Enilla Enilla Singer: ವೈರಲ್ ಆಗಿರೋ ಏನಿಲ್ಲ ಏನಿಲ್ಲ ಹಾಡಿನ ಸಿಂಗರ್ ಯಾರು ಗೊತ್ತಾ?

0 30

Enilla Enilla Singer: ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕೆಲವು ಹಾಡುಗಳು ವೈರಲ್ ಆಗುತ್ತದೆ. ಇತ್ತೀಚಿಗೆ ಅಂತೂ ಹಳೆಯ ಹಾಡುಗಳೇ ಜಾಸ್ತಿ ವೈರಲ್ ಆಗಿದೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಹಾಡು 20 ವರ್ಷಗಳ ಹಿಂದೆ ತೆರೆಕಂಡ ಉಪೇಂದ್ರ ಸಿನಿಮಾದ ಹಾಡು, ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಹಾಡಿನ ಓ ನಲ್ಲ, ನೀನಲ್ಲ ಕರೀಮಣಿ ಮಾಲೀಕ ನೀನಲ್ಲ, ಕರೀಮಣಿ ಮಾಲೀಕ ನೀ ನಲ್ಲ.. ಎನ್ನುವ ಸಾಲುಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲ್ಲಾ ಸೆಲೆಬ್ರಿಟಿಗಳು ಕೂಡ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಅಷ್ಟು ವರ್ಷಗಳ ಹಿಂದೆ ಉಪೇಂದ್ರ ಅವರು ಬರೆದಿದ್ದ ಲಿರಿಕ್ಸ್ ಗೆ ಈಗ ಹೆಚ್ಚು ಪ್ರಮುಖ್ಯತೆ ಬಂದಿದೆ ಎಂದು ಹೇಳಿದರು ಕೂಡ ತಪ್ಪಾಗುವುದಿಲ್ಲ. ಈ ಹಾಡನ್ನು ಕೇಳಿದವರಿಗೆ ಒಂದು ಪ್ರಶ್ನೆ ಕಾಡಿರುತ್ತದೆ..

ಅಷ್ಟಕ್ಕೂ ಏನಿಲ್ಲ ಏನಿಲ್ಲ ಹಾಡನ್ನ ಹಾಡಿದ್ದು ಯಾರು? ಆ ಸಿಂಗರ್ ಈಗ ಎಲ್ಲಿದ್ದಾರೆ? ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರಾ? ಈ ಎಲ್ಲಾ ಪ್ರಶ್ನೆಗಳು ಜನರಲಿತ್ತು, ಅದಕ್ಕೀಗ ಉತ್ತರ ಸಿಕ್ಕಿದೆ. ಹೌದು, ಒರಿಜಿನಲ್ ಆಗಿ ಏನಿಲ್ಲ ಏನಿಲ್ಲ ಹಾಡನ್ನು ಹಾಡಿರುವ ಸಿಂಗರ್ ಅವರೇ ಈಗ ಈ ಹಾಡಿನ ಕವರ್ ವರ್ಷನ್ ಹಾಡಿ, ಅದನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆಕೆ ನಿಜಕ್ಕೂ ಯಾರು ಗೊತ್ತಾ?

ಏನಿಲ್ಲ ಏನಿಲ್ಲ ಹಾಡನ್ನು ಹಾಡಿರುವ ಸಿಂಗರ್ ಹೆಸರು ರಾಧಿಕಾ ರಾವ್. ಈಗ ಇವರು ಸಿಡ್ನಿಯಲ್ಲಿದ್ದಾರೆ, ಇಷ್ಟು ವರ್ಷಗಳ ನಂತರ ತಮ್ಮ ಹಾಡು ವೈರಲ್ ಆಗಿರುವುದನ್ನು ನೋಡಿ, ರಾಧಿಕಾ ರಾವ್ ಅವರು ತಮ್ಮದೇ ಆದ ಹೊಸ ಟಚ್ ನಲ್ಲಿ ಏನಿಲ್ಲ ಏನಿಲ್ಲ ಹಾಡಿನ ಕವರ್ ವರ್ಷನ್ ಹಾಡಿ, ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ಕವರ್ ವರ್ಷನ್ ಹಾಡು ಕೂಡ ವೈರಲ್ ಆಗಿದ್ದು, ಈ ಹಾಡನ್ನು ಹಾಡಿದ್ದು ಯಾರು ಎಂದು ಕೊನೆಗೂ ಗೊತ್ತಾಗಿದೆ..

Leave A Reply

Your email address will not be published.