Darshan: ನಟ ದರ್ಶನ್ ಅವರ ಮೇಲೆ ಮತ್ತೊಂದು ಆರೋಪ! ಅಷ್ಟಕ್ಕೂ ಏನಾಗಿದೆ ಗೊತ್ತಾ?

0 29

Darshan: ನಟ ದರ್ಶನ್ ಅವರು ಕನ್ನಡದ ಸ್ಟಾರ್ ಹೀರೋ, ಇವರ ಸಿನಿಮಾಗಳು ಎಷ್ಟು ಸದ್ದು ಮಾಡುತ್ತದೆಯೋ, ಅದೇ ರೀತಿ ಇವರ ಬಗ್ಗೆ ವಿವಾದಗಳು ಕೂಡ ಸದ್ದು ಮಾಡುತ್ತದೆ. ಇದೀಗ ನಟ ದರ್ಶನ್ ಅವರ ಬಗ್ಗೆ ಹೊಸದೊಂದು ಅಪವಾದ ಕೇಳಿ ಬಂದಿದ್ದು, ಅವರ ವಿರುದ್ಧ ಮತ್ತೊಮ್ಮೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ. ಅಷ್ಟಕ್ಕೂ ಏನಿದು ಆರೋಪ ಗೊತ್ತಾ?

ಇದು ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿನ ಜಗಳ ಆಗಿದೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ರಾಬರ್ಟ್ ಸಿನಿಮಾ ತೆರಕಂಡು ಸೂಪರ್ ಸಕ್ಸಸ್ ಆಗಿತ್ತು. ಆದರೆ ಕೆಲ ದಿನಗಳಿಂದ ಕೋಲ್ಡ್ ವಾರ್ ನಡೆಯುತ್ತಲೇ ಇದೆ. ಇತ್ತೀಚೆಗೆ ನಡೆದ ಒಂದು ಇಂಟರ್ವ್ಯೂನಲ್ಲಿ ಉಮಾಪತಿ ಅವರು ಕಾಟೇರಾ ಸಿನಿಮಾ ಬಗ್ಗೆ ಒಂದು ಹೇಳಿಕೆ ನೀಡಿದ್ದರು. ಕಾಟೇರಾ ಸಿನಿಮಾದ ಕಥೆ ಬರೆಸಿದ್ದು, ಟೈಟಲ್ ಕೊಟ್ಟಿದ್ದು ನಾನು ಎಂದು ಹೇಳಿದ್ದರು.

ಈಗ ಕಾಟೇರಾ ಸಿನಿಮಾ 50 ದಿನಗಳ ಪ್ರದರ್ಶನ ಕಂಡಿದ್ದು, ಸಿನಿಮಾತಂಡ ಇದಕ್ಕಾಗಿ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು, ಇದರಲ್ಲಿ ನಟ ದರ್ಶನ್ ಅವರು ಮಾತನಾಡಿ ಉಪಾಮತಿ ಅವರಿಗೆ ಪ್ರತ್ಯುತ್ತರ ಕೊಟ್ಟಿದ್ದರು, ಕೆಲವರು ಕಾಟೇರಾ ಕಥೆ, ಟೈಟಲ್ ಕೊಟ್ಟಿದ್ದು ನಾನೇ ಅಂತ ಹೇಳ್ತಿದ್ದಾರೆ. ಅಯ್ಯೋ ತಗಡೆ ರಾಬರ್ಟ್ ಕಥೆ, ಟೈಟಲ್ ನ ನಿನಗೆ ಕೊಟ್ಟಿದ್ದೆ ನಾನು ಅಂತ ಹೇಳಿದ್ದಾರೆ.

ದರ್ಶನ್ ಅವರ ಈ ಮಾತುಗಳು ವೈರಲ್ ಆಗಿದ್ದವು, ಹಾಗೆಯೇ ಉಮಾಪತಿ ಅವರು ಕೂಡ ದರ್ಶನ್ ಅವರಿಗೆ ಮಾಧ್ಯಮಗಳ ಮೂಲಕವೇ ಟಾಂಗ್ ಕೊಟ್ಟು ನಾನು ಹೆದರುವ ಮಗ ಅಲ್ಲ ಎಂದಿದ್ದರು. ಇದೀಗ ಈ ಮಾತುಗಳು ವೈರಲ್ ಆಗಿದ್ದು, ತಗಡು ಎನ್ನುವ ಪದ ಬಳಸಿದ್ದಕ್ಕೆ, ಬೆದರಿಕೆ ಹಾಕಿದ್ದಕ್ಕೆ ನಟ ದರ್ಶನ್ ಅವರ ವಿರುದ್ಧ ದೂರು ದಾಖಲಾಗಿದೆ.

Leave A Reply

Your email address will not be published.