Tanisha Kuppanda: ಮೇಕಪ್ ಗಾಗಿ ಬಿಗ್ ಬಾಸ್ ತನಿಷಾ ಎಷ್ಟು ಖರ್ಚು ಮಾಡುತ್ತಾರಂತೆ ಗೊತ್ತಾ?

0 43

Tanisha Kuppanda: ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಎಂದೇ ಫೇಮಸ್ ಆಗಿರುವವರು ನಟಿ ತನಿಷಾ ಕುಪ್ಪಂಡ. ಕನ್ನಡ ಕಿರುತೆರೆಯಲ್ಲಿ ಮಂಗಳಗೌರಿ ಮದುವೆ ಧಾರವಾಹಿಯಲ್ಲಿ ರಾಜೀವನ ಅತ್ತಿಗೆಯ ಪಾತ್ರದಲ್ಲಿ ನಟಿಸಿದ್ದರು ತನಿಷಾ. ಇದು ಖಡಕ್ ವಿಲ್ಲನ್ ಪಾತ್ರ ಆಗಿತ್ತು. ಈ ಪಾತ್ರ ತನಿಷಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು ಎಂದರೆ ತಪ್ಪಲ್ಲ. ಇವರು ಬಿಗ್ ಬಾಸ್ ಮನೆಯಲ್ಲಿ ಶೈನ್ ಆಗಿದ್ದಾರೆ ಎಂದರೆ ತಪ್ಪಲ್ಲ.

ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನದಿಂದಲೂ ತನಿಷಾ ಅವರು ತಮ್ಮ ನೇರ ನಡೆ, ಖಡಕ್ ಮಾತುಗಳಿಂದಲೇ ಹೆಸರುವಾಸಿ ಆಗಿದ್ದರು. ವಿನಯ್ ಅವರಿಗೆ ಸರಿಯಾಗಿ ಠಕ್ಕರ್ ಕೊಡುತ್ತಿದ್ದ ಸ್ಪರ್ಧಿ ತನಿಷಾ ಎಂದರೆ ತಪ್ಪಲ್ಲ. ಜೋರಾದ ಮಾತುಗಳಿಂದ ಮನೆಯಲ್ಲಿ ಹೆಚ್ಚು ಸೌಂಡ್ ಮಾಡಿದ್ದರು ತನಿಷಾ. ಹಾಗೆಯೇ ಟಾಸ್ಕ್ ಗಳಲ್ಲಿ ಕೂಡ ಉತ್ತಮವಾಗಿ ಪರ್ಫಾರ್ಮ್ ಮಾಡಿದ್ದರು. ಫಿನಾಲೆ ವರೆಗು ಬಿಗ್ ಬಾಸ್ ಮನೆಯಲ್ಲಿ ಪ್ರಯಾಣ ಮಾಡಿದ್ದರು.

ತನಿಷಾ ಮತ್ತು ಕಾರ್ತಿಕ್ ಫ್ರೆಂಡ್ಶಿಪ್ ಕೂಡ ಜನರಿಗೆ ತುಂಬಾ ಇಷ್ಟವಾಗಿತ್ತು. ಆದರೆ ಕೊನೆಯ ಹಂತದಲ್ಲಿ ಇವರ ಫ್ರೆಂಡ್ಶಿಪ್ ನಲ್ಲಿ ಬಿರುಕು ಮೂಡಿದ್ದು ಕೂಡ ನಿಜ, ಆದರೆ ತನಿಷಾ ಅವರು ಹೊರಬಂದಮೇಲೆ ಎಲ್ಲರೊಡನೆ ಚೆನ್ನಾಗಿಯೇ ಇದ್ದಾರೆ. ವರ್ತೂರ್ ಸಂತೋಷ್ ಅವರ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದರು, ಕಾರ್ತಿಕ್ ಅವರ ತಂಗಿ ಮಗುವನ್ನು ಭೇಟಿ ಮಾಡಿ ಬಂದಿದ್ದಾರೆ. ಹೀಗೆ ಬಿಗ್ ಬಾಸ್ ಬಳಿಕ ಬ್ಯುಸಿ ಆಗಿದ್ದಾರೆ ತನಿಷಾ.

ಆದರೆ ತನಿಷಾ ಅವರಿಗೆ ಮೇಕಪ್ ಅಂದ್ರೆ ತುಂಬಾ ಇಷ್ಟ ಎಂದು ಗೊತ್ತಿದೆ. ಮೇಕಪ್ ಬಗ್ಗೆ ಮಾತನಾಡಿರುವ ತನಿಷಾ ಅವರು ಮೊದಲೆಲ್ಲಾ ಮೇಕಪ್ ಬಗ್ಗೆ ಸರಿಯಾಗಿ ಗೊತ್ತಿಲ್ಲದೇ, ಹೆಚ್ಚು ಪ್ರಾಡಕ್ಟ್ಸ್ ಯೂಸ್ ಮಾಡುತ್ತಾ, ಮೇಕಪ್ ಗಾಗಿ ಹೆಚ್ಚು ದುಡ್ಡು ಖರ್ಚು ಮಾಡುತ್ತಿದ್ದರಂತೆ. ಆದರೆ ಈಗ ಮೇಕಪ್ ಬಗ್ಗೆ ತಿಳಿದು, ಕಡಿಮೆ ಖರ್ಚು ಮಾಡುತ್ತಿದ್ದಾರಂತೆ. ಮೇಕಪ್ ಅಂದ್ರೆ ಈಗ ಅಷ್ಟೊಂದು ಇಷ್ಟವಿಲ್ಲ ಎನ್ನುತ್ತಾರೆ ತನಿಶಾ..

ಜೊತೆಗೆ ಮೇಕಪ್ ವಿಚಾರಕ್ಕೆ ಮಾತನಾಡುವ ಇವರು, ಮೇಕಪ್ ಗಿಂತ ಸ್ಕಿನ್ ಕೇರ್ ತೆಗೆದುಕೊಳ್ಳುವುದು ಒಳ್ಳೆಯದು ಎನ್ನುವುದು ಅರ್ಥವಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ತನಿಶಾ ಅವರು ಮೇಕಪ್ ಗಾಗಿ ಭಾರಿ ದುಡ್ಡು ಖರ್ಚು ಮಾಡಿರುವುದಂತೂ ಖಂಡಿತ ಆಗಿದೆ.

Leave A Reply

Your email address will not be published.