ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು.

ಅಭಿಮಾನಿಗಳ ಕೋರಿಕೆಯ ಹಾಗೆ ಡಿಬಾಸ್ ದರ್ಶನ್ ಅವರು ಕಾಟೇರಾ ಸಿನಿಮಾವನ್ನು ದುಬೈ ನಲ್ಲಿ ಬಿಡುಗಡೆ ಮಾಡಿದ್ದು, ಕೆಲ ದಿನಗಳಲ್ಲಿ ಬೇರೆ ದೇಶಗಳಲ್ಲಿ ಕೂಡ ಕಾಟೇರಾ ಬಿಡುಗಡೆ ಆಗಲಿದೆ. ಪ್ರಸ್ತುತ ದರ್ಶನ್ ಅವರು ಕಾಟೇರಾ ಸಕ್ಸಸ್ ಎಂಜಾಯ್ ಮಾಡುವುದರ ಜೊತೆಗೆ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬದ ಆಚರಣೆ ಮಾಡಿದ್ದಾರೆ..

ದರ್ಶನ್ ಅವರು ಹಾಗೂ ಮಗ ವಿನಿಷ್ ಇಬ್ಬರು ಸಹ ಪಂಚೆ ಶರ್ಟ್ ಧರಿಸಿ, ತಮ್ಮ ಫಾರ್ಮ್ ಹೌಸ್ ನಲ್ಲಿ ಫ್ಯಾಮಿಲಿ ಫ್ರೆಂಡ್ಸ್ ಹಾಗೂ ತಾವು ಸಾಕಿರುವ ಪ್ರಾಣಿಗಳ ಜೊತೆಗೆ ಹಬ್ಬದ ಆಚರಣೆ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..

Leave A Reply

Your email address will not be published.